ಕನ್ನಡ ವಾರ್ತೆಗಳು

ಆಧಾರ ಕಾರ್ಡ್‌ ನೋಂದಾವಣೆ ಪ್ರಕ್ರಿಯೆಯಲ್ಲಿ ಹಣ ವಸೂಲಿ ದಂಧೆ : ಡಿವೈ‌ಎಫ್‌ಐನಿಂದ ಪ್ರತಿಭಟನೆ

Pinterest LinkedIn Tumblr

ಕುಂದಾಪುರ: ಆಧಾರ್ ಕಾರ್ಡ್ ನೋಂದಾವಣೆ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಹಣ ವಸೂಲಿ ದಂಧೆಯ ವಿರುದ್ಧ ಫಲಾನುಭವಿಗಳು ಹಾಗೂ ಡಿವೈ‌ಎಫ್‌ಐ ಕಾರ್ಯಕರ್ತರು ಮಂಗಳವಾರ ಮಧ್ಯಾಹ್ನ ಕುಂದಾಪುರದ ಆಧಾರ್ ಕಾರ್ಡ್ ನೋಂದಾವಣೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Dyfi_Protest_Adhar Dyfi_Protest_Adhar (1) Dyfi_Protest_Adhar (3) Dyfi_Protest_Adhar (4) Dyfi_Protest_Adhar (5) Dyfi_Protest_Adhar (6) Dyfi_Protest_Adhar (7) Dyfi_Protest_Adhar (8) Dyfi_Protest_Adhar (9)

 

ಆದರೆ ಈ ವೇಳೆಗೆ ಜಿಲ್ಲಾಧಿಕಾರಿಗಳಿಗೆ ದೂರವಾಣಿಯಲ್ಲಿ ದೂರು ನೀಡಿದ ನಂತರ ಎಚ್ಚೆತ್ತ ತಾಲೂಕು ಆಡಳಿತ ಸ್ಥಳಕ್ಕೆ ಬಾರದೇ ಪೊಲೀಸರನ್ನು ಕಳಿಸಲಾಗಿದ್ದು, ಸ್ಥಳಕ್ಕಾಗಮಿಸಿದ್ದ ಪೊಲೀಸರು ಫಲಾನುಭವಿಗಳನ್ನೇ ತರಾಟೆಗೆತ್ತಿಕೊಂಡರು. ಆಗ ಮತ್ತಷ್ಟು ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪೊಲೀಸರು ಆರೋಪಿತ ರಿಕ್ಷಾ ಚಾಲಕ ಹಾಗೂ ಇತರ ಮಧ್ಯವರ್ತಿಗಳನ್ನು ಠಾಣೆಗೆ ಕರೆದೊಯಿದ್ದು, ಎಚ್ಚರಿಕೆ ನೀಡಿದ್ದಾರೆ. ಇದೇ ಸಂದರ್ಭ ಇನ್ನು ಮುಂದೆ ಇಂತಹಾ ಘಟನೆಗಳು ನಡೆಯದಂತೆ ಪೊಲೀಸರು ನೆರೆದವರಿಗೆ ಭರವಸೆ ನೀಡಿದರು.

ಆದರೆ ಆಧಾರ್ ಅವ್ಯವಹಾರ ಪೊಲೀಸ್ ಇಲಾಖೆಗೆ ಸಂಬಂಧಿಸಿಲ್ಲವಾಗಿದ್ದು, ತಾಲೂಕು ಆಡಳಿತ ಏನು ಕ್ರಮ ಕೈಗೊಳ್ಳುತ್ತದೆ ಎನ್ನುವುದನ್ನು ಜನ ನಿರೀಕ್ಷಿಸುತ್ತಿದ್ದಾರೆ.

Write A Comment