ಬೆಳ್ತಂಗಡಿ,ಮಾರ್ಚ್.17 : ಬಸ್ಸಿನಲ್ಲಿ ಯುವತಿ ಜತೆ ಅಸಭ್ಯವಾಗಿ ವರ್ತಿಸಿದ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಸೋಮವಾರ ನಡೆದಿದೆ. ಕಾಸರಗೋಡಿನ ಯುವತಿ (19) ತನ್ನ ತಾಯಿ ಜೊತೆ ಮಂಗಳೂರಿನಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದಾಗ ಪಕ್ಕದ ಸೀಟ್ನಲ್ಲಿ ಕುಳಿತಿದ್ದ ಯುವಕ, ಮಂಗಳೂರಿನ ಕೋಟೆಕಾರ್ ನಿವಾಸಿ ಕಾರ್ತಿಕ್ (21) ಎಂಬವನು ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದು, ಮಹಿಳೆಯರಿಗೆ ಮೀಸಲಾದ ಸೀಟ್ನಲ್ಲಿ ಕುಳಿತಿದ್ದ ಕಾರ್ತಿಕ್ ಮೊಬೈಲ್ ನಲ್ಲಿ ಸಂದೇಶ ಟೈಪ್ ಮಾಡಿ ಯುವತಿಗೆ ತೋರಿಸುತ್ತಿದ್ದು. ತನ್ನ ಜತೆ ಇಳಿಯುವಂತೆ ಸೂಚನೆ ನೀಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಈ ವೇಳೆ ಗುರುವಾಯನಕೆರೆಯಲ್ಲಿ ಇಳಿದ ಯುವತಿ ಅಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ . ಈ ಮಧ್ಯೆ ಯುವಕನ ವರ್ತನೆಗೆ ಸಾರ್ವಜನಿಕರು ಶಾಸ್ತಿ ಕೂಡಾ ಮಾಡಿದ್ದಾರೆ. ಯುವಕನನ್ನು ಬಂಧಿಸಿದ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಧೀಶರೆದುರು ಹಾಜರುಪಡಿಸಲಾಗಿದೆ.
ಯುವತಿ ಭಿನ್ನ ಕೋಮಿಗೆ ಸೇರಿದವಳೆನ್ನುವುದೂ ಯುವಕನ ಅಸಭ್ಯ ನಡತೆಗೆ ಒಂದು ಕಾರಣವಾಗಿರಬಹುದೆಂದು ಶಂಕಿಸಿದ ಸಾರ್ವಜನಿಕರು ಧರ್ಮದೇಟನ್ನು ಚೆನ್ನಾಗಿಯೇ ನೀಡಿದ್ದಾರೆ ಎಂಬುದು ಗಮನಾರ್ಹವಾಗಿದೆ.
