ಕುಂದಾಪುರ: ತಾಲೂಕಿನ ಹಂಗಳೂರು ನಿವಾಸಿ ಆರ್ಚಿ ಬರೆಟ್ಟೊ ಎಂಬವರ ಸಹೋದರ, ದಿ.ಪಾಸ್ಕಲ್ ಬರೆಟ್ಟೊರವರ ಮಗ ಗ್ರೇಶನ್ ಮ್ಯಾರ್ಜಿನ್ ಬರೆಟ್ಟೊ (28) ಐದು ದಿನಗಳ ಹಿಂದೆ ಮನೆಯಲ್ಲಿ ಯಾರಿಗೂ ತಿಳಿಸದೇ ಕಾಣೆಯಾಗಿರುವ ಬಗ್ಗೆ ಕುಟುಂಬಸ್ಥರು ಕುಂದಾಪುರ ಪೊಲೀಸರಿಗೆ ದೂರು ನೀಡಿದ್ದಾರೆ.
ನಾಪತ್ತೆಯಾಗಿರುವ ಗ್ರೇಶನ್ ಮ್ಯಾರ್ಜಿನ್ ಬರೆಟ್ಟೊ ಈ ಹಿಂದೆ ಎರಡು ವರ್ಷ ವಿದೇಶದಲ್ಲಿ ದುಡಿದ ಬಳಿಕ, ಮೂರು ತಿಂಗಳು ಬೆಂಗಳೂರಲ್ಲಿ ಕೆಲಸ ಮಾಡಿದ್ದ. ಎರಡು ವರ್ಷಗಳಿಂದ ಯಾವುದೇ ಉದ್ಯೋಗವಿಲ್ಲದೇ ಮನೆಯಲ್ಲಿದ್ದರು ಎನ್ನಲಾಗುತ್ತಿದೆ. ಗ್ರೇಶನ್ ಇತ್ತೀಚೆಗೆ ಕೇರಳದ ಪೊಟ್ಟ ಎಂಬಲ್ಲಿನ ಧ್ಯಾನ ಮಂದಿರಕ್ಕೆ ಆಗಾಗ ಹೋಗಿ ಬರುತ್ತಿದ್ದು, ಅವರು ಮನೆಯಿಂದ ಏಕಾಏಕಿ ಕಾಣೆಯಾದಾಗ ಕೇರಳದ ಧ್ಯಾನ ಮಂದಿರದಲ್ಲೂ ಮನೆಯವರು ಸಂಪರ್ಕಿಸಿದ್ದರು.
ಧ್ಯಾನ ಮಂದಿರಕ್ಕೂ ತೆರಳದ ಬಗ್ಗೆ ಅಲ್ಲಿನವರಿಂದ ದ್ರಡೀಕರಣಗೊಂಡ ಬಳಿಕ ಕುಟುಂಬಸ್ಥರು ಹಲವೆಡೆ ಹುಡುಕಾಡಿದ್ದು, ಅಂತಿಮವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.