ಕನ್ನಡ ವಾರ್ತೆಗಳು

ಗಂಗೊಳ್ಳಿ : ಸೋಮಶೇಖರ್ ಖಾರ್ವಿಗೆ ದೇಹದಾರ್ಡ್ಯ ಪ್ರಶಸ್ತಿಗಳ ಮಾಲೆ

Pinterest LinkedIn Tumblr

ಕುಂದಾಪುರ: ಶ್ರೀ ರಾಮಾಂಜನೇಯ ಹೆಲ್ತ್ ಎಂಡ್ ಫಿಟ್‌ನೆಸ್ ಜಿಮ್ ಅಂಬಲಪಾಡಿ ಇವರು ಪ್ರಾಯೋಜಿಸಿದ ಉಡುಪಿ ಜಿಲ್ಲಾ ಬಾಡಿ ಬಿಲ್ಡಿಂಗ್ ಚಾಂಪಿಯನ್ ಶಿಫ್ ಸ್ಪರ್ಧೆಯಲ್ಲಿ 65 ಕೆ.ಜಿ. ವಿಭಾಗದಲ್ಲಿ ಮಿಸ್ಟರ್ ಉಡುಪಿ-2015 ಪ್ರಶಸ್ತಿಯೊಂದಿಗೆ ಪ್ರಥಮ ಸ್ಥಾನವನ್ನು, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ಮುದೋಳ ಇವರು ಸಂಘಟಿಸಿದ ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಚಾಂಪಿಯನ್ ಶಿಫ್ ಜೈ ಭೀಮ್-2015 ಪ್ರಶಸ್ತಿಯೊಂದಿಗೆ ಪ್ರಥಮ ಸ್ಥಾನವನ್ನು ಹಾಗೂ ಕರ್ನಾಟಕ ಬಾಡಿ ಬಿಲ್ಡರ್ ಅಸೋಸಿಯೇಶನ್ ಮತ್ತು ಡಿಡಿಬಿಬಿ‌ಎ ಇವರು ಧಾರವಾಡದಲ್ಲಿ ಆಯೋಜಿಸಿದ ಮಿಸ್ಟರ್ ಶ್ರಮಜೀವಿ-2015 ಪ್ರಶಸ್ತಿಯೊಂದಿಗೆ ದ್ವಿತೀಯ ಸ್ಥಾನವನ್ನು ಮತ್ತು ನ್ಯೂ ಹರ್ಕ್ಯುಲೆಸ್ ಜಿಮ್ ಎಂಟ್ ಫಿಟ್‌ನೆಸ್ ಸೆಂಟರ್ ಕುಂದಾಪುರ ಪ್ರಾಯೋಜಿಸಿದ ಮಿಸ್ಟರ್ ಕುಂದಾಪುರ-2015 ಪ್ರಶಸ್ತಿಯೊಂದಿಗೆ ದ್ವಿತೀಯ ಸ್ಥಾನವನ್ನು ಗಂಗೊಳ್ಳಿಯ ಸೋಮಶೇಖರ್ ಖಾರ್ವಿ ಇವರು ಪಡೆದಿರುತ್ತಾರೆ.

Jim_Somashekhara_Karvi (2) Jim_Somashekhara_Karvi Jim_Somashekhara_Karvi (1)

 

ಇವರು ಗಂಗೊಳ್ಳಿಯ ಲಲಿತ್ ಫಿಟ್‌ನೆಸ್ ಸೆಂಟರ್ ವ್ಯಾಯಾಮ ಶಾಲೆಯ ಸದಸ್ಯರಾಗಿದ್ದು, ಬಾಡಿಬಿಲ್ಡರ್ ದೇವೇಂದ್ರ ಶಿಪಾಯಿ ಗಂಗೊಳ್ಳಿ ಇವರ ಶಿಷ್ಯರಾಗಿರುತ್ತಾರೆ. ಪ್ರಸ್ತುತ ಸೋಮಶೇಖರ್ ಖಾರ್ವಿ ರಾಷ್ಟ್ರೀಯ ಚಾಂಪಿಯನ್ ಶಿಫ್ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾರೆ.

Write A Comment