ಮಂಗಳೂರು,ಫೆ.20 : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಾಗಿಸಲು ಯತ್ನಿಸಿದ 18.90 ಲಕ್ಷ ರೂ. ಮೌಲ್ಯದ 700 ಗ್ರಾಂ ಚಿನ್ನದ ಬಿಲ್ಲೆಗಳನ್ನು ವಶಕ್ಕೆ ಪಡೆದಿದ್ದು, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಮಂಗಳೂರಿನ ಕಂಡತ್ತಪಳ್ಳಿ ಎಸ್‌ಎಂಬಿ ಲೇನ್ ನಿವಾಸಿ ಮೊಹಮ್ಮದ್ ಶರೂನ್ (22) ಬಂಧಿತ ಆರೋಪಿ. ಈತ ಗುರುವಾರ ಬೆಳಗ್ಗೆ ದುಬೈಯಿಂದ ಜೆಟ್‌ಏರ್‌ವೇಸ್ ವಿಮಾನದಲ್ಲಿ ಬೆಳಗ್ಗೆ 8.45ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ. ಈ ಸಂದರ್ಭ ತನ್ನ ಗುದದ್ವಾರದಲ್ಲಿ ಚಿನ್ನದ ಬಿಲ್ಲೆಗಳನ್ನು ಇಟ್ಟು ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದ.
ಈ ಬಗ್ಗೆ ಅನುಮಾನಗೊಂಡ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ಕೂಲಂಕಷವಾಗಿ ವಿಚಾರಣೆ ನಡೆಸಿದಾಗ ಚಿನ್ನ ಸಾಗಾಟ ಪತ್ತೆಯಾಗಿತ್ತು. ಈತನ ಬಗ್ಗೆ ಮುಂದಿನ ತನಿಖೆ ನಡೆಯುತ್ತಿದೆ.