ಕನ್ನಡ ವಾರ್ತೆಗಳು

ಕಟ್ಟಡ ಕಾರ್ಮಿಕರು ದೇಶದ ಅಭಿವೃದ್ಧಿಯ ಹರಿಕಾರರು : ವಸಂತ ಆಚಾರಿ

Pinterest LinkedIn Tumblr

CWFI_protest_photo_1

ಮಂಗಳೂರು,ಫೆ.17 : ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿ ಕೊಂಡು ದೇಶದ ಅಭಿವೃದ್ಧಿಗೆ ಪೂರಕವಾಗಿರುವ ಲಕ್ಷಾಂತರ ಸಂಖ್ಯೆಯ ಕಟ್ಟಡ ಕಾರ್ಮಿಕರು ಈ ದೇಶದ ಅಭಿವೃದ್ಧಿಯ ನಿಜವಾದ ಹರಿಕಾರರು ಎಂದು ಸಿಐಟಿಯು ಮುಖಂಡ ವಸಂತ ಆಚಾರಿ ತಿಳಿಸಿದರು. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಆಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆದ ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಅವರು ಮಾತನಾಡಿದರು.

CWFI_protest_photo_2

ಮೋದಿ ನೇತೃತ್ವದ ಸರಕಾರವು ಸ್ವದೇಶಿ ಹೆಸರಿನಲ್ಲಿ ತಳಮಟ್ಟದ ಕಾರ್ಮಿಕರಿಗೂ ವಂಚಿಸುತ್ತಿರುವುದಲ್ಲದೆ ಕಟ್ಟಡ ಕಾರ್ಮಿಕರಿಗೆ ಸವಲತ್ತುಗಳು ಸಿಗಬಾರದ ರೀತಿಯಲ್ಲಿ ವಿವಿಧ ಸವಲತ್ತುಗಳ ನಿಯಮಗಳನ್ನು ಕಠಿಣಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು. ಕಲ್ಯಾಣ ಮಂಡಳಿಯಲ್ಲಿ ಸಾವಿ ರಾರು ರೂಪಾಯಿ ಕೊಳೆಯುತ್ತಿದ್ದರೂ ಕೂಡಾ ನಾನಾ ಕಾರಣಗಳನ್ನು ನೀಡಿ ಕಾರ್ಮಿಕರಿಗೆ ಸೌಲಭ್ಯಗಳನ್ನು ನಿರಾಕರಿ ಸಲಾಗುತ್ತಿದೆ.

CWFI_protest_photo_3

2012ರಿಂದ ಸಲ್ಲಿಸಿರುವ ಸವಲತ್ತುಗಳ ಅರ್ಜಿ ವಿಲೇವಾರಿಯಾ ಗದೆ ಕಾರ್ಮಿಕರು ಕಂಗಾಲಾಗಿದ್ದಾರೆ ಎಂದವರು.50 ವರ್ಷ ಪೂರೈಸಿದ ಮಹಿಳಾ ಕಾರ್ಮಿಕರಿಗೆ 55 ಪೂರೈಸಿದ ಪುರುಷ ಕಾರ್ಮಿಕರಿಗೆ 1500 ರೂ. ಪಿಂಚಣಿ ನೀಡ ಬೇಕು, ಗಣಿಗಾರಿಕೆ ನಿಷೇಧದಿಂದ ಕಾರ್ಮಿಕರು ಬೀದಿಪಾಲಾಗಿರುವು ದರಿಂದ ಈ ಬಗ್ಗೆ ಗಮನ ಹರಿಸಬೇಕು. ನಿವೇಶನ ಇಲ್ಲದ ಕಾರ್ಮಿಕರಿಗೆ ವಸತಿ ಸೌಲಭ್ಯ ಒದಗಿಸಬೇಕು. ಮನೆ ನಿರ್ಮಾಣಕ್ಕೆ ಸರಕಾರದ ಅನುದಾನದ ಮೂಲಕ ಸಹಾಯಧನ ನೀಡಬೇಕು. 15,000 ರೂ. ಕನಿಷ್ಠ ಕೂಲಿ ಮೊದಲಾದ ಹಲವಾರು ಬೇಡಿಕೆಗಳನ್ನು ಈಡೇರಿಸ ಬೇಕೆಂದವರು ಆಗ್ರಹಿಸಿದರು.

Write A Comment