ಕುಂದಾಪುರ: ಈ ಬಾರಿ ರಾಜ್ಯದ ಬಜೆಟ್‌ನಲ್ಲಿ ಬೈಂದೂರು ತಾಲೂಕು ಮಾಡಲು ಕುಂದಾಪುರ ತಾಲೂಕು ರೈತಸಂಘ, ರಿಕ್ಷಾ-ಟೆಂಪೋ ಯೂನಿಯನ್ ಹಾಗೂ ಬೈಂದೂರಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬೈಂದೂರಿನಲ್ಲಿ ಪ್ರತಿಭಟನೆ ನಡೆಸಿದರು.
ಉಡುಪಿ ಜಿಲ್ಲೆಯ ತುತ್ತತುದಿಯ ಬೈಂದೂರನ್ನು ತಾಲೂಕಾಗಿಸಲು ಬಹಳ ವರ್ಷಗಳಿಂದ ಹೋರಾಟ ನೆಡೆದಿದೆ. ತಾಲೂಕು ಕೇಂದ್ರವಾಗುವ ಎಲ್ಲಾ ಅರ್ಹತೆ ಬೈಂದೂರು ಹೊಂದಿದೆ. ಅದರಂತೆ ಈಗಿನ ಸರಕಾರ ಬಜೆಟ್‌ನಲ್ಲಿ ಬೈಂದೂರು ತಾಲೂಕನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ, ಪತ್ರಕರ್ತ ಅಂದುಕಾ.ಎಸ್, ರಿಕ್ಷಾ ಟೆಂಪೋ ಯುನಿಯನ್ ಅಧ್ಯಕ್ಷ ಸುರೇಶ್ ಬಟವಾಡಿ, ಮಂಜು.ಎಸ್ ಮತ್ತು ಬಿ.ಎಸ್ ಸುರೇಶ್ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.