ಕನ್ನಡ ವಾರ್ತೆಗಳು

ಡಾ. ಎಸ್. ಜಾನಕಿಗೆ ನಾದನಮನ; ಕೋಟೇಶ್ವರದಲ್ಲಿ ನಡೆಯಿತು ಸ್ವರ ಸಮ್ಮಿಲನ; 24 ಹಾಡುಗಳಿಗೆ ತಲೆದೂಗಿದ ಜನರು; ಜಾನಕಿಯಮ್ಮನಿಗೆ ಅಭಿನಂದನೆ

Pinterest LinkedIn Tumblr

ಕುಂದಾಪುರ: ಗಣಪತಿ ಸ್ತುತಿಯ ಬಳಿಕ ಸಾಮಗಾನ ಕೋಗಿಲೆ, ರಾಗರಾಣಿ ಶಾರದೆ ಹಾಡಿನ ಮೋಡಿಗೆ ಆ ಸ್ಥಳಕ್ಕೆ ಆಗಮಿಸಿದ್ದ ಜನರು ಫುಲ್ ಖುಶ್ ಆಗಿದ್ದರು. ಆ ಬಳಿಕ ಹಳೆ ಚಿತ್ರದ ಹಾಡುಗಳಿಗೆ ಜನರು ನಿಜಕ್ಕೂ ಫಿದಾ ಆಗಿದ್ದರು. ಹೌದು ಕೋಟೇಶ್ವರದ ಯುವ ಮೆರಿಡಿಯನ್ ಇದರ ಒಪೆರಾ ಪಾರ್ಕ್ ಸಭಾಂಗಣದಲ್ಲಿ ನಡೆದ ಡಾ|| ಎಸ್. ಜಾನಕಿ ಅಭಿನಂದನಾ ಸಮಿತಿ ಕುಂದಾಪುರ ಅರ್ಪಿಸುವ ಪ್ರಥಮ್ ಇನ್& ರೆಸಾರ್ಟ್ ಜಪ್ತಿ ಇವರು ಪ್ರಾಯೋಜಿಸಿದ ಡಾ|| ಎಸ್. ಜಾನಕಿಯವರ ಅಭಿನಂದನಾ ಸಮಾರಂಭ ಹಾಗೂ ಸಂಗೀತ ರಸಸಂಜೆ ಕಾರ್ಯಕ್ರಮದ ಅದ್ಭುತ ಕ್ಷಣಗಳನ್ನು ಸಂಗೀತಪ್ರಿಯರು ಕಣ್ತುಂಬಿಕೊಂಡ ಬಗೆಯಿದು.

ಅಂತರಾಷ್ಟ್ರೀಯ ಗಾಯಕಿ ಡಾ|| ಎಸ್. ಜಾನಕಿ ಅವರ ಸುಮಧುರ ಕಂಠದಿಂದ ಮೂಡಿಬಂದ ವಿವಿಧ 24 ಹಳೆ ಕನ್ನಡ ಚಲನಚಿತ್ರಗೇತೆಗಳು ನೆರೆದವರನ್ನು ಕಲ್ಪನಾ ಲೋಕಕ್ಕೆ ಕರೆದೊಯ್ದಿತು.

Kundapura_ S.Janaki_Programme (27) Kundapura_ S.Janaki_Programme (28) Kundapura_ S.Janaki_Programme (29) Kundapura_ S.Janaki_Programme (30) Kundapura_ S.Janaki_Programme (33) Kundapura_ S.Janaki_Programme (32) Kundapura_ S.Janaki_Programme (31) Kundapura_ S.Janaki_Programme (26) Kundapura_ S.Janaki_Programme (25) Kundapura_ S.Janaki_Programme (22) Kundapura_ S.Janaki_Programme (21) Kundapura_ S.Janaki_Programme (23) Kundapura_ S.Janaki_Programme (24) Kundapura_ S.Janaki_Programme (20)

