ಕನ್ನಡ ವಾರ್ತೆಗಳು

ಕಿನ್ನಿಗೋಳಿ: ಚರ್ಚ್‌ಗಳಿಗೆ ಸಿಸಿ ಕ್ಯಾಮಾರ ಅಳವಡಿಸಲು ಸೂಚನೆ.

Pinterest LinkedIn Tumblr

cctv-camera_0_0

ಮೂಲ್ಕಿ,ಫೆ.24  : ಕಿನ್ನಿಗೋಳಿ, ಮೂಲ್ಕಿಯ ಕಾರ್ನಾಡು, ಹಳೆಯಂಗಡಿಯಲ್ಲಿರುವ ಕ್ರೈಸ್ತರ ಧಾರ್ಮಿಕ ಕೇಂದ್ರಗಳಲ್ಲಿ ಸೂಕ್ತವಾಗಿ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲು ಮೂಲ್ಕಿ ಠಾಣಾ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ಎಲ್ಲಾ ಚರ್ಚ್‌ಗಳಿಗೆ ಸ್ವತಹ ಭೇಟಿ ನೀಡಿ ಪರಿಶೀಲನೆ ನಡೆಸಿ ಸಿಸಿ ಕ್ಯಾಮಾರವನ್ನು ಅಳವಡಿಸಲು ಸೂಚನೆ ನೀಡಿದ್ದಾರೆ.

ಕಿನ್ನಿಗೋಳಿಯ ಕೊಸೆಸಾವೂ ಅಮ್ಮನವರ ಚರ್ಚ್‌ನ ಭದ್ರತೆ ವಿಷಯಗಳಿಗೆ ಸಂಭಂದಿಸಿದಂತೆ ವಿಶೇಷ ಸಭೆಯನ್ನು ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ಧರ್ಮಗುರು ವಿನ್ಸೆಂಟ್ ಮೊಂತೇರೋರವರೊಂದಿಗೆ ಚರ್ಚೆ ನಡೆಸಿ ಚರ್ಚ್‌ನಲ್ಲಿ ಪ್ರತಿ ಭಾನುವಾರ ಹಾಗೂ ಹಬ್ಬದ ದಿನಗಳಲ್ಲಿ ನಡೆಯುವ ವಿಶೇಷ ಪ್ರಾರ್ಥನೆ ಮತ್ತು ಕಾರ್ಯಕ್ರಮಗಳು ನಡೆಯುತ್ತಿದೆ. ಅಲ್ಲದೇ ಶುಕ್ರವಾರ ಮತ್ತು ಭಾನುವಾರ 10 ರಿಂದ 12 ಗಂಟೆಯವರೆಗೆ ಪ್ರಾರ್ಥನೆಗಳು ನಡೆಯುತ್ತಿದ್ದು, ಸುಮಾರು ೫೦೦ಕ್ಕಿಂತಲೂ ಮೆಲ್ಪಟ್ಟು ಭಕ್ತಾಧಿಗಳು ಸೇರುತ್ತಿದ್ದಾರೆ ಎಂದು ವಿವರಿಸಲಾಗಿದೆ.

ಚರ್ಚ್‌ಗೆ ಕೂಡಲೆ ಸಿಸಿ ಕ್ಯಾಮರವನ್ನು ಆಳವಡಿಸಬೇಕು, ಸೆಕ್ಯುರಿಟಿ ಗಾರ್ಡ್‌ಗಳನ್ನು ನೇಮಕ ಮಾಡಿ ಅವರಿಗೆ ರಾತ್ರಿ ಪಾಳಯದಲ್ಲಿ ಸೂಕ್ತವಾಗಿ ಕರ್ತವ್ಯ ನಿರ್ವಹಿಸುವಂತೆ ಸಲಹೆ ಸೂಚನೆಗಳನ್ನು ಠಾಣೆಯಿಂದ ಪಡೆಯಬೇಕು ಎಂದು ನಿರ್ದೇಶಿಸಿದ್ದಾರೆ. ಜೊತೆಗೆ ಚರ್ಚ್ ಸುತ್ತಲೂ ಲೈಟಿನ ಸುವ್ಯವಸ್ಥೆಯನ್ನು ಪರಿಶೀಲಿಸಿದರು. ಈ ಸಂಧರ್ಭದಲ್ಲಿ ವಿವಿಧ ವಾರ್ಡ್‌ನ ಗುರಿಕಾರರು ಹಾಜರಿದ್ದರು.

ಹಳೆಯಂಗಡಿಯ ಎಬಿನೆಜರ್ ಚರ್ಚ್‌ನ ಭದ್ರತೆ ವಿಷಯಗಳಿಗೆ ಸಂಬಂಧಿಸಿದ ಧರ್ಮಗುರು ಸನಲ್‌ರೊಂದಿಗೆ ಚರ್ಚೆ ನಡೆಸಿದ ಇನ್ಸ್‌ಪೆಕ್ಟರ್ ಅಲ್ಲಿ ನಡೆಯುವ ಪ್ರಾರ್ಥನೆ ಮತ್ತು ಮೆರವಣಿಗೆ, ಪ್ರವಚನ ಕಾರ್ಯಕ್ರಮ ಮತ್ತು ಕಾರ್ಯಕ್ರಮಗಳ ಬಗ್ಗೆ ವಿವರವನ್ನು ಪಡೆದು ಪ್ರತೀ ಬಾರಿಯೂ ಠಾಣೆಗೆ ಮಾಹಿತಿ ನೀಡಬೇಕು. ಚರ್ಚ್‌ನಲ್ಲಿಯೇ 25ಮಂದಿ ಭಕ್ತಾಧಿಗಳು ಉಳಿದುಕೊಳ್ಳುವ ವ್ಯವಸ್ಥೆಯ ಬಗ್ಗೆಯೂ ಅವರ ವಿವರವನ್ನು ಪಡೆದರು.

ಕಾರ್ನಾಡು ಡಿವೈನ್ ಕಾಲ್ ಸೆಂಟರ್ ಚರ್ಚ್ ನಲ್ಲಿ ಮುಖ್ಯಸ್ಥ ವಲೇರಿಯನ್ ಫೆರ್ನಾಂಡಿಸ್‌ರೊಂದಿಗೆ ಮಾತುಕತೆ ನಡೆಸಿ ಇಲ್ಲಿನ ಚರ್ಚ್‌ನಲ್ಲಿ ಕೆಲವೊಂದು ವಿಶೇಷ ಕಾರ್ಯಕ್ರಮದಲ್ಲಿ ಪೊಲೀಸ್ ಬಂದೋಬಸ್ತನ್ನು ನೀಡಬೇಕು ಎಂಬ ಬೇಡಿಕೆಗೆ ಸಮ್ಮತಿ ಸೂಚಿಸಿದರು. ಅಲ್ಲಿನ ಸಿಸಿ ಕ್ಯಾಮರಾದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಭದ್ರತೆಗೆ ಆದ್ಯತೆ ನೀಡಲು ಸೂಚನೆ ನೀಡಿದರು.

Write A Comment