ಕನ್ನಡ ವಾರ್ತೆಗಳು

ಯಾವುದೇ ಪ್ರಶಸ್ತಿಗಳನ್ನು ಹಣಕ್ಕೆ ಮಾರಿಕೊಳ್ಳುವುದು ನೀಚ ಪ್ರವ್ರತ್ತಿ; ಸಚಿವೆ ಉಮಾಶ್ರೀ

Pinterest LinkedIn Tumblr

ಉಡುಪಿ: ಶಿವರಾಮ ಕಾರಂತರು ಯಕ್ಷಗಾನ ಕಲೆಗೆ ಬಾರದೇ ಇದ್ದಿದ್ದರೆ ಈ ಕಲೆಯೂ ಸಹ ಎಲ್ಲ ಕಲೆಗಳಂತೆ ಬಡ ಕಲೆಯಾಗಿಯೇ ಉಳಿಯುತ್ತಿತ್ತು.

ಯಕ್ಷಗಾನ ಬಯಲಾಟ ಅಕಾಡೆಮಿಯಿಂದ ಪ್ರಶಸ್ತಿ ಸ್ವೀಕರಿಸಿದ ಕಲಾವಿದರು ಈ ನೆಲದ ಎಲ್ಲ ಕಲಾ ಪ್ರಕಾರಗಳನ್ನು ಮೈಗೂಡಿಸಿಕೊಂಡ ಪ್ರತಿಭಾ ಸಂಪನ್ನರು. ಯಕ್ಷಗಾನ ಮತ್ತು ಬಯಲಾಟ ಎರಡೂ ಕಲೆಗಳು ಸಮೀಪದ ಸಂಬಂಧವನ್ನು ಹೊಂದಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಅಭಿಪ್ರಾಯಪಟ್ಟರು.

ಪ್ರಶಸ್ತಿಗಳು ಮಾರಾಟವಾಗುತ್ತಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತಾಗಿದ್ದು, ನಮ್ಮ ಸರಕಾರ ಬಂದ ಮೇಲೆ ಯಾವುದೇ ಪ್ರಶಸ್ತಿಗಳು ಮಾರಾಟವಾಗಿಲ್ಲ, ಪ್ರಶಸ್ತಿಗಳನ್ನು ಮಾರಿಕೊಳುವುದು ನೀಚ ಪ್ರವ್ರತ್ತಿಯಾಗಿದೆ. ಇಡೀ ಭಾರತದಲ್ಲಿ ಕಲೆಗೆ ಹಾಗೂ ಕಲಾವಿದರಿಗೆ ಅತ್ಯಧಿಕ ಪ್ರಶಸ್ತಿಗಳನ್ನು ಕರ್ನಾಟಕ ರಾಜ್ಯದಲ್ಲಿ ಕೊಡಲಾಗುತ್ತಿದೆ ಎಂದು ಅವರು ಹೇಳೀದರು.

Yakshagana_Prashasti_Umashri (14) Yakshagana_Prashasti_Umashri (13) Yakshagana_Prashasti_Umashri (22) Yakshagana_Prashasti_Umashri (19) Yakshagana_Prashasti_Umashri (18) Yakshagana_Prashasti_Umashri (17) Yakshagana_Prashasti_Umashri (16) Yakshagana_Prashasti_Umashri (11) Yakshagana_Prashasti_Umashri (8) Yakshagana_Prashasti_Umashri (21) Yakshagana_Prashasti_Umashri (23) Yakshagana_Prashasti_Umashri (26) Yakshagana_Prashasti_Umashri (25)

ಗುರುವಾರ ರಾತ್ರಿ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ಬೆಂಗಳೂರಿನ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ವತಿಯಿಂದ 2012ರಿಂದ 2014ನೇ ಸಾಲಿನ ವರೆಗಿನ ಪಾರ್ತಿ ಸುಬ್ಬ ಪ್ರಶಸ್ತಿ ಮತ್ತು 2013 ಹಾಗೂ 2014ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಯಾರಿಗೆಲ್ಲಾ ಪ್ರಶಸ್ತಿ: ಕಾರ್ಯಕ್ರಮದಲ್ಲಿ ಪಾರ್ತಿ ಸುಬ್ಬ ಪ್ರಶಸ್ತಿಯನ್ನು ಡಾ. ಶಿಮಂತೂರು ನಾರಾಯಣ ಶೆಟ್ಟಿ, ಎಂ.ಆರ್.ರಂಗನಾಥ ರಾವ್ ಮತ್ತು ಜಿ.ಎಸ್. ಭಟ್ಟ ಅವರಿಗೆ ಫಲಪುಷ್ಪ ಸ್ಮರಣಿಕೆಯೊಂದಿಗೆ 1 ಲಕ್ಷ ರೂ. ನಗದನ್ನು ನೀಡಿ ಗೌರವಿಸಲಾಯಿತು. ಅಕಾಡೆಮಿಯ 2013ರ ಗೌರವ ಪ್ರಶಸ್ತಿಯನ್ನು ಮಲ್ಪೆ ವಾಸುದೇವ ಸಾಮಗ, ಕಪ್ಪೆಕರೆ ಸುಬ್ರಾಯ ಭಾಗವತ, ಪ್ರೊ.ಎಸ್.ವಿ. ಉದಯ ಕುಮಾರ್ ಶೆಟ್ಟಿ, ಕೊಕ್ಕಡ್ತಿ ಕೃಷ್ಣಮೂರ್ತಿ, ಬಂಟ್ವಾಳ ಜಯರಾಮ ಆಚಾರ್ಯ, ಬಿ.ಎಂ.ನಿಂಬಗಲ್ಲು ರುದ್ರಯ್ಯ, ನಾರಾಯಣಪ್ಪ ಕಾರಿಗನೂರು, ಎ.ಎನ್.ಚನ್ನಬಸವಯ್ಯ, ಬಸವಲಿಂಗಪ್ಪ ಗುರುಬಸಪ್ಪ ವಿಭೂತೆ ಈಶ್ವರಚಂದ್ರ ಬೆಟಗೋರಿ ಹಾಗೂ 2014ರ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಉದ್ಯಾವರ ಜಯಕುಮಾರ, ಎಂ.ಎ.ನಾಯ್ಕ, ಕಷ್ಣ ಭಂಡಾರಿ, ಮುದಕಪ್ಪ ಹನುಮಪ್ಪ ಹೊಸೂರ, ಸತ್ಯಕ್ಕ, ಸಣ್ಣ ಪಾಲಯ್ಯ, ನೆಲ್ಲಿಗೆರೆ ತಿಮ್ಮಪ್ಪಚಾರ್, ಮಹದೇವಪ್ಪ ಅವರಾಧಿ ಮತ್ತು ಸಣ್ಣಬಸಣ್ಣ ಅವರಿಗೆ ಫಲಪುಷ್ಪ ಸ್ಮರಣಿಕೆಯೊಂದಿಗೆ 10 ಸಾವಿರ ನಗದನ್ನು ನೀಡಿ ಸಚಿವೆ ಉಮಾಶ್ರೀ ಗೌರವಿಸಿದರು.

