ಕನ್ನಡ ವಾರ್ತೆಗಳು

ರಂಗಭೂಮಿ, ಸಿನೇಮಾದಲ್ಲಿ ಕೊಡಿಯಾಲ್ ಬೈಲ್ ರಿಂದ ಇತಿಹಾಸ ನಿರ್ಮಾಣ: ಕರ್ನಿರೆ ವಿಶ್ವನಾಥ ಶೆಟ್ಟಿ

Pinterest LinkedIn Tumblr

mumbai_kodiyal_bail_1

 

ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್

ಮುಂಬಯಿ : ವಿಜಯಕುಮಾರ್ ಕೊಡಿಯಾಲ್ ಬೈಲ್ ರಂಗಭೂಮಿಯಲ್ಲಿ ಕ್ರಾಂತಿಯನ್ನೇ ಮಾಡಿದ ಯಶಸ್ವೀ ಲೇಖಕ ಹಾಗೂ ನಿರ್ದೇಶಕ. ತುಳು ಕಲಾಭಿಮಾನಿಗಳಿಗೆ ತಕ್ಕಂತೆ ನಾಟಕ, ಸಿನೇಮಾಗಳನ್ನು ನೀಡುತ್ತಿರುವ ಕೊಡಿಯಾಲ್ ಬೈಲ್ ರಂಗಭೂಮಿ, ಸಿನೇಮಾದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಎಂದು ಬಂಟರ ಸಂಘ ಮುಂಬಯಿ ಯ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಮಾ.1 ರಂದು ನಗರದ ಕರ್ನಾಟಕ ಸಂಘದ ವಿಶ್ವೇಶ್ವರಯ್ಯ ಸ್ಮಾರಕ ಸಭಾಗೃಹದಲ್ಲಿ ಕಲಾಸಂಗಮದ ’ಅಜ್ಜೆರ್’ ನಾಟಕದ ಮುಂಬಯಿ ಪ್ರವಾಸದ ಕೊನೆಯ ದಿನದ ಪ್ರದರ್ಶನದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು.

mumbai_kodiyal_bail_3 mumbai_kodiyal_bail_2

ಜಾಗತಿಕ ಬಂಟರ ಸಂಘದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಗೌರವ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡುತ್ತಾ ಕೊಡಿಯಾಲ್ ಬೈಲ್ ಅವರ ಮುಂದಿನ ಯೋಜನೆಗೆ ಶುಭ ಹಾರೈಸಿದರು. ಇನ್ನೋರ್ವ ಗೌರವ ಅತಿಥಿ ಬೋಂಬೆ ಬಂಟ್ಸ್ ಅಸೋಷಿಯೇಶನಿನ ಅಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ ಯವರು ಉಪಸ್ಥಿತರಿದ್ದು ಮಾತನಾಡಿದರು. ಮಾತೃಭೂಮಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಮುಂಡ್ಕೂರು ರತ್ನಾಕರ ಶೆಟ್ಟಿ, ಪ್ರವೀಣ್ ಶೆಟ್ಟಿ, ರವೀಂದ್ರನಾಥ ಭಂಡಾರಿ, ಗುಣಾಪಾಲ ಶೆಟ್ಟಿ ಐಕಳ, ಸಿಎ ಸದಾಶಿವ ಶೆಟ್ಟಿ ಜೆ. ಪಿ. ಶೆಟ್ಟಿ, ಸುಧಾಕರ ಶೆಟ್ಟಿ, ಕಳತ್ತೂರು ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದು ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರನ್ನು ಸನ್ಮಾನಿಸಿದರು.

mumbai_kodiyal_bail_4

ತಂಡದ ಸಂಚಾಲಕರಾದ ಕರುಣಾಕರ್ ಶೆಟ್ಟಿ, ಪ್ರಕಾಶ್ ಎಂ ಶೆಟ್ಟಿ, ಮತ್ತು ಪ್ರೇಮ್ ಶೆಟ್ಟಿಯವರನ್ನು ಗೌರವಿಸಲಾಯಿತು. ತಂಡದ ಸಂಚಾಲಕರಾದ ಕರುಣಾಕರ್ ಶೆಟ್ಟಿ, ಪ್ರಕಾಶ್ ಎಂ ಶೆಟ್ಟಿ, ಮತ್ತು ಪ್ರೇಮ್ ಶೆಟ್ಟಿಯವರನ್ನು ಗೌರವಿಸಲಾಯಿತು. ಅಶೋಕ ಪಕ್ಕಳ ಕಾರ್ಯಕ್ರಮವನ್ನು ನಿರ್ವಹಿಸಿದರು.

Write A Comment