ಮಂಗಳೂರು,ಮಾರ್ಚ್.09: ವಾಮಂಜೂರು ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನದಲ್ಲಿ ಭಾನುವಾರ ವೇದಮೂರ್ತಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತತ್ವದಲ್ಲಿ ಹಾಗೂ ಅರ್ಚಕ ಟಿ. ಗೋಪಾಲಕೃಷ್ಣ ಭಟ್ ಉಪಸ್ಥಿತಿಯಲ್ಲಿ ಸಂಭ್ರಮದ ಬ್ರಹ್ಮಕಲಶೋತ್ಸವ ನಡೆಯಿತು.
ಬೆಳಗ್ಗೆ 8.30ರಿಂದ ಕಲಶಾಭಿಷೇಕ ಪ್ರಾರಂಭವಾಗಿ 10.38ಕ್ಕೆ ಸಹಸ್ರ ಕಲಶ ಸಹಿತ ಬ್ರಹ್ಮಕಲಶಾಭಿಷೇಕ ನಡೆಯಿತು. ಬಳಿಕ ಪ್ರಸನ್ನ ಪೂಜೆ, 12 ಗಂಟೆಗೆ ಪಲ್ಲಪೂಜೆ, 12.30ಕ್ಕೆ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ 8.30ಕ್ಕೆ ಮಹಾರಂಗಪೂಜೆ, ಬಲಿ ಉತ್ಸವ ನಡೆಯಿತು. ಈ ಸಂದರ್ಭ ದೇವಳ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಸೀತಾರಾಮ ಜಾಣು ಶೆಟ್ಟಿ, ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ಚಂದ್ರಹಾಸ ರೈ, ಕಾರ್ಯಾಧ್ಯಕ್ಷ ಪುರುಷೋತ್ತಮ, ಡಾ. ದಯಾಕರ ಪೂಂಜ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮೋಹನ್ ಅಮೀನ್, ಮಂಜುನಾಥ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 10ರಿಂದ ಲೋಕೇಶ್ ಸಂಪಿಗೆ ಮತ್ತು ಆರತ್ ಹಳೆಯಂಗಡಿ ಅವರಿಂದ ನಾದ-ನಿನಾದ ವಾದ್ಯ ಸಂಗೀತ, 1 ಗಂಟೆಯಿಂದ ಪ್ರವೀಣ್ ಗುರುಪುರ ಮತ್ತು ಬಳಗದವರಿಂದ ಭಕ್ತಿಸುಧಾ, 2.30ರಿಂದ ರಕ್ಷಿತ್ ಶೆಟ್ಟಿ ನೇತತ್ವದಲ್ಲಿ ಯಕ್ಷನಾಟ್ಯ ವೈಭವ ಕಾಳಿಂಗ ಮರ್ದನ ಹಾಗೂ ಯಕ್ಷಗಾನ ಬಯಲಾಟ ನಡೆಯಿತು.
ರಾತ್ರಿ 8ರಿಂದ ಗುರುಪುರ ಬಂಟರ ಮಾತೃ ಸಂಘ ವತಿಯಿಂದ ತುಳುವ ನಡಕೆ ಸಾಂಸ್ಕೃತಿಕ ಸಿಂಚನ, ರಾತ್ರಿ 9.30ರಿಂದ ನಮ್ಮ ಕಲಾವಿದರು ಬೆದ್ರ ತಂಡದಿಂದ ‘ಆಪುಜಿ ಪಂಡ ದೀಪುಜಿ’ ನಾಟಕ ನಡೆಯಿತು.