ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು : ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಪ್ರತಿಷ್ಠಾವರ್ಧಂತಿ ಮಹೋತ್ಸವ ಸಹಿತಾ ವರ್ಷಾವಧಿ ಮಹಾಪೂಜೆಯು ಮಂಗಳವಾರ ಹಾಗೂ ಬುಧವಾರ ಜರಗಿತು.
ಮಂಗಳವಾರ ಬೆಳಿಗ್ಗೆ ನಿತ್ಯ ಪೂಜೆ, ಅಪರಾಹ್ನ 12.30ಕ್ಕೆ ಸರ್ವಾಲಂಕರಾರ ಪೂಜೆ, ಮಹಾಪೂಜೆ, ಸಂಜೆ 6ಕ್ಕೆ ಮಹಾಪೂಜೆ, ಹೊರಗಿನ ದರ್ಶನ ಬಲಿ, ಕಟ್ಟೆಬಲಿ, ಮಡಸ್ನಾನ, ಕ,ಚಿಲ್ ಸೇವೆ ಹರಕೆ ಕಾಣಿಕೆ, ಶ್ರೀ ದೇವಿಯ ಗರ್ಭಗುಡಿ ಪ್ರವೇಶ, ರಾತ್ರಿ 8ಕ್ಕೆ ಸುಡುಮದ್ದು ಪ್ರದರ್ಶನ, ರಾತ್ರಿ 11ರಿಂದ ಒಂದು ಗಂಟೆಯವರೆಗೆ ನೈವೇದ್ಯ ಬಲಿ, ಮಹಾರಾಶಿ ಪೂಜೆ ಜರಗಿತ್ತು.
ಬುಧವಾರ ಬೆಳಗ್ಗೆ 2.30ರಿಂದ 3.30ರತನಕ ಮಾರಿ ಉಚ್ಛಿಷ್ಠ್, ಮುಂಜಾನೆ 4.30ಕ್ಕೆ ಮಹಾಪೂಜೆ, ಹೊರಗಿನ ದರ್ಶನ ಬಲಿ, ಕಟ್ಟೆ ಬಲಿ, ಮಡಸ್ನಾನ, ಕ.ಚಿಲ್ ಸೇವೆ,ಶ್ರೀ ದೇವಿಯ ಗರ್ಭಗುಡಿ ಪ್ರವೇಶ, ರಥೋತ್ಸವ, ತುಲಾಭಾರ, ಪ್ರಸಾದ ವಿತರಣೆ ನಡೆಯಿತು. ಲಕ್ಷಂತಾರ ಭಕ್ತರು ಈ ಸಂದರ್ಭದಲ್ಲಿ ಕ್ಷೇತ್ರಕ್ಕೆ ಆಗಮಿಸಿ, ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಮಾ.7 : ಶ್ರೀ ಮಲರಾಯ ಧೂಮಾವತಿ ದೈವಗಳ ನೇಮೋತ್ಸವ
ಮಾ.7ರಂದು ಸಂಜೆ 7 ಗಂಟೆಯಿಂದ ಶ್ರೀ ಮಲರಾಯ ಧೂಮಾವತಿ ದೈವಗಳ ನೇಮೋತ್ಸವ ಜರಗಲಿದೆ ಎಂದು ಉರ್ವಾ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಮನೋಹರ್ ಬೋಳೂರು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
































