ಕನ್ನಡ ವಾರ್ತೆಗಳು

ಗೋಬಿಮಂಚೂರಿ ತಿನ್ನೋವಾಗ ಸ್ವಲ್ಪ ಹುಷಾರು…ಇದು ಬಾರೀ ಡೇಂಜರು..!

Pinterest LinkedIn Tumblr

gobhi Manchoorian

ಉಡುಪಿ: ಹೂಕೋಸಿಗೆ (ಕ್ಯಾಲಿಫ್ಲವರ್‌) ಸಿಂಪಡಿಸುವ ಐದು ಕೀಟನಾಶಕಗಳನ್ನು ಯಾವ ನೀರಿನಿಂದ ತೊಳೆದರೂ ಹೋಗುವುದಿಲ್ಲ. ಆದ್ದರಿಂದಲೇ ಗೋಬಿಮಂಚೂರಿ ಸರ್ವರೋಗ ಕಾರಣ. ಆದರೆ ಬಿಸಿಬಿಸಿಯಾದ ಅರಶಿನದ ನೀರಿನಲ್ಲಿ ಕುದಿಸಿದರೆ ನಾಲ್ಕು ಕೀಟನಾಶಕಗಳು ಹೋಗುತ್ತವೆ ಎನ್ನುವ ಅಂಶವನ್ನು ಬೆಳಗಾವಿಯ ಆಯುರ್ವೇದ ವಿದ್ಯಾರ್ಥಿನಿಯೊಬ್ಬಳು ಪುಣೆಯಲ್ಲಿ ಸಂಶೋಧನೆ ನಡೆಸಿದ್ದಾಳೆ.

ಇದನ್ನು ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಶನ್‌ ಗ್ರೂಪ್‌ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ|ಎಸ್‌.ಅನಂತ ರಾಜ್‌ ಅವರು ಹೊರಗೆಡಹಿದ್ದು ಮಣಿಪಾಲದಲ್ಲಿ ಶನಿವಾರ ನಡೆದ ವಿಜ್ಞಾನ ದಿನಾಚರಣೆಯಲ್ಲಿ. ಇಂತಹ 625 ಸಂಶೋಧನೆಗಳನ್ನು ಡಾ|ಸಿಎನ್‌ಆರ್‌ ನೇತೃತ್ವದ ವಿಶನ್‌ ಗ್ರೂಪ್‌ ನೆರವಿನಿಂದ ವಿದ್ಯಾರ್ಥಿಗಳು ನಡೆಸಿದ್ದಾರೆಂದರು.

ಸಿಗಡಿಯ ತುದಿ ಭಾಗದಲ್ಲಿ ಎಲುಬಿನ ಸಂಧಿ ನೋವುಗಳನ್ನು ನಿವಾರಿಸುವ ಗ್ಲೊಕೊ ನಮಿನ್‌ ಹೈಡ್ರೊಕ್ಲೋರೈಡ್‌ ಇದೆ. ಆದರೆ ಇದನ್ನು ಇಲ್ಲಿ ಕತ್ತರಿಸಿ ಹಾಕುತ್ತಾರೆ. ಕೇವಲ ಎಲೆಗಳಿಗೆ ನೀರು ಹಾಯಿಸಿದರೂ ಸಾಕು, 600 ಟೊಮೆಟೊ ಗಿಡಗಳಿಗೆ ಎರಡು ಬಕೆಟ್‌ ನೀರು ಸಾಕಾಗುತ್ತದೆ. ಬೆಂಗಳೂರು ಮಡಿವಾಳ ಕೆರೆಯ ಕಳೆಗಳನ್ನು ವಿದ್ಯಾರ್ಥಿಯೊಬ್ಬ ತೆಪ್ಪ ರಚಿಸಿ ತೆಗೆದ. ಬಾಳೆ, ದಾಳಿಂಬೆ, ಮೂಸಂಬೆ ಸಿಪ್ಪೆಗಳಿಂದ ತಯಾರಿಸಿದ ಟೂತ್‌ಪೇಸ್ಟ್‌ ಬಾಯಿ ಕ್ಯಾನ್ಸರ್‌ಗೆ ಅತ್ಯುತ್ತಮ ಔಷಧ. ಎಕ್ಕೆಗಿಡದ ಹೂವು ತಿಂದು ಒಂದೇ ತಿಂಗಳಲ್ಲಿ ಅಸ್ತಮಾ ನಿವಾರಣೆ, ಇ ವೇಸ್ಟ್‌ನಿಂದ ಇ ಬ್ರಿಕ್ಸ್‌ಗಳ ತಯಾರಿ ಹೀಗೆ ವಿದ್ಯಾರ್ಥಿಗಳು ನಡೆಸಿದ ಅನೇಕ ವೈಜ್ಞಾನಿಕ ಸಾಧನೆೆಗಳನ್ನು ಡಾ|ಅನಂತ ರಾಜ್‌ ನೀಡಿದರು.

 

1 Comment

Write A Comment