ಕನ್ನಡ ವಾರ್ತೆಗಳು

ಉಡುಪಿ ಜಿಲ್ಲೆಯಲ್ಲಿ ಇನ್ನು ಸಿಗರೇಟ್, ಗುಟ್ಕಾ ಸಿಗೊಲ್ಲ..! ಕುಂದಾಪುರದಲ್ಲಿ ಅಧಿಕಾರಿಗಳಿಂದ ಸಿಗರೇಟ್-ಗುಟ್ಕಾ ಅಂಗಡಿಗೆ ದಾಳಿ- ದಂಡ..!

Pinterest LinkedIn Tumblr

* ಗದಗದಲ್ಲಿ ಈಗಾಗಲೇ ಕೊಟ್ಟಾ ಕಾಯ್ದೆ ಅನುಷ್ಟಾನಕ್ಕೆ, 2 ನೇ ಜಿಲ್ಲೆ ಉಡುಪಿ

* ಕಾಯ್ದೆ ಉಲ್ಲಂಘಿಸಿದ್ರೇ ದಂಡದ ಜೊತೆಗೆ ಜೈಲು ವಾಸ ಗ್ಯಾರೆಂಟಿ

* ತಂಬಾಕು ಸೇವನೆಯಿಂದ ರಾಜ್ಯದಲ್ಲಿ ವರ್ಷಕ್ಕೆ 65 ಸಾವಿರ ಸಾವು

ಉಡುಪಿ: ಜೀವಹಾನಿಕಾರಕವಾದ ತಂಬಾಕುಯುಕ್ತ ಮಾದಕ ಪದಾರ್ಥಗಳ ಸೇವನೆ ಹಾಗೂ ಮಾರಾಟವನ್ನು ಕಾನೂನು ವ್ಯಾಪ್ತಿಯ ಒಳಗೆ ನಿರ್ಭಂದಿಸಲು ಸರ್ಕಾರ ಕೊಟ್ಪಾ ಕಾಯಿದೆಯನ್ನು ಜಾರಿಗೆ ತಂದಿದ್ದು, ಇದರ ಕಟ್ಟು ನಿಟ್ಟಿನ ಅನುಷ್ಠಾನಕ್ಕೆ ಸರ್ಕಾರ ಬದ್ದವಾಗಿದೆ ಎಂದು ಕೊಟ್ಪಾ ಕಾಯಿದೆಯ ಅನುಷ್ಠಾನ ಕಾರ್‍ಯಪಡೆಯ ರಾಜ್ಯ ನೋಡಲ್ ಅಧಿಕಾರಿ ಡಾ.ಜೋನ್ ಹೇಳಿದ್ದಾರೆ.

ಕುಂದಾಪುರ ತಾಲ್ಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಕುಂದಾಪುರ ಪೊಲೀಸ್ ಉಪವಿಭಾಗದ ವತಿಯಿಂದ ಆಯೋಜಿಸಲಾದ ’ಕೊಟ್ಪಾ ಕಾಯಿದೆ ಅನುಷ್ಠಾನದ ವಿಶೇಷ ಕಾರ್ಯಗಾರ’ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾಹಿತಿ ನೀಡಿದರು.

Udupi_Cotpa_Act (11)

Udupi_Cotpa_Act (1) Udupi_Cotpa_Act (2) Udupi_Cotpa_Act (3) Udupi_Cotpa_Act Udupi_Cotpa_Act (9) Udupi_Cotpa_Act (18) Udupi_Cotpa_Act (16) Udupi_Cotpa_Act (15)

ತಂಬಾಕು ಜೀವ ತೆಗೆಯುತ್ತೆ: ತಂಬಾಕಿನ ಉತ್ಪನ್ನಗಳಾದ ಸಿಗರೇಟು, ಬೀಡಾ, ಗುಟ್ಕಾ, ಬೀಡಿ ಮುಂತಾದ ವಸ್ತುಗಳ ಸೆವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕ್ಯಾನ್ಸರ್, ಟಿ.ಬಿ, ಅಸ್ತಮ ಹಾಗೂ ನರ ಸಂಬಂಧಿತ ಕಾಯಿಲೆಗಳಿಗೆ ನೇರ ರಹದಾರಿ ನೀಡಿದಂತಾಗುತ್ತದೆ. ಧೂಮಪಾನ ಸೇವನೆಯಿಂದ ನೇರ ಹಾಗೂ ಪರೋಕ್ಷ ಪರಿಣಾಮಗಳು ಬೀರುತ್ತದೆ. ಸಿಗರೇಟ್ ಸೇವನೆ ಮಾಡುವವರಿಗೆ ನಿಕೋಟಿನ್ ಉಂಟು ಮಾಡುವ ಪರಿಣಾಮಗಳು ಸೇದದೆ ಇದ್ದವರಿಗೂ ಆಗುತ್ತದೆ. ತಂಬಾಕು ಉತ್ಪನ್ನಗಳ ವ್ಯಸನಿಗಳಾದವರು ಚಟವನ್ನು ಬಿಡುವುದೊಂದೆ ಪರಿಹಾರ ಮಾರ್ಗ. ಇಲ್ಲದೆ ಇದ್ದರೆ ಸಾವಿನ ದಿನಗಳನ್ನು ಲೆಕ್ಕ ಹಾಕ ಬಹುದು ಎಂದು ಅವರು ಎಚ್ಚರಿಸಿದರು.

