ಕನ್ನಡ ವಾರ್ತೆಗಳು

ಫ್ರೀಸ್ಟೈಲ್ ಈಜು ಸ್ಪರ್ಧೆ :ನಿಖಿಲೇಶ್ ಎಂ. ಹೊಳ್ಳ ಪ್ರಥಮ.

Pinterest LinkedIn Tumblr

Nikhilesh_M_Holla

ಮಂಗಳೂರು,ಮಾರ್ಚ್. 09 : ದ. ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ನಿ. ಮುಳಿಹಿತ್ಲು, ಮಂಗಳೂರು ಇದರ ವಜ್ರ ಮಹೋತ್ಸವದ ಅಂಗವಾಗಿ ಮಲ್ಪೆ ಬೀಚ್‌ನಲ್ಲಿ ಆಯೋಜಿಸಿದ ಬೀಚ್ ಉತ್ಸವ 2015 ರಲ್ಲಿ ನಡೆದ 1,5೦೦ ಮೀ. ಫ್ರೀಸ್ಟೈಲ್ ಈಜು ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಮಂಗಳೂರಿನ ನಿಖಿಲೇಶ್ ಎಂ. ಹೊಳ್ಳ ಪ್ರಥಮ ಬಹುಮಾನ ಗೆದ್ದು ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾನೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನಡೆದ 2014-15 ಸಾಲಿನ 17 ರ ವಯೋಮಿತಿಯ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ನಿಖಿಲೇಶ್ 8 ಅಂಕವನ್ನು ಪಡೆಯುವುದ ರೊಂದಿಗೆ 3 ನೇ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾನೆ. 2014 ಅಕ್ಟೋಬರ್‌ನಲ್ಲಿ ಜರುಗಿದ ರಾಜ್ಯಮಟ್ಟದ 200 ಮೀ ಫ್ರೀಸ್ಟೈಲ್ ಈಜುಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗಳಿಸಿದ ನಿಖಿಲೇಶ್ ಎಂ. ಹೊಳ್ಳ ಉರ್ವ ಕೆನರಾ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ.

Write A Comment