ಕನ್ನಡ ವಾರ್ತೆಗಳು

ಉಡುಪಿ: ಹಣಕ್ಕಾಗಿ ತಂದೆ-ತಾಯಿಯನ್ನೇ ಕೊಂದ ಕಿರಾತಕ ಮಗನಿಗೆ ಜೀವಾವಧಿ ಶಿಕ್ಷೆ

Pinterest LinkedIn Tumblr

ಕುಂದಾಪುರ: ಹಣಕ್ಕಾಗಿ ತಂದೆ, ತಾಯಿಯನ್ನು ದೊಣ್ಣೆಯಿಂದ ಹೊಡೆದು ಕೊಂದ ಆರೋಪ ಎದುರಿಸುತ್ತಿರುವ ಉಡುಪಿ ತಾಲೂಕು ಹೆಗ್ಗುಂಜೆ ಗ್ರಾಮದ ಹೊನ್ನೆಕುಂಬ್ರಿ ನಿವಾಸಿ ಸುರೇಶ ಮರಕಾಲ(29) ಎಂಬಾತನಿಗೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Murder_Case-Heggunje

ಹೆರಿಯ ಮರಕಾಲ(65) ಹಾಗೂ ಬಾಬಿ ಮರಕಾಲ್ತಿ(60)ಯವರೇ ಕೊಲೆಯಾದವರು.

ಪ್ರಕರಣದ ವಿವರ: 2012ರ ಮೇ 3ರಂದು ಬೆಳಗ್ಗಿನ ಜಾವ 3.30ರ ಹೊತ್ತಿಗೆ ಈ ಕೊಲೆ ನಡೆದಿದ್ದು, ಕೊಲೆಯಾಗಿದ್ದರು. ಖರ್ಚಿಗೆ ಹಣ ಕೊಡುವುದಿಲ್ಲ ಎಂಬ ಕಾರಣಕ್ಕೆ ಸುರೇಶ್ ತಂದೆ-ತಾಯಿಯೊಂದಿಗೆ ನಿತ್ಯ ಗಲಾಟೆ ಮಾಡಿಕೊಳ್ಳುತ್ತಿದ್ದ. ಮೇ 2ರಂದು ಮಧ್ಯಾಹ್ನ ಜಗಳವಾಡಿದ್ದ ಆತ ಮೇ 3ರ ಬೆಳಗ್ಗಿನ ಜಾವ 3.30ರ ಸುಮಾರಿಗೆ ದೊಣ್ಣೆಯಿಂದ ಇಬ್ಬರ ತಲೆಗೆ ಹೊಡೆದು ಸಾಯಿಸಿ ಅವರನ್ನು ಎಳೆದುಕೊಂಡು ಹೋಗಿ ಮನೆ ಸಮೀಪದ ಗೇರು ಹಾಡಿಯಲ್ಲಿ ಎಸೆದಿದ್ದ ಎಂದು ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸುಧೀರ್ಘ ವಿಚಾರಣೆ ಬಳಿಕ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಶೇಖರ ವಿ.ಪಾಟೀಲ್ ಗುರುವಾರ ತೀರ್ಪು ನೀಡಿ, ಆರೋಪಿ ತಪ್ಪಿತಸ್ಥನೆಂದು ಸಾಬೀತುಪಟ್ಟಿದ್ದು ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿದ್ದಾರೆ.

ಸರಕಾರದ ಪರ ಸರಕಾರಿ ಅಭಿಯೋಜಕ ಟಿ.ಎಸ್.ಚಿತ್ತೂರಿ, ಎಂ.ಮಂಜುನಾಥ ಭಟ್ ಮತ್ತು ಪ್ರಧಾನ ಸರಕಾರಿ ಅಭಿಯೋಜಕ ಪುಷ್ಪರಾಜ ಕೆ.ಅಡ್ಯಂತಾಯ ವಾದಿಸಿದ್ದರು.

Write A Comment