ಕನ್ನಡ ವಾರ್ತೆಗಳು

ಬಜ್ಪೆ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದಿನಾಚರಣೆ

Pinterest LinkedIn Tumblr

bajpe_front_offce_1a

ಮಂಗಳೂರು,ಫೆ.17 : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸ್ಥಾಪನಾ ದಿನದ ಅಂಗವಾಗಿ ಇಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜ್ಪೆ ಏರಿಯ ವತಿಯಿಂದ ಧ್ವಜಾರೋಹನವು ಬಜ್ಪೆ ಬಸ್ ತಂಗುದಾಣ ಬಳಿ ಜಂಕ್ಷನ್ ನಲ್ಲಿ ನಡೆಯಿತು .

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜ್ಪೆ ಏರಿಯಾ ಅಧ್ಯಕ್ಷರಾದ ಯಾಹ್ಯಾ ಬಜ್ಪೆ ಧ್ವಾಜಾರೋಹನ ನೆರವೇರಿಸಿದರು , ಸಂದೇಶ ಭಾಷಣ ಮಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಸದಸ್ಯರಾದ ಅಥಾವುಲ್ಲ ಜೋಕಟ್ಟೆ ದೇಶದ ಜನತೆಯನ್ನು ಫ್ಯಾಸಿಸ್ಟ್ ವರ್ಗಗಳಿಂದ ವಿಮೋಚನೆಗೊಳಿಸಬೇಕಾಗಿದೆ ಈ ನಿಟ್ಟಿನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇನ್ನೂ ತೀವ್ರವಾಗಿ ಫ್ಯಾಸಿಸ್ಟ್ ಗಳ ವಿರುದ್ಧ ತನ್ನ ಹೋರಾಟ ಮುಂದುವರಿಸಲಿದೆ ಎಂದು ಎಚ್ಚರಿಕೆ ನೀಡಿದರು .

Canara_Enging_College_1 bajpe_front_offce_2 bajpe_front_offce_4

ಮುಖ್ಯ ಅತಿಥಿಗಳಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಡಿವಿಷನ್ ಪ್ರಧಾನ ಕಾರ್ಯದರ್ಶಿಗಳಾದ ಸಿರಾಜ್ ಕಾವೂರು , ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜ್ಪೆ ಏರಿಯ ಕಾರ್ಯದರ್ಶಿ ನಜ್ಹೀರ್ ಕೆ . ಪಿ ನಗರ , ಬಜ್ಪೆ ಕೇಂದ್ರ ಜುಮ್ಮಾ ಮಸ್ಜಿದ್ ಇದರ ಪ್ರಧಾನ ಕಾರ್ಯದರ್ಶಿಗಳಾದ ಇಸ್ಮಾಈಲ್ ಇಂಜಿನಿಯರ್ , ನೂರಾನಿಯ್ಯ ಜುಮ್ಮಾ ಮಸ್ಜಿದ್ ಜರಿನಗರ ಇದರ ಅಧ್ಯಕ್ಷರಾದ ಹಮೀದ್ ಜರಿನಗರ , ಅಲ್ – ಹುದಾ ಜುಮ್ಮಾ ಮಸೀದಿ ಕೆ . ಪಿ ನಗರ ಇದರ ಉಪಾಧ್ಯಕ್ಷರಾದ ಮೊಹಮ್ಮದ್ ಮೋನು ಉಪಸ್ತಿತರಿದ್ದರು .

ಶಂಸುದ್ದೀನ್ ಕೆ . ಪಿ ಕಾರ್ಯಕ್ರಮವನ್ನು ನಿರೂಪಿಸಿದರು .

Write A Comment