ಕನ್ನಡ ವಾರ್ತೆಗಳು

ಕದ್ರಿ ಉದ್ಯಾನವನದ ಜಿಂಕೆವನ ನವೀಕರಿಸಲು 4.97 ಕೋ.ರೂ. ಅನುದಾನ ಮಂಜೂರು

Pinterest LinkedIn Tumblr

lobo_press_meet_1

ಮಂಗಳೂರು, ಫೆ.24 : ಕದ್ರಿ ಉದ್ಯಾನವನದ ಬಳಿ ಇರುವ ಹಳೆ ಜಿಂಕೆ ಪಾರ್ಕ್‌ನ್ನು ನವೀಕರಿಸಲು ರಾಜ್ಯ ಹಣಕಾಸು ನಿಯಮಿತದ ವತಿಯಿಂದ 4.97 ಕೋ.ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ನವೀಕರಣ ಯೋಜನೆಯ ಮೂಲಕ ಹಳೆ ಜಿಂಕೆ ವನದಲ್ಲಿರುವ ಸುಮಾರು 4 ಎಕರೆ ಒಂದು ಸೆಂಟ್ಸ್ ಜಮೀನಿನ ಸುತ್ತಲೂ ಆವರಣ ಗೋಡೆ, ವಾಯು ವಿಹಾರ, ಪಾದಚಾರಿ ಪಥ, ಲೇಸರ್ ಶೋ, ಸಂಗೀತ ಕಾರಂಜಿ, ಉದ್ಯಾನವನದ ಒಳಗಡೆ ಪೊಜೆಕ್ಟರ್ ಕೋಣೆ, ಆ್ಯಂಪಿ ಥಿಯೇಟರ್, ಉದ್ಯಾನವನದ ಮುಂಭಾಗದಲ್ಲಿ ಉಪಹಾರದ ಸ್ಟಾಲ್‌ಗಳನ್ನು ನಿರ್ಮಿಸಲಾಗುವುದು.

lobo_press_meet_2 lobo_press_meet_3 lobo_press_meet_4 lobo_press_meet_5

ಶಾಸಕರ ಅನುದಾನ ಹಾಗೂ ಇತರ ದಾನಿಗಳ ಸಹಕಾರದಿಂದ ಪ್ರವೇಶ ದ್ವಾರ ಸೇರಿದಂತೆ ಜಿಂಕೆ ವನದ ಅಭಿವೃದ್ಧಿಗೆ ಪೂರಕವಾದ ಯೋಜನೆಯನ್ನು ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಿರ್ಮಿಸುವ ಯೋಜನೆ ಹೊಂದಿರುವುದಾಗಿ ಶಾಸಕ ಲೋಬೊ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮನಪಾ ಆಯುಕ್ತ ಮುಹಮ್ಮದ್ ನಝೀರ್, ನಗರ ಯೋಜನಾ ಸಮಿತಿಯ ಸದಸ್ಯ ರಘು ಮತ್ತಿತರರು ಉಪಸ್ಥಿತರಿದ್ದರು.

Write A Comment