ಏನಿದು ಕೊಟ್ಟಾ ಕಾಯ್ದೆ: ಹಲವಷ್ಟು ಸಾಕ್ಷ್ಯ ಚಿತ್ರಗಳೊಂದಿಗೆ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಡಾ.ಜೋನ್ ಅವರು ಒಂದು 3-4 ಸಿಗರೇಟ್ ಸೇವನೆಯಿಂದ ಆಗುವ ಹಾನಿ ಕೇವಲ 1 ಬಿಡಿಯಿಂದ ಆಗುತ್ತದೆ. ಕರ್ನಾಟಕದಲ್ಲಿ ಸುಮಾರು 60,000 ಜನ ತಂಬಾಕು ಸೇವನೆಯ ಕಾರಣದಿಂದ ಸಾವಿಗೀಡಾಗುತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಪದಾರ್ಥಗಳ ಸೇವನೆಯನ್ನು ನಿಷೇಧಗೊಳಿಸಿ ಸರ್ಕಾರ ಈಗಾಗಲೆ ಕಾಯಿದೆ ಜಾರಿಗೆ ತಂದಿದೆ. 2-3 ಜನ ಒಟ್ಟಿಗೆ ನಿಂತು ಮಾತನಾಡುತ್ತಿದ್ದಾರೆ ಎಂದಾದರೂ ಅದು ಸಾರ್ವಜನಿಕ ಸ್ಥಳವಾಗುತ್ತದೆ ಎಂದು ಕಾಯಿದೆಯ ವ್ಯಾಪ್ತಿಯನ್ನು ವಿವರಿಸಿದರು.

ಸರ್ಕಾರಿ ಕಚೇರಿಯ ಆವರಣದ ಒಳಗೆ, ಶಿಕ್ಷಣ ಸಂಸ್ಥೆಗಳ ಆವರಣದ ಒಳಗೆ ಹಾಗೂ ಸಂಸ್ಥೆಗಳ ಆವರಣದ ಒಳಗೆ ಕಾಯಿದೆಯ ಉಲ್ಲಂಘನೆ ಕಂಡು ಬಂದಲ್ಲಿ ನೇರವಾಗಿ ಸಂಬಂಧಿಸಿದ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಸೇವನೆ ಮಾತ್ರವಲ್ಲದೆ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ವ್ಯವಹಾರ ನಡೆಸುವ ಸ್ಥಳಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಕಾಯಿದೆಯ ಅಂಶಗಳನ್ನು ಉಲ್ಲೇಖಿಸುವ ಫಲಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ. ಶಿಕ್ಷಣ ಸಂಸ್ಥೆಗಳ ಸುತ್ತ-ಮುತ್ತಲ 100 ಮೀಟರ್ ವ್ಯಾಪ್ತಿಯ ಒಳಗೆ ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ. ಇಲ್ಲಿ ಮಾರಾಟ ಕಂಡು ಬಂದಲ್ಲಿ ಸಂಸ್ಥಗಳ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲು ಕಾಯಿದೆಯಲ್ಲಿ ಅವಕಾಶವಿದೆ.

Udupi_Cotpa_Act (19) Udupi_Cotpa_Act (14) Udupi_Cotpa_Act (13) Udupi_Cotpa_Act (10) Udupi_Cotpa_Act (8) Udupi_Cotpa_Act (12) Udupi_Cotpa_Act (5) Udupi_Cotpa_Act (7) Udupi_Cotpa_Act (4) Udupi_Cotpa_Act (6)

 

ಬಾರ್‌ಗಳಲ್ಲಿ ಮಾರೋಕಿಲ್ಲ: ಬಾರ್‌ಗಳಲ್ಲಿ ಹಾಗೂ ವಸತಿ ಗೃಹಗಳಲ್ಲಿ ತಂಬಾಕು ಉತ್ಪನ್ನಗಳನ್ನು ಬಳಸಲು ಪೂರಕಾಗಿರುವ ಬೆಂಕಿ ಪಟ್ಟಣ, ಬೂದಿ ಟ್ರೇ, ಲೈಟರ್ ಮುಂತಾದ ವಸ್ತುಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಕಾಯಿದೆಯಲ್ಲಿ ನಮೂದಾಗಿರುವ ಅಳತೆಯಲ್ಲಿಯೇ ಸೂಚನ ಹಾಗೂ ಮಾಹಿತಿ ಫಲಕಗಳನ್ನು ಅಳವಡಿಸಬೇಕು ಎನ್ನುವ ಅಂಶಗಳು ಇದೆ ಎಂದು ವಿವರಿಸಿದರು.

