ಮಥುರಾ,ಮಾರ್ಚ್.09 : ಕೋಮು ಸೌಹಾರ್ದದ ಅತ್ಯುತ್ತಮ ಉದಾಹಣೆಯಲ್ಲಿ, ಮುಸ್ಲಿಂ ಗ್ರಾಮ ಮುಖಂಡನೊಬ್ಬ ಮಥುರಾ ಜಿಲ್ಲೆಯ ಸಹಾರ್ ಗ್ರಾಮದಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆ.
8 ತಿಂಗಳ ಹಿಂದೆಯೇ ಪ್ರಾರಂಭವಾಗಿದ್ದ ದೇವಸ್ಥಾನದ ನಿರ್ಮಾಣದ ಸೋಮವಾರ ಧಾರ್ಮಿಕ ವಿಧಿಗಳೊಂದಿಗೆ ಸಾರ್ವಜನಿಕರಿಗೆ ಮುಕ್ತವಾಗಿದೆ.”ಭಾನುವಾರ ವೇದಘೋಷ ಗಳೊಂದಿಗೆ ಶಿವ ಮತ್ತು ಹನುಮಾನ್ ದೇವರುಗಳ ಪ್ರಾಣ ಪ್ರತಿಷ್ಟಾಪನೆಯೊಂದಿಗೆ ದೇವಸ್ಥಾನದ ಉದ್ಘಾಟನಾ ಕಾರ್ಯ ನಡೆದಿದೆ” ಎಂದು ಈ ದೇವಾಲಯ ನಿರ್ಮಿಸಿರುವ ಸಹಾರ್ ಗ್ರಾಮದ ಮುಖಂಡ ಅಜ್ಮಲ್ ಅಲಿ ಶೇಖ್ ಸೋಮವಾರ ತಿಳಿಸಿದ್ದಾರೆ.
“ಅರ್ಚಕನಿಗೆ ಮತ್ತು ಇತರ ಪ್ರವಾಸಿಗಳಿಗೆ ನೆರವಾಗುವಂತೆ ದೇವಾಲಯದ ಪಕ್ಕದಲ್ಲಿ ಕೆಲವು ಕೊಠಡಿಗಳನ್ನು ನಿರ್ಮಿಸಲಾಗುವುದು” ಎಂದು ಶೇಕ್ ತಿಳಿಸಿದ್ದಾರೆ. ಈ ನಿರ್ಮಾಣಕ್ಕೆ ತಮ್ಮ ಸ್ವಂತದ ನಾಲ್ಕು ಲಕ್ಷ ರೂಗಳನ್ನು ವ್ಯಯಿಸಿರುವುದಾಗಿ ತಿಳಿಸಿದ್ದಾರೆ. ಉತ್ತರ ಪ್ರದೇಶದ ಮಾಜಿ ಮಂತ್ರಿ ಲಕ್ಷ್ಮಿ ನಾರಾಯಣ್ ಚೌಧರಿ ಅವರು ಈ ದೇವಾಲಯದ ನಿರ್ಮಾಣಕ್ಕೆ ಶೇಕ್ ಅವರನ್ನು ಅಭಿನಂದಿಸಿರುವುದಲ್ಲದೆ, ವಿವಿಧ ಸಮುದಾಯಗಳ ಸೌಹಾರ್ದತೆಗೆ ಇಂತಹ ಕೆಲಸಗಳು ಹೆಚ್ಚಾಗಬೇಕು ಎಂದಿದ್ದಾರೆ.
