ಉಡುಪಿ: ವಿಹಿಂಪ ಅಂತಾರಾಷ್ಟ್ರೀಯ ನಾಯಕ ಡಾ. ಪ್ರವೀಣ್ ಬಾಯಿ ತೊಗಾಡಿಯಾ ಅವರಿಗೆ ಉಡುಪಿ ಜಿಲ್ಲಾ ಪ್ರವೇಶವನ್ನು ಮಾ. 7ರಿಂದ 13 ರ ತನಕ ನಿಷೇಧಿಸಲಾಗಿದೆ ಎಂದು ಎಸ್ಪಿ ಅಣ್ಣಾಮಲೈ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳು ವಿಹೆಚ್ ಪಿ ಮುಖಂಡರಿಗೆ ಮುಂಜಾಗೃತ ಕ್ರಮಗಳ ಬಗ್ಗೆ ಉತ್ತರ ನೀಡುವಂತೆ ಕಳುಹಿಸಿದ ಸ್ಪೀಡ್ ಪೋಸ್ಟ್ ಗೆ ಮುಖಂಡರು ಮೂರು ದಿನಗಳ ಕಾಲ ಉತ್ತರ ನೀಡದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ತೊಗಾಡಿಯಾ ನಿಷೇದ ಆದೇಶ ಹೊರಡಿಸಿದ್ದಾರೆ ಎಂದವರು ಹೇಳೀದ್ದಾರೆ.
ಈ ಬಗ್ಗೆ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೋಲಿಸ್ ವರಿಷ್ಟಾಧಿಕಾರಿಗಳು ಹಾಗೂ ತಹಶೀಲ್ದಾರರು ಪ್ರವೀಣ್ ಭಾಯಿ ತೊಗಾಡಿಯಾ ಅವರನ್ನು ನಿಷೇದ ಮಾಡಬೇಕು ಎಂಬ ಮನವಿಯ ಮೇಲೆ ಜಿಲ್ಲಾಧಿಕಾರಿ ಡಾ.ವಿಶಾಲ್ ವಿಎಚ್ ಪಿ ಮುಖಂಡರಿಂದ ಸ್ಪಷ್ಟನೆ ಕೇಳಿದ್ದರು ಹಾಗೂ ಮೂರು ದಿನಗಳ ಕಾಲಾವಕಾಶ ನೀಡಿದ್ದರೂ ಕೂಡ ವಿಎಚ್ ಪಿ ಯಾವುದಕ್ಕೂ ಉತ್ತರ ನೀಡದ ಹಿನ್ನಲೆಯಲ್ಲಿ ನಿಷೇದದ ಆದೇಶ ಹೊರಡಿಸಿದ್ದಾರೆ.
(ಪ್ರವೀಣ್ ಭಾಯಿ ತೊಗಡಿಯಾ )
ಪ್ರವೀಣ್ ಭಾಯಿ ತೊಗಡಿಯಾ ಗುಜರಾತ್ ನಿವಾಸಿಯಾಗಿದ್ದು ದೇಶದೆಲ್ಲೆಡೆ ಸಂಚರಿಸುತ್ತಿದ್ದು ಯಾವುದೇ ಸ್ಪಷ್ಟ ವಿಳಾಸ ನೀಡಿರುವುದಿಲ್ಲ. ಅವರ ಮೇಲೆ ದೇಶದಲ್ಲಿ ವಿವಿಧೆಡೆ ಒಟ್ಟು 19ಕೇಸುಗಳಿದ್ದು ಬೇರೆ ಧರ್ಮದ ವಿರುದ್ದ ಮಾತನಾಡುವ ಕಾರಣ ಗಲಭೆಗಳು ಸೃಷ್ಟಿಯಾಗಿದೆ. ಅಷ್ಟೇ ಅಲ್ಲದೆ ಕುಂದಾಪುರ, ಗಂಗೊಳ್ಳಿ ಭಾಗದಲ್ಲಿ ಹೆಚ್ಚಿನ ಕೋಮು ಗಲಭೆ ನಡೆದ ಕಾರಣ ತೊಗಡಿಯಾ ನಿಷೇದ ಮಾಡಲು ಜಿಲ್ಲಾಧಿಕಾರಿಗಳಲ್ಲಿ ಮನವಿ ಸಲ್ಲಿಸಲಾಗಿದ್ದು ತಹಶೀಲ್ದಾರರು ನಿಷೇದಕ್ಕೆ ಒಪ್ಪಿಗೆ ಸೂಚಿಸಿದ್ದರಿಂದ ಶುಕ್ರವಾರ ರಾತ್ರಿ 12ಗಂಟೆಗೆ ವರೆಗೂ ಮುಂಜಾಗೃತ ಕ್ರಮಗಳ ಬಗ್ಗೆ ವಿಎಚ್ ಪಿ ಮುಖಂಡರಿಗೆ ಸ್ಪಷ್ಟನೆ ನೀಡುವ ಸಮಯಾವಕಾಶವಿತ್ತು ಆದರೆ ಉತ್ತರ ಬಾರದ ಕಾರಣ ಜಿಲ್ಲಾಧಿಕಾರಿಗಳು ಶನಿವಾರ ಆದೇಶ ಹೊರಡಿಸಿದ್ದು ಆದೇಶದ ಪ್ರತಿಯನ್ನು ವಿಹೆಚ್ ಪಿ ಮುಖಂಡರಿಗೆ ನೀಡಲಾಗಿದೆ.
ಸಮಾಜೋತ್ಸವದಲ್ಲಿ ತೊಗಾಡಿಯಾ ಅವರ ಯಾವುದೇ ವೀಡಿಯೋ ತುಣುಕು ಪ್ರಸಾರ ಮಾಡಲು ಯಾವುದೇ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.

