ಕನ್ನಡ ವಾರ್ತೆಗಳು

ಕೊಲ್ಲೂರು ಅಮ್ಮನಿಗೆ ಜಾತ್ರೆಯ ಸಂಭ್ರಮ; ಮಾ.14ಕ್ಕೆ ಮೂಕಾಂಬಿಕ ದೇವಳದಲ್ಲಿ ಜಾತ್ರೆ

Pinterest LinkedIn Tumblr

ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮನ್ಮಹಾರಥೋತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು. ಬೆಳಗ್ಗೆ ಗಣಪತಿ ಪ್ರಾರ್ಥಣೆ, ಸಿಂಹಯಾಗ, ಅಂಕುರಾಧಿವಾಸ ವಿಧಿ ನಡೆಸಿ ಧ್ವಜಾರೋಹಣ ನೆರವೇರಿಸುವ ಮೂಲಕ ಮನ್ಮಹಾರಥೋತ್ಸವಕ್ಕೆ ಅಧಿಕತ ಚಾಲನೆ ನೀಡಲಾಯಿತು.

Kolluru_Mookambika temple (1) Kolluru_Mookambika temple (4) Kolluru_Mookambika temple (3) Kolluru_Mookambika temple Kolluru_Mookambika temple (2) Kolluru_Mookambika temple (5)

 

ದೇವಳದ ಪ್ರಧಾನ ತಂತ್ರಿ ರಾಮಚಂದ್ರ ಅಡಿಗ ಧಾರ್ಮಿಕ ವಿಧಿ ನೆರವೇರಿಸಿದರು. ಶ್ರೀದೇವರ ರಥಾರೋಹಣ, ಯಾಗಶಾಲಾ ಪ್ರವೇಶ, ಕೌತುಕಬಂಧನ, ಮಹೂರ್ತ ಬಲಿ, ಉತ್ಸವ ನಡೆಯಿತು.

ದೇವಳದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಕಷ್ಣಪ್ರಸಾದ್ ಅಡ್ಯಂತಾಯ, ವ್ಯವಸ್ಥಾಪನಾ ಮಂಡಳಿಯ ಸರ್ವ ಸದಸ್ಯರು, ಪ್ರಭಾರ ಕಾರ್ಯನಿರ್ವಹಣಾಧಿಕಾರಿ ವಿ.ಪ್ರಸನ್ನ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕಷ್ಣಮೂರ್ತಿ, ದೇವಳದ ಅಧೀಕ್ಷಕ ರಾಮಕಷ್ಣ ಅಡಿಗ ಇದ್ದರು.

ಮಾ.14ರಂದು ಮನ್ಮಹಾರಥೋತ್ಸವ ಜರುಗಲಿದೆ.

Write A Comment