ಕನ್ನಡ ವಾರ್ತೆಗಳು

ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ – ಶ್ರೀ ಕ್ಷೇತ್ರದ ನಾಗಬನದಚಿತ್ರಕೂಟ, ಪಂಜುರ್ಲಿದೈವದ ಗುಡಿಯ ಪುನರ್‌ನಿರ್ಮಾಣ, ನವೀಕೃತ ಗುಳಿಗ ಸನ್ನಿದಿ, ಬ್ರಹ್ಮಕಲಶೋತ್ಸವ

Pinterest LinkedIn Tumblr

kalikaba_news_photo_1

ಮಂಗಳೂರು,ಫೆ.23 : ಇಲ್ಲಿನ ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ – ಶ್ರೀ ಕ್ಷೇತ್ರದ ನಾಗಬನದ ಚಿತ್ರಕೂಟ, ಪಂಜುರ್ಲಿ ದೈವದ ಗುಡಿಯ ಪುನರ್‌ನಿರ್ಮಾಣ, ನವೀಕೃತ ಗುಳಿಗ ಸನ್ನಿಧಿ, ಬ್ರಹ್ಮಕಲಶೋತ್ಸವ ಅಷ್ಟೋತ್ತರ ಶತಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು, ಪೀಠಾಧೀಶ್ವರರು, ಶ್ರೀಮದ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನಂ ಸರಸ್ವತೀ ಪೀಠ, ಕಟಪಾಡಿ ಗುರುಗಳವರ ಅಮೃತ ಹಸ್ತದಲ್ಲಿ ರವಿವಾರ ಸಂಪನ್ನಗೊಡಿತು. ಕಾರ್ಯಕ್ರಮಗಳು ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತ ದಾಮೋದರ ಆಚಾರ್ಯ ಪ್ರಧಾನ‌ ಅರ್ಚಕರು ಶ್ರೀ ಗುರುಮಠ ಮಂಗಳೂರು, ಇವರ ಮಾರ್ಗದರ್ಶನದಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಲಕ್ಷ್ಮೀಕಾಂತ ಶರ್ಮಾ, ಸಾಲಿಗ್ರಾಮ ತಂತ್ರಿಗಳು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಮಂಗಳೂರು, ಇವರ ಆಚಾರ್ಯತ್ವದಲ್ಲಿ, ಶ್ರೀ ಕ್ಷೇತ್ರದ ಪ್ರಧಾನ‌ಅರ್ಚಕರಾದ ಬ್ರಹ್ಮಶ್ರೀ ಕೆ.ಧನಂಜಯ ಪುರೋಹಿತ್ ಹಾಗೂ ಸಮಾಜದ ವೈಧಿಕರಿಂದ ಸಂಪನ್ನಗೊಂಡಿತು.

kalikaba_news_photo_2

ನಾಗಬನ ಮತ್ತು ದೈವದಗುಡಿ ಗುಳಿಗ ಸನ್ನಿಧಿ ನಿರ್ಮಾಣ ಪ್ರಸಿದ್ಧ ವಾಸ್ತು ಶಿಲ್ಪ ಶ್ರೀ ಪಯ್ಯನೂರು ಶಶಿಧರನ್ ಮತ್ತು ವಾಸ್ತುಶಿಲ್ಪಿ ಶ್ರೀ ಜೋಕಟ್ಟೆ ಪ್ರಭಾಕರ ಆಚಾರ್ಯ ಇವರು ನಿರ್ವಹಿಸಿದ್ದು, ನಾಗಬನದ ಶಿಲ್ಪದ ಕೆಲಸವನ್ನು ಕಾರ್ಕಳ ಸತೀಶ್ ಆಚಾರ್ಯವಹಿಸಿದ್ದು, ದೈವದ ಗುಡಿಯ ಕಾಷ್ಠ ಶಿಲ್ಪವನ್ನು ಅಶ್ವಥಪುರ ಬಾಬುರಾಯ ಆಚಾರ್ಯ ನಿರ್ವಹಿಸಿದ್ದಾರೆ. ಶ್ರೀ ಕೈಂತಿಲ ಸದಾಶಿವ ಆಚಾರ್ಯ, ಕಾರ್ಯಾಧ್ಯಕ್ಷರು, ಜೀರ್ಣೋದ್ಧಾರ ಸಮಿತಿ, ಶ್ರೀ ಧನಂಜಯ ಪಾಲ್ಕೆ, ಅಧ್ಯಕ್ಷರು, ಬ್ರಹ್ಮಕಲಶೋತ್ಸವ ಸಮಿತಿ, ಶ್ರೀ ಕೆ. ಲೋಕೇಶ್ ಆಚಾರ್ಯ, ಪುಂಜಾಲ್‌ಕಟ್ಟೆ, ಮೊಕ್ತೇಸರರು, ಕೆ. ಉಮೇಶ್ ಆಚಾರ್ಯ, ಆಡಳಿತ ಮಂಡಳಿ ಸದಸ್ಯರು ಜೀರ್ಣೋದ್ಧಾರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Write A Comment