ಮಂಗಳೂರು, ಮಾ.11: ಆಸ್ಟ್ರೇಲಿಯಾದಲ್ಲಿ ಹತ್ಯೆಗೀಡಾದ ಬಂಟ್ವಾಳ ಮೂಲದ ಪ್ರಭಾ ಅರುಣ್ ಶೆಟ್ಟಿ ಅವರ ಬಂಟ್ವಾಳ ತಾಲೂಕಿನ ಅಮ್ಟೂರಿನ ಮನೆಗೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಬುಧವಾರ ಭೇಟಿ ನೀಡಿದರು.
ಅಮ್ಟೂರಿನಲ್ಲಿ ಪ್ರಭಾ ಅವರ ತಂದೆಯ ಮನೆಗೆ ಭೇಟಿ ನೀಡಿ, ಮೃತರ ತಂದೆ ಮಹಾಬಲ ಶೆಟ್ಟಿಯವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಅಲ್ಲದೆ, ಘಟನೆ ಸಂಬಂಧ ಜಿಲ್ಲಾಡಳಿತದಿಂದ ಯಾವುದೇ ರೀತಿಯ ಸಹಕಾರ ನೀಡಲು ಸಿದ್ದವಿದೆ. ಪ್ರಭಾ ಮೃತದೇಹವನ್ನು ಆಸ್ಟ್ರೇಲಿಯಾದಿಂದ ತರಲು ಅಗತ್ಯ ಕ್ರಮಕ್ಕೆ ಜಿಲ್ಲಾಡಳಿತ ಸಹಕರಿಸಲಿದೆ ಎಂದು ಜಿಲ್ಲಾಧಿಕಾಯವರು ಮೃತರ ಕುಟುಂಬಸ್ಥರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ, ಬಂಟ್ವಾಳ ತಹಶೀಲ್ದಾರ್ ಮುಹಮ್ಮದ್ ಇಸಾಕ್, ಎಎಸ್‌ಪಿ ರಾಹುಲ್ ಸಿನಾ ಮತ್ತಿತರರು ಜಿಲ್ಲಾಧಿಕಾರಿಗಳ ಜತೆಗಿದ್ದರು.