ಕಾರ್ಯಾಗಾರದಲ್ಲಿ ಮಾತನಾಡಿದ ಡಿವೈ‌ಎಸ್‌ಪಿ ಮಂಜುನಾಥ ಶೆಟ್ಟಿಯವರು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೊಟ್ಪಾ ಕಾಯಿದೆಯನ್ನು ಅನುಷ್ಠಾನಗೊಳಿಸಲು ಇಲಾಖೆ ಬದ್ದತೆಯನ್ನು ಹೊಂದಿದೆ. ಮಾರ್ಚ್ ೩೧ ರ ಒಳಗೆ ಕಚೇರಿ, ಶಿಕ್ಷಣ ಸಂಸ್ಥೆ ಹಾಗೂ ಸಾರ್ವಜನಿಕ ಮಾರಾಟ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲು ಅವಕಾಶ ನೀಡಲಾಗಿದೆ. ಉತ್ಪನ್ನಗಳ ಮಾರಾಟವನ್ನು ಉತ್ತೇಜಿಸುವ ಜಾಹಿರಾತು ಫಲಗಳ ಅಳವಡಿಕೆಯನ್ನು ನಿಷೇಧಿಸಲಾಗಿದೆ. ಅವಧಿಯ ನಂತರ ಕಾಯಿದೆ ಉಲ್ಲಂಘಿಸುವವರ ವಿರುದ್ದ ನಿರ್ಧಾಕ್ಷೀಣ್ಯ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ತಹಸೀಲ್ದಾರ್ ಗಾಯತ್ರಿ ನಾಯಕ್, ಸರ್ಕಲ್ ಇನ್ಸ್‌ಪೆಕ್ಟರ್‌ಗಳಾದ ದಿವಾಕರ ಪಿ.ಎಂ, ಸುದರ್ಶನ್, ಜಿಲ್ಲಾ ಹೋಂ ಗಾರ್ಡ್ ಸೆಕಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ, ತಾ.ಪಂ ಅಧ್ಯಕ್ಷ ಭಾಸ್ಕರ್ ಬಿಲ್ಲವ ಕೋಣಿ, ಪುರಸಭಾ ಅಧ್ಯಕ್ಷೆ ಕಲಾವತಿ ಯು.ಎಸ್, ಜಿ.ಪಂ ಸದಸ್ಯ ಗಣಪತಿ ಶ್ರೀಯಾನ್ ಮುಂತಾದವರು ಇದ್ದರು.

ಅಂಗಡಿ,ಹೋಟೇಲು ರೇಡ್: ಡಿವೈ‌ಎಸ್‌ಪಿ ಮಂಜುನಾಥ ಶೆಟ್ಟಿ ಹಾಗೂ ಕುಂದಾಪುರ ವೃತ್ತನಿರೀಕ್ಷಕ ದಿವಾಕರ ಪಿ.ಎಂ. ನೇತೃತ್ವದಲ್ಲಿ ಅಂಗಡಿಗಳಿಗೆ ದಾಳಿ ಕಾರ್ಯಾಗರವನ್ನು ಮುಗಿಸಿದ ಅಧಿಕಾರಿಗಳ ತಂಡ ನಗರದ ವಿವಿಧ ಕಡೆಗಳಲ್ಲಿ ದಾಳಿ ನಡೆಸಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡರಲ್ಲದೆ, ಕಾಯಿದೆ ಉಲ್ಲಂಘನೆ ಮಾಡಿದವರಿಂದ ದಂಡ ವಸೂಲು ಮಾಡಿ ಎಚ್ಚರಿಕೆಯ ನೋಟಿಸನ್ನು ನೀಡಿದರು. ಅಲ್ಲದೇ ಎಚ್ಚರಿಕೆ ವಹಿಸಬೇಕಾದ ಅಗತ್ಯತೆಗಳನ್ನು ವಿವರಿಸಿದರು.

ರಾತ್ರಿ 7.30ರವೆರಗೂ ಈ ದಾಳಿ ಕಾರ್ಯಚರಣೆ ನಡೆಯಿತು.

Write A Comment