ಕನ್ನಡ ವಾರ್ತೆಗಳು

ಮಲಾಡ್ ಕುರಾರ್ ವಿಲೇಜಲ್ಲಿ ವಾರ್ಷಿಕ ಶನಿ ಪೂಜೆ, ಧಾರ್ಮಿಕ ಸಭೆ

Pinterest LinkedIn Tumblr
mumbai_malad_shanipooja_1
 
ವರದಿ : ಈಶ್ವರ ಎಂ. ಐಲ್
 
ಮುಂಬಯಿ : ಮಲಾಡ್ ಪೂರ್ವ, ಕುರಾರ್ ವಿಲೇಜ್  ಶ್ರೀ ಶನಿ ಮಹಾತ್ಮಾ ಪೂಜಾ ಸಮಿತಿಯ 41ನೇ ವಾರ್ಷಿಕ ಮಹಾಪೂಜೆಯು ಫೆ. ೧೪ರಂದು ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಅವರ ಪೌರೋಹಿತ್ಯದಲ್ಲಿ ಜರಗಿತು.
 
ಸಮಿತಿಯ ಅಧ್ಯಕ್ಷ ಶ್ರೀನಿವಾಸ ಪಿ. ಸಾಪಲ್ಯ ರ ಅಧ್ಯಕ್ಷತೆಯಲ್ಲಿ ಜರಗಿದ ಧಾರ್ಮಿಕ ಸಭೆಯ ಮುಖ್ಯ ಅತಿಯಾಗಿ ಆಗಮಿಸಿದ ಬಂಟರ ಸಂಘದ ಅಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿಯವರು ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
 
ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡುತ್ತಾ ಇಂದು ದೇವಸ್ಥಾನಗಳು ವ್ಯಾಪಾರ ಕೇಂದ್ರವಾಗುತ್ತಿರುವಾಗ ಮುಂಬಯಿ ಮಧ್ಯೆ ಮಲಾಡ್ ನ ಶನೀಶ್ವರ ಮಂದಿರ ನಿಜಕ್ಕೂ ಶ್ರದ್ಧಾ ಕೇಂದ್ರವಾಗಿ ಕೆಲಸ ಮಾಡುತ್ತಿದೆ. ಎಂದರು.
mumbai_malad_shanipooja_3 mumbai_malad_shanipooja_4 mumbai_malad_shanipooja_6 mumbai_malad_shanipooja_7 mumbai_malad_shanipooja_8 mumbai_malad_shanipooja_9 mumbai_malad_shanipooja_10 mumbai_malad_shanipooja_11 mumbai_malad_shanipooja_2
 
ಪತ್ರಕರ್ತ, ಸಮಾಜ ಸೇವಕ ಬೊಕ್ಕಪಟ್ನ ದಿನೇಶ್ ಕುಲಾಲ್, ಹಿರಿಸ ಸದಸ್ಯರಾದ ಶಂಕರ್ ಶೆಟ್ಟಿ ಮತ್ತು ನಾರಾಯಣ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಪತ್ರವನ್ನು ಯಶೋಧಾ ಕುಂಬ್ಲೆ, ರವಿ ನಾರಾಯಣ ಶೆಟ್ಟಿ, ಶಾಲಿನಿ ಶೆಟ್ಟಿಯವರು ವಾಚಿಸಿದರು.
 
ಸಮಾರಂಭದಲ್ಲಿ ಬಂಟರ ಸಂಘದ ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ವಿಜಯ ಭಂಡಾರಿ, ನ್ಯಾ. ಮೋನಪ್ಪ ಭಂಡಾರಿ ಮಂಗಳೂರು, ರತ್ನಾಕರ ಶೆಟ್ಟಿ ಮುಂಡ್ಕೂರು, ರಮೇಶ್ ಶೆಟ್ಟಿ ಐರೋಲಿ ಮೊದಲಾದವರು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸಮಿತಿಯ ಕಾರ್ಯದರ್ಶಿ ಎಂ. ಡಿ. ಬಿಲ್ಲವ, ಶ್ರೀಧರ್ ಶೆಟ್ಟಿ, ಹರೀಶ್ ಸಾಲ್ಯಾನ್, ಬಾಬು ಎನ್. ಚಂದನ್, ನಾರಾಯಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
 
ದಿನಪೂರ್ತಿ ಜರಗಿದ ಧಾರ್ಮಿಕ ಕಾರ್ಯಕ್ರಮಗಳ ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಿತು. ವಿಶ್ವನಾಥ ಶೆಟ್ಟಿ ಪೇತ್ರಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.

Write A Comment