ಕನ್ನಡ ವಾರ್ತೆಗಳು

ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಬುಡಕಟ್ಟು ಹಾಗೂ ಜನಪದ ಸಂಸ್ಕೃತಿಯ ಅನಾವರಣ; ಮಾದರಿ ಕಾರ್ಯಕ್ರಮಕ್ಕೆ ಎಲ್ಲರೂ ಫಿದಾ…

Pinterest LinkedIn Tumblr

ಕುಂದಾಪುರ: ಕುಂದಾಪುರದ ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಿನ್ನೆ (ಸೋಮವಾರ) ಬುಡಕಟ್ಟು ಹಾಗೂ ಜನಪದ ಸಂಸ್ಕೃತಿ ಅನಾವರಣಗೊಳಿಸುವ ನಿಟ್ಟಿನಲ್ಲಿ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ’ಬುಡಕಟ್ಟು ಹಾಗೂ ಜನಪದ ಸಂಸ್ಕೃತಿಯ ಅನಾವರಣ’ ಎನ್ನುವ ಹೆಸರಿನಲ್ಲಿ ನಡೆದ ಅಭೂತಪೂರ್ವ ಕಾರ್ಯಕ್ರಮ ನಿಜಕ್ಕೂ ಮಾದರಿಯಾಗಿತ್ತು.

BhandarakarsCollege_Folk Culture_Show (46) BhandarakarsCollege_Folk Culture_Show (44) BhandarakarsCollege_Folk Culture_Show (48) BhandarakarsCollege_Folk Culture_Show (50) BhandarakarsCollege_Folk Culture_Show (52) BhandarakarsCollege_Folk Culture_Show (47) BhandarakarsCollege_Folk Culture_Show (51) BhandarakarsCollege_Folk Culture_Show (54) BhandarakarsCollege_Folk Culture_Show (53) BhandarakarsCollege_Folk Culture_Show (55) BhandarakarsCollege_Folk Culture_Show (49) BhandarakarsCollege_Folk Culture_Show (43) BhandarakarsCollege_Folk Culture_Show (40) BhandarakarsCollege_Folk Culture_Show (41) BhandarakarsCollege_Folk Culture_Show (42) BhandarakarsCollege_Folk Culture_Show (26) BhandarakarsCollege_Folk Culture_Show (27)

