ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಾ. 14ರಂದು ನಡೆಯಲಿರುವ ರಥೋತ್ಸವದ ಅಂಗವಾಗಿ ಮಾ. 7ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಧಿಧಿವತ್ತಾಗಿ ನೇರವೇರಿದೆ. ಈ ಉತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.
ದೇವಳದ ಅರ್ಚಕ ಹಾಗೂ ತಂತ್ರಿಯಾಗಿರುವ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ, ಕಾರ್ಯನಿರ್ವಹಣಾಧಿಧಿಕಾರಿ ವಿ. ಪ್ರಸನ್ನ, ಉಪ ಕಾರ್ಯನಿರ್ವಹಣಾಧಿಧಿಕಾರಿ ಕೃಷ್ಣಮೂರ್ತಿ, ಅಧಿಧೀಕ್ಷಕ ರಾಮಕೃಷ್ಣ ಅಡಿಗ, ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದು ಭಕ್ತರ ಅನುಕೂಲತೆಗೆ ಎಲ್ಲಾ ಸೌಕರ್ಯಗಳನ್ನು ಒದಗಿಸಿದರು. ಫೆ. 13ರಂದು ಮಹಾರಂಗಪೂಜೆ ಹಾಗೂ ಸಿಂಹಾರೋಹಣೋತ್ಸವ ನಡೆಯಲಿದೆ.
ನಾಳೆ ನಡೆಯಲಿರುವ ರಥೋತ್ಸವಕ್ಕೆ ವಿವಿದೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ.