ಕನ್ನಡ ವಾರ್ತೆಗಳು

ಶಿರೂರು: ಎಚ್‌1ಎನ್‌1 ಜ್ವರದಿಂದ ಮಹಿಳೆ ಸಾವು

Pinterest LinkedIn Tumblr

H1N1

ಕುಂದಾಪುರ: ಎಚ್‌1ಎನ್‌1 ಜ್ವರದಿಂದ ಮಹಿಳೆ ಮೃತಪಟ್ಟ ಘಟನೆ ಶಿರೂರು ಗ್ರಾ.ಪಂ. ವ್ಯಾಪ್ತಿಯ ಹಡವಿನಕೋಣೆಯಲ್ಲಿ ನಡೆದಿದೆ.

ಇಲ್ಲಿನ ಬಿಗ್ಮಾ ಹಸೀನಾ (32) ಮೃತಪಟ್ಟ ಮಹಿಳೆ.

ಫೆ. 21ರಂದು ಉತ್ತರಕನ್ನಡಕ್ಕೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಅವರಿಗೆ ಜ್ವರದ ಸೋಂಕು ತಗಲಿದೆ. ಭಟ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿಗೆ ತೆರಳಲು ವೈದ್ಯರು ಸೂಚಿಸಿದ್ದರು. ಮಾರನೇ ದಿನ ಜ್ವರ ಮತ್ತಷ್ಟು ಉಲ್ಬಣಿಸಿದೆ. ಬಳಿಕ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಅವರಿಗೆ ಹೃದಯ ಸಂಬಂಧಿ ತೊಂದರೆಗಳಿರುವುದು ಕಾಯಿಲೆ ಉಲ್ಬಣಿಸಲು ಕಾರಣವಾಗಿದೆ ಎಂದು ವೈದ್ಯರುತಿಳಿಸಿದ್ದಾರೆ.

Write A Comment