ಕನ್ನಡ ವಾರ್ತೆಗಳು

ಮೂರೂವರೆ ವರ್ಷದ ಮಗುವಿನ ಮೇಲೆ ಚಾಲಕನಿಂದ ಲೈಂಗಿಕ ದೌರ್ಜನ್ಯ – ಆರೋಪ : ಉಳ್ಳಾಲ, ತೊಕ್ಕೊಟ್ಟು ಉದ್ವಿಘ್ನ

Pinterest LinkedIn Tumblr

 Thokkottu_baby_crime_1

ತೊಕ್ಕೊಟ್ಟು: ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ವಾಹನದ ಚಾಲಕನೊಬ್ಬ ತನ್ನ ವಾಹನದಲ್ಲಿ ಬರುವ ಮೂರೂವರೆ ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ ಆರೋಪಿಸಿ ಅತನನ್ನು ತಂಡವೊಂದು ಥಳಿಸಿದ ಘಟನೆ ಶುಕ್ರವಾರ ತೊಕ್ಕೊಟ್ಟು ಬಳಿ ನಡೆದಿದೆ.

ಉಳ್ಳಾಲ ಠಾಣೆ ವ್ಯಾಪ್ತಿಯ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಎಲ್‌ಕೆಜಿ ವಿದ್ಯಾರ್ಥಿನಿಯ ಮೇಲೆ ಈ ದೌರ್ಜನ್ಯ ನಡೆದಿದ್ದು, ಕುಕೃತ್ಯ ನಡೆಸಿದ ಆರೋಪ ಎದುರಿಸುತ್ತಿರುವ ಕುಂಪಲ ನಿವಾಸಿ ಮುಧಕರ ಶೆಟ್ಟಿ (38) ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಮಧುಕರ ಶೆಟ್ಟಿ ಈ ಬಾಲಕಿ ಓದುತ್ತಿರುವ ಶಾಲೆಯ ಮಕ್ಕಳನ್ನು ತನ್ನ ಓಮ್ನಿ ವಾಹನದಲ್ಲಿ ಕರೆದೊಯ್ಯುವ ಕೆಲಸ ಮಾಡುತ್ತಾನೆ. ಶುಕ್ರವಾರ ಮಧ್ಯಾಹ್ನ ಎಂದಿನಂತೆ ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಮನೆಗಳಿಗೆ ಬಿಟ್ಟಿದ್ದು, ಈ ಬಾಲಕಿ ಒಬ್ಬಳೇ ಉಳಿದಿದ್ದ ವೇಳೆ ವಾಹನದಲ್ಲೇ ಲೈಂಗಿಕವಾಗಿ ಪೀಡಿಸಿದ್ದಾನೆ ಎಂದು ಹೇಳಲಾಗಿದೆ.

ಮನೆಗೆ ಬಂದ ಬಾಲಕಿ ಶೌಚಾಲಯಕ್ಕೆ ಹೋದಾಗ ರಕ್ತಸ್ರಾವವಾಗಿರುವುದನ್ನು ಗಮನಿಸಿದ ತಾಯಿ ವಿಚಾರಿಸಿದಾಗ ಚಾಲಕನ ಕೃತ್ಯದ ಬಗ್ಗೆ ಮಗು ತಿಳಿಸಿದೆ. ಆತಂಕಗೊಂಡ ಮನೆಯವರು ಕೂಡಲೇ ಮಗುವನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.

Thokkottu_baby_crime_2 Thokkottu_baby_crime_3 Thokkottu_baby_crime_4 Thokkottu_baby_crime_5 Thokkottu_baby_crime_6 Thokkottu_baby_crime_7 Thokkottu_baby_crime_8 Thokkottu_baby_crime_9 Thokkottu_baby_crime_10

ಆಸ್ಪತ್ರೆ ಬಳಿ ಜಮಾಯಿಸಿದ ಜನತೆ:

ಘಟನೆ ಬಗ್ಗೆ ತಿಳಿದ ಸ್ಥಳೀಯರು ಆಸ್ಪತ್ರೆ ಬಳಿ ಜಮಾಯಿಸಿ ಆರೋಪಿ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು. ಈ ವೇಳೆ ಕೋಲಾಹಲದ ವಾತಾವರಣ ನಿರ್ಮಾಣವಾಯಿತು.

ಕಲ್ಲು ತೂರಾಟ :

ಆತಂಕದ ಪರಿಸ್ಥಿತಿ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಆಗಮಿಸಿ ಜನರನ್ನು ಚದುರಿಸಿದರು. ಈ ಹಂತದಲ್ಲಿ ಲಾಠಿ ಚಾರ್ಜ್ ನಡೆಸಿದಾಗ ಕೆರಳಿದ ಜನ ಕಲ್ಲು ತೂರಾಟ ನಡೆಸಿದರು. ಆಗ ಕೆಲವು ಅಂಗಡಿ ಮತ್ತು ಹೋಟೆಲ್‌ಗಳಿಗೆ ಕಲ್ಲು ಬಿತ್ತು. ಪರಿಸರದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಯಿತು. ಬಳಿಕ ಪರಿಸ್ಥಿತಿ ತಿಳಿಯಾಯಿತು. ಆರೋಪಿ ವಶಕ್ಕೆ: ಈ ನಡುವೆ, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಬಿಗಿ ಭದ್ರತೆ: ಘಟನೆ ಬಳಿಕ ಯಾವೂದೇ ರೀತಿಯ ಕೋಮು ಸಂಘರ್ಷ ಉಂಟಗದಂತೆ ತೊಕ್ಕೊಟ್ಟು ಪರಿಸರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ವಾಟ್ಸಪ್ ಅವಾಂತರ :

ಈ ನಡುವೆ ಪ್ರಕರಣದ ಬಗ್ಗೆ ವಾಟ್ಸಪ್ ನಲ್ಲಿ ಪ್ರಚೋದನಕಾರಿ ಮಾಹಿತಿಗಳನ್ನು ಹರಿ ಬಿಡಲಾಯಿತು. ಇದರಿಂದ ಮಂಗಳೂರಿನಲ್ಲಿ ರಾತ್ರಿ ಹೊತ್ತು ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿ, ಪೊಲೀಸರು ರಾತ್ರಿ 10.30ಕ್ಕೆ ನಗರದ ಎಲ್ಲಾ ಅಂಗಡಿ – ಮುಂಗಟ್ಟುಗಳನ್ನು ಬಲವಂತಾಗಿ ಮುಚ್ಚಿಸಿದರು.

Write A Comment