ಮುಂಬಯಿ : ಬಿಲ್ಲವರ ಅಸೋಷಿಯೇಶನ್ ಮುಂಬಯಿ ಸಂಚಾಲಕತ್ವದ ಭಾರತ್ ಬ್ಯಾಂಕ್ ತನ್ನ 66ನೇ ಶಾಖೆಯು ಮಾ. 10 ರಂದು ಇಲ್ಲಿನ ವಿಲೆಪಾರ್ಲೆ ಪಶ್ಚಿಮ ಎಂ. ಎಲ್. ಸ್ಪೇಸಸ್ ನ ತಳ ಮಹಡಿಯಲ್ಲಿ ಶುಭಾರಂಭಗೊಂಡಿದೆ.
ಸಿಟಿ ಕೇರ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ದಿಲೀಪ್ ನಾಮ್ ಜೋಷಿಯವರು ಈ ನೂತನ ಶಾಖೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಬ್ಯಾಂಕಿನ ವ್ಯವಹಾರವನ್ನು ಮೆಚ್ಚಿದರು. ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಜಯ ಸಿ. ಸುವರ್ಣರು ರಿಬ್ಬನ್ ಕತ್ತರಿಸಿ ಶಾಖೆಯನ್ನು ಚಾಲನೆಗೊಳಿಸಿ ಶುಭ ಕೋರಿದರು. ಬಂಟರ ಸಂಘದ ಕೋಶಾಧಿಕಾರಿ ಸಿಎ ಐ.ಆರ್. ಶೆಟ್ಟಿ,ಹೋಟೇಲು ಉದ್ಯಮಿ ರಘುರಾಮ ಶೆಟ್ಟಿ, ಸಿಎ ರಮೇಶ್ ಶೆಟ್ಟಿ ಹಾಗೂ ಸ್ಥಳೀಯ ಇತರ ಅನೇಕ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದು ನೂತನ ಶಾಖೆಗ್ ಶುಭ ಕೋರಿದರು.
ಬ್ಯಾಂಕಿನ ಭದ್ರತಾ ಕೊಠಡಿಯನ್ನು ನಿರ್ದೇಶಕಿ ಪುಷ್ಪಲತಾ ಎನ್. ಸಾಲ್ಯಾನ್, ಹಾಗೂ ಎಟಿಎಂ ನ್ನು ಬ್ಯಾಂಕಿನ ಉಪ ಕಾರ್ಯಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್ ಉದ್ಘಾಟಿಸಿದರು. ಬ್ಯಾಂಕಿನ ನಿರ್ದೇಶಕ ಮಂಡಳಿಯ ಇತರ ಸದಸ್ಯರು, ಸಿಬ್ಬಂಧಿಗಳು ಉಪಸ್ಥಿತರಿದ್ದರು.
ನಿತ್ಯಾನಂದ ಡಿ. ಕೋಟ್ಯಾನ್ ಮತ್ತು ಶಾಖೆಯ ಪ್ರಬಂಧಕ ಸುನೀಲ್ ಗುಜರನ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.