ಅಂತರಾಷ್ಟ್ರೀಯ

ವಿಶ್ವದ ಮೊದಲ ಸೋಲಾರ್ ವಿಮಾನ ಇಂಪಲ್ಸ್ – 2 ಭಾರತಕ್ಕೆ

Pinterest LinkedIn Tumblr

solar_air_crft_photo

ಅಬುದಾಬಿ,ಮಾರ್ಚ್.10:  ಒಂದೇ ಒಂದು ಹನಿ ಇಂಧನ ಇಲ್ಲದೇ ಹಾರಾಡುವ ಪರಿಸರ ಸ್ನೇಹಿ ಸೋಲಾರ್ ವಿಮಾನ ಇಂಪಲ್ಸ್-2 ಸೋಮವಾರ ಅಬುದಾಬಿಯಿಂದ ಪ್ರಯೋಗಾರ್ಥ ಹಾರಾಟ ನಡಸಿದೆ.ಅಬುದಾಬಿಯಲ್ಲಿ 10 ಗಂಟೆ ಹಾರಾಟ ನಡೆಸಿ ನಂತರ ಮಸ್ಕತ್‍ಗೆ ತೆರಳಲಿದೆ. ಅಲ್ಲಿಂದ ಮಂಗಳವಾರ ಭಾರತದಲ್ಲಿ ಬಂದಿಳಿಯಲಿದೆ.

ಅಹಮದಾಬಾದ್ ಮತ್ತು ವಾರಣಾಸಿ ಹೀಗೆ ಎರಡು ಕಡೆ ನಿಲುಗಡೆ ಮಾಡಿ ನಂತರ ಚೀನಾ ಕಡೆ ಪ್ರಯಾಣ ಬೆಳೆಸಲಿದೆ. ವಾರಾಣಾಸಿಯಲ್ಲಿ ಗಂಗಾನದಿ ಮೇಲೆ ಹಾರಾಟ ನಡೆಸಿ, ವಿದ್ಯಾರ್ಥಿಗಳು, ಎನ್ ಜಿಓಗಳ ಮೂಲಕ ಪರಿಸರ ಸ್ನೇಹಿ ತಂತ್ರಜ್ಞಾನದ ಕುರಿತು ಜಾಗೃತಿ ಮೂಡಸಲಿದೆ. ನಂತರ ಮ್ಯಾನ್ಮರ್ ನ ಮಾಂಡಲೆ, ಚೀನಾದ ಚಾಂಗ್ ಕಿಂಗ್ ಮತ್ತು ನಾಂಜಿಂಗ್ ನಲ್ಲಿ ಇಳಿದು ನಂತರ ಪೋನಿಕ್ಸ್ ಅರಿಜೋನಾ ಮಾರ್ಗವಾಗಿ ನ್ಯೂಯಾರ್ಕ್ ನ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ.

ಐದು ವರ್ಷಗಳ ಹಿಂದೆಯೇ ಈ ಸೋಲಾರ್ ಇಂಪಲ್ಸ್ ವಿಮಾನವನ್ನು ಆವಿಷ್ಕಾರ ಮಾಡಲಾಗಿತ್ತು. ಏಕ ಆಸನದ ಈ ವಿಮಾನ ಕಳೆದ ವರ್ಷ ಸ್ವಿಜರ್‍ಲೆಂಡ್ ನಲ್ಲಿ 2.17 ನಿಮಿಷ ಪಶ್ಚಿಮ ಭಾಗದಲ್ಲಿ ಹಾರಾಟ ನಡೆಸಿತ್ತು. ಈ ವಿಮಾನದಲ್ಲಿ ಪ್ರಯಾಣಕ್ಕೆ ರಾಜಕಾರಣಿಗಳು, ಸೆಲೆಬ್ರಟಿಗಳು, ಮತ್ತು ಖಾಸಗಿ ವ್ಯಕ್ತಿಗಳಿಗೆ ಅವಕಾಶ ನೀಡಲು ಯೋಚಿಸಿರುವುದಾಗಿ ಈ ವಿಮಾನವನ್ನು ಅಭಿವೃದ್ಧಿಪಡಿಸಿರುವ ಮೊನಾಕೊ ಕಂಟ್ರೋಲ್ ಸೆಂಟರ್‍ನ ಮುಖ್ಯಸ್ಥ ಆಲ್ಬರ್ಟ್ ಮೊನಾಕೊ ತಿಳಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ವಿಮಾನ ಸೋಮವಾರವೇ ಭಾರತಕ್ಕೆ ಆಗಮಿಸಬೇಕಿತ್ತು. ಆದರೆ, ಯುಎಇಯಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಇದು ತನ್ನ ಪರೀಕ್ಷಾರ್ಥ ಹಾರಾಟವನ್ನು ಒಂದು ದಿನ ಮುಂದೂಡಿತು.

Write A Comment