ಗಾಯಕಿ ಸಂಗೀತಾ ಬಾಲಚಂದ್ರ ಅವರು ಹಾಡಿದ ಸಾಮಗಾನ ಕೋಗಿಲೆ, 1974ರ ಇಸವಿಯ ಸಿನೆಮಾ ಎರಡು ಕನಸು ಚಿತ್ರದ ‘ಪೂಜಿಸಲೆಂದೇ ಹೂಗಳ ತಂದೆ’ ಹಾಡನ್ನು ಗಾಯಕಿ ಕುಂಭಾಸಿಯ ಶ್ರಾವ್ಯ ತಮ್ಮ ಸುಶ್ರಾವ್ಯ ಕಂಠದಲ್ಲಿ ಹಾಡಿದರು. ವಿಷ್ಣುವರ್ಧನ್ ಅಭಿನಯದ 1988ರಲ್ಲಿ ತೆರೆಕಂಡ ಬಂಧನ ಚಿತ್ರದ ‘ಈ ಬಂಧನ ಜನುಮ ಜನುಮದ ಅನುಬಂಧನ’ ಗೀತೆಯನ್ನು ರಾಜ್ಯಪ್ರಶಸ್ತಿ ವಿಜೇತ ಗಾಯಕ ರಮೇಶ್ಚಂದ್ರ ಮತ್ತು ಸಂಗೀತಾ ಬಾಲಚಂದ್ರ ಅವರು ಹೇಳುವ ಮೂಲಕ ನೆರೆದ ಸಂಗೀತ ಪ್ರಿಯರನ್ನು ತಮ್ಮ ಗಾಯನದ ಮೊಡಿಯಲ್ಲಿ ಬಂದಿಸಿದರು. 1976ರಲ್ಲಿ ತೆರೆಕಂಡ ನಾನಿನ್ನ ಮರೆಯಲಾರೆ ಚಿತ್ರದ ಗೀತೆಯನ್ನು ಸತೀಶ್ ಹಾಗೂ ಸೌಮ್ಯಾ ಕಟೀಲ್, 1980ರಲ್ಲಿನ ಅನಂತ್‌ನಾಗ್ ಮತ್ತು ಲಕ್ಷ್ಮೀ ಅಭಿನಯದ ನಾನಿನ್ನ ಬಿಡಲಾರೆ ಚಿತ್ರದ ‘ನಾನು ನೀನು ಒಂದಾದ ಮೇಲೆ ಹೀಗೆಕೆ ನೀ ದೂರ ಓಡುವೆ’ ಗೀತೆಯನ್ನು ನಯನಾ ಮತ್ತು ನಿಶ್ಚಲ್ ರಾಜ್ ಹೇಳಿದರು. ಪಲ್ಲವಿ ಅನುಪಲ್ಲವಿ ಚಿತ್ರದ ‘ನಗುವಾ ನಯನಾ ಮಧುರ ಮೌನ’ ಗೀತೆಯನ್ನು ರೂಪಾ ಪ್ರಕಾಶ್ ಮತ್ತು ಸತೀಶ್ ಪೂಜಾರಿ, ಬಯಲುದಾರಿ ಚಿತ್ರದ ‘ಬಾನಲ್ಲೂ ನೀನೆ ಭುವಿಯಲ್ಲೂ ನೀನೆ’ ಗೀತೆಯನ್ನು ಸೌಮ್ಯಾ ಭಟ್ ಹಾಡಿದರು. ಶಿವರಾಜಕುಮಾರ್ ಅಭಿನಯದ ಆನಂದ್ ಚಿತ್ರದ ‘ನೀಲ ಮೇಘ ಗಾಳಿ ಬೀಸಿ’ ಹಾಡನ್ನು ಪ್ರಕಾಶ್ ಮಹಾದೇವನ್ ಮತ್ತು ರೂಪಾ ಪ್ರಕಾಶ್ ಮಹಾದೇವನ್ ಹಾಡಿದರೇ ರಥಸಪ್ತಮಿ ಚಿತ್ರದ ‘ಶಿಲೆಗಳು ಸಂಗೀತವ ಹಾಡಿದೆ’ ಹಾಡನ್ನು ಶ್ರಾವ್ಯ ಕುಂಭಾಸಿ ಹಾಗೂ ಗಣೇಶ್ ಬೀಜಾಡಿ ಹಾಡಿದರು. ಸಂಗೀತ ಬಾಲಚಂದ್ರ ಅವರ ಕಂಠದಲ್ಲಿ ಹೊರಹೊಮ್ಮಿದ ‘ಮೂಡಲ ಮನೆಯ ಮುತ್ತಿನ ನೀರಿನ’ ಹಾಡು ಎಲ್ಲರ ಮನಸೂರೆಗೊಂಡರೇ ನಾ ನಿನ್ನ ಬಿಡಲಾರೆ ಚಿತ್ರದ ‘ಹೊಸ ಬಾಳಿಗೆ ನೀ ಜೊತೆಯಾದೆ ಹಾಗೂ ಗೋಪಿ ಕ್ರಷ್ಣ ಚಿತ್ರದ ‘ಓಹೋ ವಸಂತ’, ‘ಬಂದೆಯ ಬಾಳಿನ ಬೆಳಕಾಗಿ’, ‘ಆಕಾಶ ದೀಪವು ನೀನು ನಿನ್ನ ಕಂಡಾಗ’, ‘ಬಿಸಿಲಾದರೇನು ಮಳೆಯಾದರೇನು’, ‘ಜೊತೆಯಾಗಿ ಹಿತವಾಗಿ’ ಗೀತೆಯು ಯುವ ಪ್ರೇಮಿಗಳ ಪಾಲಿಗೆ ಸಂಗೀತದ ಮುದ ನೀಡಿತ್ತು ಮಾತ್ರವಲ್ಲದೇ ಎಲ್ಲರನ್ನೂ ಒಂದು ಕ್ಷಣ ಪ್ರೇಮ ಸನ್ನಿವೇಶಕ್ಕೆ ಕೊಂಡೊಗ್ಗಿತ್ತು. ಇನ್ನು ಗಾಯಕಿ ಶ್ರಾವ್ಯ ಅವರ ಕಂಠದಲ್ಲಿ ಹೊರಹೊಮ್ಮಿದ ‘ನಗಿಸಲು ನೀನು ನಗುವೆನು ನಾನು’ ಹಾಡಿಗೆ ಎಸ್. ಜಾನಕಿಯಮ್ಮನವರೇ ತಲೆದೂಗಿದರು. ಹೀಗೆ ಕಾರ್ಯಕ್ರಮದಲ್ಲಿ 24 ಕನ್ನಡ ಚಲನ ಚಿತ್ರಗೀತೆಗಳು ವಿವಿಧ ಗಾಯಕರುಗಳಿಂದ ಹಾಡಲ್ಪಟ್ಟಿತ್ತು.

