ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್
ಮುಂಬಯಿ : ಕಲಾ ಸಂಗಮ ನಾಟಕ ತಂಡವು ಮುಂಬಯಿ ಪ್ರವಾಸದಲ್ಲಿದ್ದು ದಹಿಸರ್ ನ ರಾಧಾಕೃಷ್ಣ ಮಂದಿರದಲ್ಲಿ ಮುಂಬಯಿಯ ಮೊದಲ ಪ್ರದರ್ಶನವನ್ನು ಮೀರಾರೋಡ್ ಮಹಾಲಿಂಗೇಶ್ವರ ದೇವಸ್ಥಾನದ ಶಾಂತಿಂಜ ಜನಾರ್ಧನ ಭಟ್ ಅವರು ಉದ್ಘಾಟಿಸಿ ಶುಭ ಹಾರೈಸಿದರು.
ಇನ್ನಂಜೆ ಚಂದ್ರಹಾಸ ಗುರುಸ್ವಾಮಿಯವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ನಿತ್ಯಾನಂದ ಸ್ವಾಮಿಯವರ ಅನುಗ್ರಹ ಕಲಾ ಸಂಗಮ ತಂಡಕ್ಕೆ ಸದಾ ಇರಲಿ ಎಂದರು. ನಾಟಕದ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ದಂಪತಿಯನ್ನು ಸನ್ಮಾನಿಸಲಾಯಿತು. ಸಂತೋಷ್ ಪುತ್ರನ್ ಅವರು ಸಮಾರಂಭದ ಅಧ್ಯಕ್ಷತೆಯನು ವಹಿಸಿದರು.
ಲಕ್ಷ್ಮಣ್ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿದರು.