ಕನ್ನಡ ವಾರ್ತೆಗಳು

ಬೀಡಿ ಕಾರ್ಮಿಕರು ಮತ್ತು ಉದ್ದಿಮೆದಾರರಿಂದ ಬೃಹತ್ ಪ್ರತಿಭಟನೆ.

Pinterest LinkedIn Tumblr

beedi_worker_protst_1

ಮಂಗಳೂರು,ಮಾರ್ಚ್.18 : ತಂಬಾಕು ಉತ್ಪನ್ನಗಳ ಬಳಕೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ನೂತನ ನಿಯಮಾವಳಿಯನ್ನು ವಿರೋಧಿಸಿ ನೂರಾರು ಬೀಡಿ ಕಾರ್ಮಿಕರು ಮತ್ತು ಉದ್ದಿಮೆದಾರರು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಪ್ರಸನ್ನ ಕುಮಾರ್ ಮಾತನಾಡಿ, ದೇಶದಲ್ಲಿರುವ ಲಕ್ಷಾಂತರ ಬೀಡಿ ಕಾರ್ಮಿಕರ ಹಿತ ರಕ್ಷಣೆ ಮಾಡದೆ ಸರಕಾರ ಏಕಾಏಕಿ ಕಾಯಿದೆಗೆ ತಿದ್ದುಪಡಿ ತಂದು ಕುಟುಂಬಗಳನ್ನು ಬೀದಿಗೆ ತರಲು ಮುಂದಾಗಿದೆ. ನೂತನ ಕಾಯಿದೆ ಜಾರಿಗೆ ಬಂದಲ್ಲಿ ತಂಬಾಕು ಉದ್ಯಮಗಳು ಸಂಕಷ್ಟ ಅನುಭವಿಸಲಿದೆ. ಉದ್ದಿಮೆಗಳು ಮುಚ್ಚಿದರೆ ಲಕ್ಷಾಂತರ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ತಿಳಿಸಿದರು.

beedi_worker_protst_2 beedi_worker_protst_3 beedi_worker_protst_4 beedi_worker_protst_5 beedi_worker_protst_6 beedi_worker_protst_7

ನೂತನ ಕಾಯಿದೆ ಪ್ರಕಾರ ಬೀಡಿ ಕಾರ್ಮಿಕರಿಗೆ ಮೊದಲು ಬದಲೀ ಆರ್ಥಿಕ ವ್ಯವಸ್ಥೆ ಕಲ್ಪಿಸಬೇಕೆಂಬ ನಿಯಮವಿದೆ. ಈ ನಿಯಮದಂತೆ ಕೇಂದ್ರ ಸರಕಾರ ಬೀಡಿ ಕಾರ್ಮಿಕರಿಗೆ ಮೊದಲು ಆರ್ಥಿಕ ಭದ್ರತೆ ಒದಗಿಸಲಿ. ಆ ಬಳಿಕ ನಿಯಮ ರೂಪಿಸಲಿ. ಆದರೆ ಇದನ್ನು ಬಿಟ್ಟು ಕೇಂದ್ರ ಸರಕಾರ ತರಾತುರಿಯಲ್ಲಿ ನಿಯಮ ಜಾರಿಗೆ ಮುಂದಾಗಿದೆ ಎಂದು ಆರೋಪಿಸಿದರು.

beedi_worker_protst_8 beedi_worker_protst_9 beedi_worker_protst_10 beedi_worker_protst_11 beedi_worker_protst_12 beedi_worker_protst_13 beedi_worker_protst_14

ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜೆ ಮಾತನಾಡಿ, ಬೀಡಿ ಕಾರ್ಮಿಕರ ವಿರೋಧಿಯಾಗಿರುವ ನೂತನ ಕಾಯಿದೆಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಲು ಬಿಡುವುದಿಲ್ಲ. ಎಲ್ಲ ಕಾರ್ಮಿಕರು, ಉದ್ದಿಮೆದಾರರು ಸಂಘಟಿತರಾಗಿ ಇದರ ವಿರುದ್ಧ ಹೋರಾಟ ನಡೆಸುವಂತೆ ತಿಳಿಸಿದರು.

ಸಿಐಟಿಯು ಮುಖಂಡ ಕೆ. ಆರ್. ಶ್ರೀಯಾನ್ ಪ್ರತಿಭಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಐಟಿಯುಸಿ ಸಂಘಟನೆಯ ಎಸ್.ಕೆ. ಬೀಡಿ ವರ್ಕರ್ಸ್ ಫೆಡರೇಶನ್‌ನ ಅಧ್ಯಕ್ಷ ಪಿ.ಸಂಜೀವ, ಸಿಐಟಿಯು ಎಸ್.ಕೆ.ಬೀಡಿ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಬಿ.ಎಂ.ಭಟ್, ಪ್ರಧಾನ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ, ಮುಖಂಡರಾದ ವಸಂತ ಆಚಾರಿ, ಯು.ಬಿ.ಲೋಕಯ್ಯ, ಎಚ್.ವಿ.ರಾವ್. ಪದ್ಮಾವತಿ ಶೆಟ್ಟಿ, ಸುರೇಶ್ ಕುಮಾರ್, ರಾಮಣ್ಣ ರೈ, ಸರಸ್ವತಿ ಕಡೇಶ್ವಾಲ್ಯ, ರಮಣಿ ಮೂಡುಬಿದಿರೆ, ಎಂ.ಕರುಣಾಕರ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನಾ ಸಭೆಗಿಂತ ಮೊದಲು ನಗರದ ಪುರಭವನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೀಡಿ ಕಾರ್ಮಿಕರು ಹಾಗೂ ಉದ್ದಿಮೆದಾರರು ಪ್ರತಿಭಟನಾ ಜಾಥಾ ನಡೆಸಿದರು.

Write A Comment