ಕನ್ನಡ ವಾರ್ತೆಗಳು

ಹಿಂದೂ ಸಮಾಜೋತ್ಸವ ಪ್ರಯುಕ್ತ ಹಿಂದೂ ಸಂಘಟನೆಗಳಿಂದ ಬೃಹತ್ ವಾಹನ ಜಾಥಾ

Pinterest LinkedIn Tumblr

vhp_bike_rally_1

ಮಂಗಳೂರು .ಫೆ. 20: ವಿಶ್ವ ಹಿಂದೂ ಪರಿಷತ್‌ನ ಸ್ವರ್ಣಮಹೋತ್ಸವ ಪ್ರಯುಕ್ತ ಮಾರ್ಚ್ 1  ರಂದು ನಡೆಯುವ ಹಿಂದೂ ಸಮಾಜೋತ್ಸವದ ಪೂರ್ವಬಾವಿಯಾಗಿ ಭಜರಂಗದಳ ಮತ್ತು ವಿವಿಧ ಹಿಂದೂ ಸಂಘಟನೆಗಳ ವತಿಯಿಂದ ಶುಕ್ರವಾರ ಬೃಹತ್ ವಾಹನ ಜಾಥಾ ನಗರದಲ್ಲಿ ನಡೆಯಿತು.

ನಗರದ ಬಂಟ್ಸ್ ಹಾಸ್ಟೆಲ್ ಸಮೀಪವಿರುವ ಹಿಂದೂ ಸಮಾಜೋತ್ಸವ ಕಛೇರಿ ಅವರಣದಲ್ಲಿ ಇಂದು ಬೆಳಿಗ್ಗೆ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ವಾಹನ ಜಾಥಕ್ಕೆ ಚಾಲನೆ ನಿಡೀದರು.

vhp_bike_rally_2 vhp_bike_rally_3 vhp_bike_rally_4 vhp_bike_rally_5 vhp_bike_rally_6 vhp_bike_rally_7 vhp_bike_rally_8 vhp_bike_rally_9 vhp_bike_rally_10 vhp_bike_rally_11

ಹಿಂದೂ ಸಮಾಜೋತ್ಸವ ಸಮಿತಿಯ ಗೌರವ ಅಧ್ಯಕ್ಷ ಎಸ್.ಗಣೇಶ್ ರಾವ್, ವಿ.ಎಚ್.ಪಿ ಮುಖಂಡ ಎಂ.ಬಿ.ಪುರಾಣಿಕ್, ಮಾಜಿ ಶಾಸಕ ಎನ್.ಯೋಗೀಶ್ ಭಟ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಜಿತೇಂದ್ರ.ಎಸ್.ಕೊಟ್ಟಾರಿ, ಪ್ರಧಾನ ಸಂಚಾಲಕ ಶರಣ್ ಪಂಪ್ ವೆಲ್, ಜಿಲ್ಲಾ ಸಂಚಾಲಕ ಗೋಪಾಲ್ ಕುತ್ತಾರು, ಸಹ ಸಂಚಾಲಕ ಭುಜಂಗ ಕುಲಾಲ್, ದೇವಣ್ಣ ಶೆಟ್ಟಿ ಹಾಗೂ ವಿವಿಧ ಹಿಂದೂ ಸಂಘಟನೆಯ ಪ್ರಮುಖರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

ವಿಎಚ್‌ಪಿ, ಬಜರಂಗದಳ ಹಾಗೂ ವಿವಿಧ ಹಿಂದೂ ಸಂಘಟನೆಯ ಸಹಸ್ರಾರು ಕಾರ್ಯಕರ್ತರು ಈ ವಾಹನ ಜಾಥದಲ್ಲಿ ಪಾಲ್ಗೊಂಡಿದ್ದರು.

Write A Comment