Yakshagana_Prashasti_Umashri (9) Yakshagana_Prashasti_Umashri (8) Yakshagana_Prashasti_Umashri (7) Yakshagana_Prashasti_Umashri (3) Yakshagana_Prashasti_Umashri (6) Yakshagana_Prashasti_Umashri (5) Yakshagana_Prashasti_Umashri (11) Yakshagana_Prashasti_Umashri (1) Yakshagana_Prashasti_Umashri Yakshagana_Prashasti_Umashri (2) Yakshagana_Prashasti_Umashri (12) Yakshagana_Prashasti_Umashri (10) Yakshagana_Prashasti_Umashri (15) Yakshagana_Prashasti_Umashri (24)

ಬೆಂಗಳೂರು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ನಾಡೋಜ ಬೆಳಗಲ್ಲು ವೀರಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪಿ.ಸಾಧು, ಹಿರಿಯ ಪತ್ರಕರ್ತ ಎ.ಈಶ್ವರಯ್ಯ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯೆ ವಸುಮತಿ ನಾಯಿರಿ ಮೊದಲಾದವರು ಉಪಸ್ಥಿತರಿದ್ದರು.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ರಿಜಿಸ್ಟಾರ್ ಡಿ.ಆರ್. ಮೈಥಿಲಿ ಸ್ವಾಗತಿಸಿದರು. ಅಕಾಡೆಮಿಯ ಸದಸ್ಯ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿಯ ಸದ್ಯರಾದ ಪಿ. ಕಿಶನ್ ಹೆಗ್ಡೆ, ಡಾ. ವಿಜಯ ನಳಿನಿ ರಮೇಶ್, ಪತ್ರಕರ್ತರಾದ ಚಂದ್ರಶೇಖರ ಬೀಜಾಡಿ, ರಾಜೇಶ್ ಗಾಣಿಗ ಅಚ್ಲಾಡಿ, ಪ್ರಭಾಕರ ಆಚಾರ್ಯ, ರಾಮಕಷ್ಣ ಹೇರ್ಳೇ ಮೊದಲಾದವರು ಸನ್ಮಾನ ಪತ್ರ ವಾಚಿಸಿದರು. ಅಕಾಡೆಮಿಯ ಸದಸ್ಯ ಕೆ.ಎಂ. ಶೇಖರ್ ಕಾರ್ಯಕ್ರಮ ನಿರೂಪಿಸಿದರು.

ಯಕ್ಷಗಾನ ಬಯಲಾಟ ಅಕಾಡೆಮಿಯ ಪ್ರಶಸ್ತಿ ಪ್ರದಾನದಲ್ಲಿ ಒಟ್ಟು 3 ಮಂದಿಗೆ ಪಾರ್ತಿ ಸುಬ್ಬ ಪ್ರಶಸ್ತಿ ನೀಡಿ ಗೌರವಿಸಿದರೆ, 19 ಮಂದಿಗೆ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ 22 ಮಂದಿ ಪ್ರಶಸ್ತಿ ಪುರಸ್ಕೃತರಲ್ಲಿ 21 ಮಂದಿ ಪುರುಷರಾದರೆ, ಕೇವಲ ಓರ್ವ ಮಹಿಳೆ ಪ್ರಶಸ್ತಿ ಸ್ವೀಕರಿಸಿದರು. ಆ ಏಕೈಕ ಮಹಿಳಾ ಪ್ರತಿನಿಧಿ ತೊಗಲು ಗೊಂಬೆಯಾಟದ ಸತ್ಯಕ್ಕ ಅವರಾಗಿದ್ದರು.

Write A Comment