ಕನ್ನಡ ವಾರ್ತೆಗಳು

ಸ್ವಚ್ಛ ಭಾರತ ಬಗ್ಗೆ ಯಕ್ಷಗಾನ ಪ್ರದರ್ಶನ; ಜನರಲ್ಲಿ ಅರಿವು ಮೂಡಿಸಲು ವಿಭಿನ್ನ ಪ್ರಯತ್ನ

Pinterest LinkedIn Tumblr

ಉಡುಪಿ: ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ ಸ್ವಚ್ಛ ಭಾರತ ವಿಷಯದ ಬಗ್ಗೆ ನಡೆದ ಯಕ್ಷಗಾನ ಪ್ರದರ್ಶನದ ಉದ್ಘಾಟನೆಯನ್ನು ಚಂಡೆ ಬಾರಿಸುವ ಮೂಲಕ ಗ್ರಾಮ ಪಂಚಾಯತ್ ಸದಸ್ಯರಾದ ಆನಂದ ಪಿ.ಎಚ್‌ರವರು ಚಾಲನೆ ನೀಡಿದರು.

ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಲು ಯಕ್ಷಗಾನ ಮೂಲಕ ಅರಿವು ಮೂಡಿಸುತ್ತಿರುವುದು ಸಂತೋಷದ ವಿಚಾರ. ನಾವುಗಳು ಸ್ವಚ್ಛ ಮನಸ್ಸಿನಿಂದ ನಾಂದಿ ಹಾಡಿ ಹಳ್ಳಿಯಲ್ಲಿ ಶುಚಿತ್ವ ಕಾಪಾಡಿ ಗಾಂಧೀಜಿಯವರ ಕನಸು ನನಸು ಮಾಡುವುದರ ಜೊತೆಗೆ ರೋಗರುಜಿನಗಳಿಂದ ಮುಕ್ತಿ ಪಡೆಯೋಣ. ಸರ್ಕಾರದ ಯೋಜನೆಗೆ ನಾವೆಲ್ಲ ಕೈ ಜೋಡಿಸುವ ಅತಿಥಿಯಾಗಿ ಭಾಗವಹಿಸಿದ ಕುಂದಾಪುರದ ಸಿಟಿ ಜೇಸಿ‌ಐನ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ರಾಘವೇಂದ್ರ ನಾವುಡರು ಮಾತನಾಡಿ ಸ್ವಚ್ಛತಾ ಕಾರ್ಯಕ್ರಮ ತಪಸ್ಸಿನಂತೆ ನಡೆಯಲಿ ಎಂಬ ಧ್ಯೇಯವಾಕ್ಯ ಕೇಳಿಬಂತು.

Swachcha_ Bharat_Yakshagana Swachcha_ Bharat_Yakshagana (2) Swachcha_ Bharat_Yakshagana (1)

ನಂತರ ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ ಸ್ವಚ್ಛ ಭಾರತ, ಬೇಟಿ ಬಜಾವೋ, ಬೇಟಿ ಪಡಾವೋ, ಜನಧನ್ ಮತ್ತು ಸರ್ವಶಿಕ್ಷಣ ಅಭಿಯಾನ ವಿಷಯದ ಬಗ್ಗೆ ಇಳೇಯಣ್ಣನ ಕಥೆ ಯಕ್ಷಗಾನ ಪ್ರದರ್ಶನ ನಡೆಯಿತು.

ಹೆಮ್ಮಾಡಿ-ಕಟ್ಟುವಿನಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರಾಂಗಣದಲ್ಲಿ ಭಾರತ ಸರ್ಕಾರದ ಗೀತೆ ಮತ್ತು ನಾಟಕ ವಿಭಾಗ ಮತ್ತು ನೆಹರು ಯುವ ಕೇಂದ್ರ ಉಡುಪಿ ಇವರ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆದಿತ್ತು.

ಯಕ್ಷದೇಗುಲದ ವ್ಯವಸ್ಥಾಪಕ ಕೋಟ ಸುದರ್ಶನ ಉರಾಳ, ಹರೆಗೋಡು ಯುವಕ ಮಂಡಲದ ಸಂಚಾಲಕರಾದ ಚಂದ್ರ ನಾಯ್ಕ್, ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ ದೇವಾಡಿಗ, ಜೇಸಿ‌ಐಯ ನಾಗಪ್ರಸಾದ್, ಮಹಾವಿಷ್ಣು ಯುವಕ ಮಂಡಲದ ರವಿಶ್, ನೆಹರು ಯುವ ಕೇಂದ್ರದ ಜಿಲ್ಲಾ ಸಲಹೆಗಾರರಾದ ನರಸಿಂಹ ಮತ್ತು ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ಸದಿಯ ನಾಯ್ಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನರಸಿಂಹ ಗಾಣಿಗರು ನಿರೂಪಣೆ ಮಾಡಿದರು.

ಕಲಾವಿದರಾಗಿ ಕೋಟ ಸುದರ್ಶನ ಉರಾಳ, ಲಂಬೋದರ ಹೆಗಡೆ, ದೇವರಾಜ್‌ದಾಸ್, ಗಣಪತಿ ಭಟ್ ಯಲ್ಲಾಪುರ, ನವೀನ್, ತಮ್ಮಣ್ಣ ಗಾಂವ್ಕರ್, ನರಸಿಂಹ ತುಂಗ, ಗಣಪತಿ ಹೆಗಡೆ, ಉಪ್ಪುಂದ ಗಣೇಶ, ರಮೇಶ್, ಉದಯ ಬೋವಿ ಮತ್ತು ಮಾಧವನವರು ಭಾಗವಹಿಸಿದರು.

ಮುಂದೆ ಈ ಕಾರ್ಯಕ್ರಮ  3 ರಂದು ಬೀಜಾಡಿ, 4 ರಂದು ಸೇನಾಪುರ, 5 ರಂದು ವಂಡ್ಸೆಯ ಶಾರ್ಕಿಯಲ್ಲಿ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಕ್ಕೆ ಸ್ಥಳೀಯ ಯುವಕ ಮಂಡಲ ಮತ್ತು ಕುಂದಾಪುರ ಸಿಟಿ ಜೇಸಿ‌ಐಯವರು ಸಹಕಾರ ನೀಡಲಿದ್ದಾರೆ.

Write A Comment