Kundapura_ S.Janaki_Programme (19) Kundapura_ S.Janaki_Programme (16) Kundapura_ S.Janaki_Programme (15) Kundapura_ S.Janaki_Programme (18) Kundapura_ S.Janaki_Programme (13) Kundapura_ S.Janaki_Programme (14) Kundapura_ S.Janaki_Programme (17) Kundapura_ S.Janaki_Programme (7) Kundapura_ S.Janaki_Programme (8) Kundapura_ S.Janaki_Programme (9) Kundapura_ S.Janaki_Programme (6) Kundapura_ S.Janaki_Programme (4) Kundapura_ S.Janaki_Programme (2) Kundapura_ S.Janaki_Programme (5) Kundapura_ S.Janaki_Programme (1) Kundapura_ S.Janaki_Programme (12) Kundapura_ S.Janaki_Programme (11) Kundapura_ S.Janaki_Programme (10)

ಎಸ್. ಜಾನಕಿಯವರಿಗೆ ಸನ್ಮಾನ: ಡಾ. ಎಸ್. ಜಾನಕಿಯವರನ್ನು ಉಡುಪಿ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ಸನ್ಮಾನಿಸಿದರು. ಆ ಬಳಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಎಸ್. ಜಾನಕಿಯವರು ಮಾತನಾಡಿ, ‘ಅಭಿಮಾನಿಗಳೆಲ್ಲರಿಗೂ ನಮಸ್ಕಾರ, ಇಷ್ಟೊತ್ತು ಕುಳಿತು ಗೀತೆಗಳನ್ನು ಕೇಳಿದ್ದಕ್ಕೆ ಧನ್ಯವಾದ, ತುಂಬಾ ಸಂತಸವಾಯಿತು. ಸ್ವಾಮೀಜಿಯವರು ಚಿಕ್ಕವರಿದ್ದಾಗ ನೋಡಿದ್ದು ಪುನಃ ಹೀಗೆ ನೋಡಿದ್ದು ಬಹಳ ಆನಂದವಾಗಿದೆ ಎನ್ನುತ್ತಾ ಹಲವು ವರ್ಷಗಳ ಹಿಂದಿನ ಪರ್‍ಯಾಯ ಕಾರ್ಯಕ್ರಮದಲ್ಲಿ ನಡೆದ ಸನ್ಮಾನವನ್ನು ನೆನೆಪಿಸಿಕೊಂಡು ಸಂತಸಪಟ್ಟರು. 1957ರಿಂದ ಹಾಡಲಾಂಭಿಸಿದ್ದು ಕನ್ನಡದಲ್ಲಿ ಕೃಷ್ಣ ಗಾರುಡಿ ಚಿತ್ರದಲ್ಲಿ ‘ಬಲೆ ಬಲೆ ಗಾರುಡಿ ಬರುತಿಹ ನೋಡಿ’ ಗೀತೆಯಿಂದ ಹಾಡಿದ್ದು ಅಂದಿನಿಂದ ಇಂದಿನವರೆಗೂ ಹಾಡುತ್ತಿದ್ದೇನೆ, ಗಂಟಲು ಸರಿಯಿಲ್ಲದಿದ್ದರೂ ಒಂದೊಂದು ಹಾಡು ಹಾಡುವ ಮೂಲಕ ತನ್ನ ಕೈಯಲ್ಲಾದ ಕಲಾ ಸೇವೆ ಮಾಡುತ್ತಿದ್ದೇನೆ. ಇಂದಿನ ಕಾರ್ಯಕ್ರಮದಲ್ಲಿ ಎಲ್ಲರೂ ಉತ್ತಮವಾಗಿ ಹಾಡಿದ್ದು, ಕಾರ್ಯಕ್ರಮ ಸೂಫರ್ ಎಂದರು. ಅಲ್ಲದೇ ಕುಂದಾಪುರ ತಾಲೂಕಿಗೆ ಆಗಮಿಸಿದ್ದು ಇಲ್ಲಿನ ಜನರ ಮನಸ್ಸು ಹಾಗೂ ಸಂಗೀತ ಪ್ರೇಮ ನೋಡಿ ಬಹಳ ಖುಷಿಯಾಗಿದೆ, ದೇವರು ಎಲ್ಲರನ್ನೂ
ಚೆನ್ನಾಗಿಟ್ಟಿರಲಿ ಎಂದು ಹೇಳುತ್ತ, ಅಭಿಮಾನಿಗಳಿಗಾಗಿ ದೇವರನ್ನು ಪ್ರಾರ್ಥಿಸುವ ಒಂದು ಗೀತೆಯನ್ನು ಹೇಳಿದರು.

