ಕನ್ನಡ ವಾರ್ತೆಗಳು

ಇಮಾಂ ಹಾಗೂ ಹಿರಿಯ ವಿದ್ವಾಂಸ ವೌಲಾನಾ ಶೇಖ್ ಅಬ್ದುಲ್ ಖಾದಿರ್ ವಿಧಿವಶ

Pinterest LinkedIn Tumblr

moulana_shek_abhula

ಮಂಗಳೂರು, ಫೆ.26: ನಗರದ ಶಾಹ್ ಮೀರ್ ಸೈಯದ್ ಅಲಿ ಮಸೀದಿಯ ಇಮಾಂ ಹಾಗೂ ಹಿರಿಯ ವಿದ್ವಾಂಸ ವೌಲಾನಾ ಹಝ್ರತ್ ಶೇಖ್ ಅಬ್ದುಲ್ ಖಾದಿರ್  ಬುಧವಾರ ಕುದ್ರೋಳಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ಮೃತರು ಐವರು ಪುತ್ರಿಯರು ಹಾಗೂ ಐವರು ಪುತ್ರರನ್ನು ಅಗಲಿದ್ದಾರೆ.

ದಿವಂಗತ ಹಝ್ರತ್ ಸೈಯದ್ ಯೂಸುಫ್ ಸಾಹೇಬ್ ಅವರ ಮಾರ್ಗದರ್ಶನದಲ್ಲಿ ಆಲಿಂ ಕೋರ್ಸ್ ಪೂರ್ತಿಗೊಳಿ ಸಿದ ಬಳಿಕ ಶಾಹ್ ಮೀರ್ ಸೈಯದ್ ಅಲಿ ಮಸೀದಿಯಲ್ಲಿ ಇಮಾಮರಾಗಿ ಸುಮಾರು 65 ವರ್ಷಗಳ ಕಾಲ ಸೇವೆ ಸಲ್ಲಿಸಿದರು.

ಕಾರ್ಕಳದ ದಾರುಲ್ ಉಲೂಂ ಅಲ್ ಮಆಲಿಫ್‌ನ ಉಪಾಧ್ಯಕ್ಷರಾಗಿ, ಶಿರ್ವದ ಫೈಝುಲ್ ಇಸ್ಲಾಂ ಮದ್ರಸದ ಟ್ರಸ್ಟಿ ಸಹಿತ ಹಲವು ಸಂಘ, ಸಂಸ್ಥೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಮೂಲತಃ ಬೆಳ್ತಂಗಡಿ ತಾಲೂಕಿನ ಕಾವಲಕಟ್ಟೆಯವರಾದ ಅವರು ತಮ್ಮ ನಿವಾಸವನ್ನು ಮಂಗಳೂರಿನ ಕುದ್ರೋಳಿಗೆ ವರ್ಗಾಯಿಸಿದ್ದರು.
ಗುರುವಾರ ಮಧ್ಯಾಹ್ನ 12ಗಂಟೆಗೆ ಬಂದರಿನ ಝೀನತ್ ಬಕ್ಷ್ ಜುಮಾ ಮಸೀದಿಯಲ್ಲಿ ಮಯ್ಯತ್ ನಮಾಝ್ ನೆರವೇರಲಿದ್ದು, ಬಳಿಕ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

Write A Comment