ಕನ್ನಡ ವಾರ್ತೆಗಳು

ತಾಂತ್ರಿಕ ಶಿಕ್ಷಣದಲ್ಲಿ ಸಂಶೋಧನಾ ಸಂಸ್ಕೃತಿಯನ್ನು ಪ್ರೋತ್ಸಾಹಿಸಿ : ಡಾ. ಕೆ.ಭೈರಪ್ಪ

Pinterest LinkedIn Tumblr

CEC_college_day_2

ಮಂಗಳೂರು,ಫೆ.23  : ತಾಂತ್ರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸಂಶೋಧಾನಾ ಚಟುವಟಿಕೆಗಳಿಗೆ ಒತ್ತು ನೀಡುವುದರಿಂದ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಯ ಜತೆಗೆ ಅವರ ಉದ್ಯಮ ಶೀಲತೆಯೂ ಹೆಚ್ಚುತ್ತದೆ. ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಅಭಿವೃದ್ಧಿಯೂ ಇದರಿಂದ ಸಾಧ್ಯವಾಗುತ್ತದೆ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಉಪ ಕುಲಪತಿ ಡಾ. ಕೆ. ಭೈರಪ್ಪ ಹೇಳಿದರು. ಅವರು ಬೆಂಜನಪದವು ಕೆನರಾ ಇಂಜಿನೀಯರಿಂಗ್ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆಗಳಾಗುತ್ತಿರುವ ಇಂದಿನ ದಿನಗಳಲ್ಲಿ ಬೋಧನಾ ಕ್ರಮದಲ್ಲಿ ಬದಲಾವಣೆಯ ಮೂಲಕ ಅಧ್ಯಯನ ಪ್ರವಾಸ, ಸಂಶೋಧನೆ, ಪ್ರಯೋಗಾಲಯ ಸಹಿತ ಸೆಮಿನಾರುಗಳಿಗೆ ಹಾಗೂ ಪರಿಸರ ಕಾಳಜಿಯ ಬೆಳವಣಿಗೆಗೆ ಹೆಚ್ಚಿನ ಮಹತ್ವ ನೀಡಿದಾಗ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಲು ಸಾಧ್ಯ ಎಂದವರು ಹೇಳಿದರು. ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಎಸೊಸಿಯೆಶನ್ ಅಧ್ಯಕ್ಷ ಎಸ್.ಎಸ್. ಕಾಮತ್ ಉದ್ಯಮರಂಗದಲ್ಲಿ ಸನ್ನಡತೆಯ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕಾದರೆ ಶಿಕ್ಷಣದಲ್ಲಿ ಮೌಲ್ಯಗಳ ಸಂಪಾದನೆ ಮಾಡಿಕೊಳ್ಳುವ ಮನೋಭಾವ ವಿದ್ಯಾರ್ಥಿಗಳದ್ದಾಗಬೇಕು ಎಂದರು.

ಕೆನರಾ ಹೈಸ್ಕೂಲ್ ಅಸೋಸಿಯೇಶನ್‌ನ ಕಾರ್ಯದರ್ಶಿ ಎಂ.ರಂಗನಾಥ ಭಟ್ ಶುಭಹಾರೈಸಿದರು. ವಿದ್ಯಾರ್ಥಿಗಳಾದ ಅಕ್ಷತಾ ಶೆಣೈ ಶುಭಾಶಂಸನೆ ಹಾಗೂ ರಶ್ಮಿತಾ ಪಿಂಟೋ , ಹಳೆ ವಿದ್ಯಾರ್ಥಿ ಶಿಶಿರ್ ಭಟ್ ಅನಿಸಿಕೆ ವ್ಯಕ್ತ ಪಡಿಸಿದರು. ಡಾಕ್ಟರೇಟ್ ಪದವಿ ಪಡೆದ ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ, ಬಿ.ಕೃಷ್ಣ ಪ್ರಭು ಹಾಗೂ ಪ್ರಾಧ್ಯಾಪಕ ಡಾ. ವೆಂಕಟೇಶ್ ಎನ್. ಅವರನ್ನು ಸಮ್ಮಾನಿಸಲಾಯಿತು.

CEC_college_day_1

ಕಾಲೇಜಿನ ಸಂಚಾಲಕ ಎಂ.ಪದ್ಮನಾಭ ಪೈ ಸ್ವಾಗತಿಸಿದರು. ಪ್ರಾಂಶುಪಾಲ ಡಾ.ಗಣೇಶ್ ವಿ.ಭಟ್ ವಾರ್ಷಿಕ ವರದಿ ವಾಚಿಸಿದರು. ಸ್ಪರ್ಧಾ ವಿಜೇತರಿಗೆ ಬಹುಮಾನಗಳ ವಿತರಣೆ ಜತಗೆ ಶೈಕ್ಷಣಿಕ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ ಪಂಚಮಾಲ್ ಗೋಪಾಲಕೃಷ್ಣ ಶೆಣೈ, ಜತೆ ಕೋಶಾಧಿಕಾರಿ ವಾಮನ ಕಾಮತ್, ಸದಸ್ಯರಾದ ಕೊಚ್ಚಿಕಾರ್ ಸುಧಾಕರ ಪೈ, ಎಂ.ಗಣೇಶ ಕಾಮತ್, ಸುರೇಶ್ ಕಾಮತ್ ,ವಿದ್ಯಾರ್ಥಿ ಸಂಘದ ನಾಯಕ ಆಸೀಫ್ ಸುರೇಶ್ ವಾಘ್ ಉಪಸ್ಥಿತರಿದ್ದರು. ಕಾಂiiಕ್ರಮದ ಮುಖ್ಯ ಸಮನ್ವಯಕಾರ ಪ್ರೊ. ಎನ್. ಸತೀಶ್ ಕುಮಾರ್ ವಂದಿಸಿದರು.

ಡಾ.ರಾಜಲಕ್ಷ್ಮೀ ಸಾಮಗ ಅತಿಥಿಯನ್ನು ಪರಿಚಯಿಸಿದರು. ಪ್ರೊ. ಎಸ್. ರವೀಂದ್ರ ಮಲ್ಯ ಬಹುಮಾನಿತರ ಹಾಗೂ ಸಮ್ಮಾನಿತರ ವಿವರ ನೀಡಿದರು. ಕಾಲೇಜಿನ ಉದ್ಯೋಗ ನೇಮಕಾತಿ ಮತ್ತು ತರಬೇತಿ ಅಧಿಕಾರಿ ದೀಪಾ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Write A Comment