ಹಾಡಿ ರಂಜಿಸಿದ ಎಸ್. ಜಾನಕಿ: ಮೊದಲು ಶ್ರೀ ಲಕ್ಷ್ಮೀವರ ತೀರ್ಥರ ಬೇಡಿಕೆಯಂತೆ ‘ಇಂದು ಎನಗೆ ಗೋವಿಂದ, ನಿನ್ನೆಯ ಪಾದಾರವಿಂದ’ ಹಾಡನ್ನು ಆರಂಭಿಸಿದರು. ಡಾ. ಸತೀಶ್ ಪೂಜಾರಿ ಅವರ ಜೊತೆಗೆ ‘ನಗು ನಗುತಾ ನೀ ಬರುವೆ’ ಹಾಡು ಹೇಳಿದರೇ ಒಂಟಿಯಾಗಿ ‘ ತಂಗಾಳಿಯಲ್ಲಿ ನಾನು ತೇಲಿ ಬಂದೆ’ ಎನ್ನುವ ಹಾಡು ಹೇಳಿದರು. ಮಗುವಿನ ಕಂಠದಲ್ಲಿ ‘ನಿಜ ಹೇಳುವೆನು ಅಮ್ಮ ನಿನ್ನ ಕಂಡರೇ ಪ್ರೀತಿ’ ಎನ್ನುವ ಗೀತೆಯಂತೂ ಅಭಿಮಾನಿಗಳ ಚಪ್ಪಾಳೆಯನ್ನು ಗಿಟ್ಟಿಸಿತ್ತು. ‘ಬರೆದೇ ನೀನು ನಿನ್ನ ಹೆಸರ ನನ್ನ ಬಾಳ ಪುಠದಲಿ’, ‘ಒಮ್ಮೆ ನಿನ್ನನ್ನು ಕಣ್ತುಂಬ ಕಾಣುವಾಸೆ ಎಲ್ಲಿರುವೆ’ ಯುಗಳ ಗೀತೆಯಂತೂ ನೆರೆದವರನ್ನೂ ರಂಜಿಸಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಲಕ್ಷ್ಮೀವರ ತೀರ್ಥರು 1978 ರಲ್ಲಿ ನಡೆದ ಪರ್‍ಯಾಯದಲ್ಲಿ ಭಾಗವಹಿಸಿ ಹಾಡು ಹಾಡಿದ್ದನ್ನು ನೆನಪಿಸಿಕೊಂಡರು. ಲತಾ ಮಂಗೇಶ್ಕರ್ ಉತ್ತರ ಭಾರತ ಕೋಗಿಲೆಯಾದರೇ, ದಕ್ಷಿಣ ಭಾರತದ ಕೋಗಿಲೆ ಜಾನಕಿಯವರು. ವಿವಿಧ ಭಾಷೆಗಳಲ್ಲಿ ಹಾಡಿದ ಇವರು ರಾಷ್ಟ್ರದ ಕೋಗಿಲೆಯಲ್ಲ, ವಿಶ್ವದ ಕೋಗಿಲೆ. ಸಂಗೀತ ಸರಸ್ವತಿ ಎಲ್ಲರಿಗೂ ಒಲಿಯುವುದಿಲ್ಲ, ಅದನ್ನು ಒಲಿಸಿಕೊಳ್ಳಲು ಕಠಿಣ ಪರಿಶ್ರಮ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ, ಹಟ್ಟಿಯಂಗಡಿ ದೇವಸ್ಥಾನದ ವೇ.ಮೂ. ರಾಮಚಂದ್ರ ಭಟ್, ಉದ್ಯಮಿ ಎನ್.ಟಿ. ಪೂಜಾರಿ, ಯುವಮೆರಿಡಿಯನ್ ಮಾಲಕರಾದ ಉದಯಕುಮಾರ್ ಶೆಟ್ಟಿ, ವಿನಯ ಕುಮಾರ್ ಶೆಟ್ಟಿ, ಸಂಘಟಕಾರದ ಡಾ. ಸತೀಶ್ ಪೂಜಾರಿ, ಡಾ. ಪ್ರಕಾಶ ತೋಳಾರ್, ಸುಬ್ರಮಣ್ಯ ಶೆಟ್ಟಿ, ಯಾಕೂಬ್ ಖಾದರ್ ಗುಲ್ವಾಡಿ, ನಾರಾಯಣ ಐತಾಳ್, ಆಬ್ದುಲ್ ಸಲಾಂ ಸಾಹೇಬ್ ಮೊದಲಾದವರಿದ್ದರು. ಕುಂದಾಪುರ ಸೆಷನ್ ಜಡ್ಜ್ ರಾಜಶೇಖರ್, ಉಡುಪಿ ಜಿಲ್ಲಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದರು.

ಸಂಪೂರ್ಣ ಕಾರ್ಯಕ್ರಮವನ್ನು ಆರ್.ಜೆ. ನಯನಾ ಮತ್ತು ಪ್ರಸನ್ನ ನಿರೂಪಿಸಿದರು.

Write A Comment