ಕನ್ನಡ ವಾರ್ತೆಗಳು

ತೀಸ್ತಾ ,ಜಾವೆದ್ ದಂಪತಿಯ ಮೇಲಿನ ಸುಳ್ಳು ಮೊಕದ್ದಮೆ ವಿರುದ್ಧ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ವತಿಯಿಂದ ಪ್ರತಿಭಟನೆ.

Pinterest LinkedIn Tumblr

komu_protest_photo_1

ಮಂಗಳೂರು,ಫೆ. 21 : ತೀಸ್ತಾ ಮತ್ತು ಜಾವೆದ್ ದಂಪತಿಯ ಮೇಲೆ ಹಲವು ಆರೋಪಗಳನ್ನು ಹೇರಿ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಇದರ ಹಿಂದೆ ಷಡ್ಯಂತ್ರ ಅಡಗಿದೆ ಈ ಬಗ್ಗೆ ತನಿಖೆಯಾಗಬೇಕಾಗಿದೆ ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜಿಲ್ಲಾ ಅಧ್ಯಕ್ಷ ಸುರೇಶ್ ಭಟ್ ಬಾಕ್ರ ಬೈಲ್ ಆಗ್ರಹಿಸಿದ್ದಾರೆ.ತೀಸ್ತಾ ಮತ್ತು ಜಾವೆದ್ ದಂಪತಿಯ ಮೇಲಿನ ಸುಳ್ಳು ಮೊಕದ್ದಮೆ ವಿರುದ್ಧ ಕರ್ನಾಟಕ ಕೋಮು ಸೌಹಾರ್ದವೇದಿಕೆ ವತಿಯಿಂದ ಜಿಲ್ಲಾಕಾರಿ ಕಚೇರಿ ಎದುರು ನಡೆಸಲಾದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಗುಜರಾತ್ ನರಮೇಧದ ಸಂತ್ರಸ್ತರಿಗೆ ನ್ಯಾಯ ಒದಗಿ ಸಲು ಹೋರಾಟ ನಡೆಸುತ್ತಿರುವ ತೀಸ್ತಾ ಮತ್ತು ಜಾವೆದ್ ದಂಪತಿ ಗಳ ಪ್ರಯತ್ನದ ಲವಾಗಿ ಬಾಬು ಬಜರಂಗಿ, ಮಾಯಾ ಕೊಡ್ನಾನಿ ಸೇರಿದಂತೆ 117 ಆರೋಪಿಗಳಿಗೆ ಈಗಾಗಲೇ ಜೀವಾವ ಶಿಕ್ಷೆ ಆಗಿದೆ. ಸದ್ಯ ವಿಚಾರಣೆಯ ಹಂತದಲ್ಲಿರುವ ಗುಲ್ಬರ್ಗ ಸೊಸೈಟಿ ಹತ್ಯಾಕಾಂಡ ಪ್ರಕರಣದಲ್ಲಿ ಮಾಜಿ ಸಂಸದ ಎಹ್‌ಸಾನ್ ಜಾಫ್ರಿಯವರನ್ನು ಅಮಾನುಷವಾಗಿ ಹಿಂಸಿಸಿ ಹತ್ಯೆ ನಡೆಸಿರುವ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡಾ ಓರ್ವ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಪ್ರಕರಣ ವಿಚಾರಣೆಯ ಹಂತದಲ್ಲಿರುವಾಗಲೇ ತೀಸ್ತಾ ದಂಪತಿಯ ವಿರುದ್ಧ ಅವ್ಯವಹಾರದ ಆರೋಪ ಹೊರಿಸಿ ಕಿರುಕುಳ ನೀಡಲಾಗುತ್ತಿದೆ ಎಂದರು.

komu_protest_photo_2

ಈ ಆರೋಪಕ್ಕೆ ಸಂಬಂಸಿದಂತೆ ದಂಪತಿಗಳು 1,500 ಪುಟಗಳ ದಾಖಲೆಯನ್ನು ಸಲ್ಲಿಸಿದ್ದರೂ ಗುಜರಾತ್ ಹೈಕೋರ್ಟ್ ಅದನ್ನು ಪರಿಣನೆಗೆ ತೆಗೆದುಕೊಳ್ಳದೆ ಪೊಲೀಸರ ಹೇಳಿಕೆಯ ಆಧಾರದಲ್ಲಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಳ್ಳಿಹಾಕಿ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲು ಆದೇಶಿಸಿರುವುದು ನ್ಯಾಯ ಸಮ್ಮತವಲ್ಲ. ಇದರ ಹಿಂದೆ ತೀಸ್ತಾ ದಂಪತಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುವ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದರು.

ಈ ರೀತಿಯ ಕ್ರಮದಿಂದ ಸಂವಿಧಾನದ ವಿ 20(3)ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ ಸುರೇಶ್ ಭಟ್, ಪ್ರಸಕ್ತ ಗುಜರಾತ್ ಹೈಕೋರ್ಟಿನ ತೀರ್ಪಿಗೆ ಸರ್ವೋಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದು ಹಾಗೂ ಸ್ವತಂತ್ರ ಸಮಿತಿಯ ಮೂಲಕ ವಿಚಾರಣೆ ನಡೆಸಲು ಮುಂದಾಗಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.

ಕೋಮು ಸೌಹಾರ್ದ ವೇದಿಕೆಯ ಕಾರ್ಯದರ್ಶಿ ಇಸ್ಮತ್ ಪಜೀರ್, ಪಿಯುಸಿಎಲ್ ಸಂಘಟನೆಯ ಸದಸ್ಯ ಕಬೀರ್ ಉಳ್ಳಾಲ್, ಅಲ್ವಿನ್ ಡಿಸಿಲ್ವ, ಜಮಾಅತ್ ಇಸ್ಲಾಮ್ ಯೂತ್ ವಿಂಗ್‌ನ ರಾಜ್ಯ ಸಮಿತಿ ಸದಸ್ಯ ಶಬೀರ್, ತಲಹ್ ಇಸ್ಮಾಯೀಲ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Write A Comment