ಕನ್ನಡ ವಾರ್ತೆಗಳು

ಕದ್ರಿ ಯೋಗೇಶ್ವರ ಮಠದ ಕಾಂಕ್ರಿಟೀಕೃತ ರಸ್ತೆ ಉದ್ಘಾಟನೆ.

Pinterest LinkedIn Tumblr

kadriroad_innrtion_pic_1

ಮಂಗಳೂರು,ಫೆ.21  : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ದಕ್ಷಿಣ ವಾರ್ಡ್‌ನ ಕದ್ರಿ ಯೋಗೇಶ್ವರ ಮಠದ ಕಾಂಕ್ರಿಟೀಕೃತ ರಸ್ತೆಯನ್ನು   ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಶುಕ್ರವಾರ ಉದ್ಘಾಟಿಸಿದರು.

ಮೇಯರ್ ಮಹಾಬಲ ಮಾರ್ಲ, ಉಪ ಮೇಯರ್ ಕವಿತಾ, ಮಠದ ಶ್ರೀರಾಜ ಸಂಧ್ಯಾನಾಥ್‌ಜಿ, ವಿಠಲದಾಸ ತಂತ್ರಿ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಡಿ.ಕೆ., ಸಚೇತಕ ಶಶಿಧರ ಹೆಗ್ಡೆ, ಪಾಲಿಕೆ ಪ್ರತಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಕಾರ್ಪೊರೇಟರ್‌ಗಳಾದ ಭಾಸ್ಕರ ಮೊಯ್ಲಿ, ರತಿಕಲಾ, ಸಬಿತಾ ಮಿಸ್ಕಿತ್, ಪದ್ಮಶ್ರೀ ಡಾ.ಕದ್ರಿ ಗೋಪಾಲನಾಥ್, ಎ.ಜೆ.ಶೆಟ್ಟಿ ಉಪಸ್ಥಿತರಿದ್ದರು.

kadriroad_innrtion_pic_2 kadriroad_innrtion_pic_3 kadriroad_innrtion_pic_4 kadriroad_innrtion_pic_5

ಮಠದ ಆವರಣದಲ್ಲಿ ನಿರ್ಮಿಸಲಾದ ಅನ್ನಪೂರ್ಣ ಭಂಡಾರ ಮತ್ತು ನೂತನ ಭವನದ ಉದ್ಘಾಟನೆ ನೆರವೇರಿಸಲಾಯಿತು. ರಾಜಸ್ಥಾನದ ಶ್ರೀ ಶಂಭುನಾಥಜಿ ಮಹಾರಾಜ್, ಶ್ರೀಲಾಲ್‌ಭಾರತೀಜೀ ಮಹಾರಾಜ್, ಶ್ರೀ ನಿರ್ಮಲನಾಥಜೀ ಮಹಾರಾಜ್, ಶ್ರೀ ರೇವತಿನಾಥಜೀ ಮಹಾರಾಜ್, ಶ್ರೀ ಸಂದೀಪ್‌ನಾಥಜೀ ಮಹಾರಾಜ್ ಪಾಲ್ಗೊಂಡಿದ್ದರು.

Write A Comment