ಏನೇನು ಕಾರ್ಯಕ್ರಮವಿತ್ತು: ಗಣೇಶ ಕುಂದಾಪುರ ಇವರ ನೇತೃತ್ವದ ಅಕ್ಷರ ಕೊರಗರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಆದಿವಾಸಿ ಬುಡಕಟ್ಟು ಸಮಾಜದ ಕೊರಗರ ಸಾಂಸ್ಕೃತಿಕ ವೈಭವ, ಸೋಮಯ್ಯ ಗೊಂಡ ಬೈಂದೂರು ಇವರ ನೇತೃತ್ವದಲ್ಲಿ ಗೊಂಡ ಸಮುದಾಯದ ಸಾಂಸ್ಕೃತಿಕ ಕಾರ್ಯಕ್ರಮ, ಸಿದ್ಧಿ ಬುಡಕಟ್ಟು ಕಲಾವಿದರ ತಂಡ ಯಲ್ಲಾಪುರ ಇವರಿಂದ ಡಮಾರು ಕುಣಿತ, ಪುಗಡಿ ನೃತ್ಯ ಮತ್ತು ಜಾನಪದ ಹಾಡುಗಳು, ನಾಗರಾಜ ಪಾಣಾರ ಮತ್ತು ಸಂಗಡಿಗರು ವಾಲ್ತೂರು ಇವರಿಂದ ಪಾಣಾರ ನೃತ್ಯ -ಢಕ್ಕೆಬಲಿ, ನಾರಾಯಣ ಮರಾಠಿ ನಾಗರಮಕ್ಕಿ ನೇತೃತ್ವದಲ್ಲಿ ಮರಾಠಿ ನಾಯ್ಕರ ಗುಮ್ಟೆ ಕುಣಿತ, ಕೋಲಾಟ, ಚಂದ್ರ ನಾಯ್ಕ ಹೆಗ್ಗುಂಜೆ ಇವರ ನೇತೃತ್ವದಲ್ಲಿ ಶ್ರೀ ಮಲ್ಲಿಕಾರ್ಜುನ ಕುಡುಬಿ ಹೋಳಿ ಜನಪದ ಕಲಾಸಂಘ ಹೆಗ್ಗುಂಜೆ ಮಂದಾರ್ತಿ ಇವರಿಂದ ಜಾನಪದ ನೃತ್ಯ, ಹಾಲಕ್ಕಿ ಬುಡಕಟ್ಟು ಸಮುದಾಯ ಬೆಳಂಬರ ಅಂಕೋಲ ಇವರಿಂದ ಸುಗ್ಗಿ ಕುಣಿತ ಪ್ರದರ್ಶನ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದಾಪುರ ಉಪ ವಿಭಾಗದ ಉಪವಿಭಾಗಧಿಕಾರಿ ಚಾರುಲತಾ ಸೋಮಲ್, ಬುಡಕಟ್ಟು ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ, ಜಾಗೃತಿ ಮೂಡಿಸು ಕೆಲಸ ಸ್ತುತ್ಯರ್ಹವಾಗಿದೆ. ಬೇರೆ ಬೇರೆ ಸಂಪ್ರದಾಯ, ಸಾಸಂಸ್ಕೃತಿಕ ವಿಶಿಷ್ಠತೆಗಳನ್ನು ತಿಳಿಯಪಡಿಸುವ ಕೆಲಸ ಆಗಬೇಕು ಎಂದರು.

BhandarakarsCollege_Folk Culture_Show (28) BhandarakarsCollege_Folk Culture_Show (29) BhandarakarsCollege_Folk Culture_Show (30) BhandarakarsCollege_Folk Culture_Show (31) BhandarakarsCollege_Folk Culture_Show (32) BhandarakarsCollege_Folk Culture_Show (33) BhandarakarsCollege_Folk Culture_Show (34) BhandarakarsCollege_Folk Culture_Show (37) BhandarakarsCollege_Folk Culture_Show (38) BhandarakarsCollege_Folk Culture_Show (39) BhandarakarsCollege_Folk Culture_Show (36) BhandarakarsCollege_Folk Culture_Show (35)

ದಿಕ್ಸೂಚಿ ಭಾಷಣ ಮಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ|ಗಂಗಾಧರ ದೈವಜ್ಞ ಅವರು, ವಿಶ್ವವಿಂದು ಸಾಧನೆಯ ಮೇಲ್ಪಂಕ್ತಿಯಲ್ಲಿದ್ದರೆ ಅದರ ಬೇರುಗಳು ಆದಿವಾಸಿಗಳೇ ಆಗಿದ್ದಾರೆ. ಅವರ ಆಚಾರ ವಿಚಾರ, ಅಹಾರ, ಸಂಸ್ಕೃತಿ, ಸಾಂಸ್ಕೃತಿಕವಾದ ಕೊಡುಗೆ ಅಪಾರ. ಆದಿವಾಸಿಗಳು, ಜನಪದರ ಅಧ್ಯಯನದ ಮೂಲಕ ಅವರ ಬದುಕಿನ ಸ್ಥಿತ್ಯಂತರಗಳನ್ನು ತಿಳಿದುಕೊಳ್ಳುವ ಅಧ್ಯಯನ ಮನುಕುಲ ಅಧ್ಯಯನ ಮಾಡಿದ್ದಕ್ಕೆ ಸರಿಸಮವಾಗಿರುತ್ತದೆ ಎಂದು ಹೇಳಿದರು.

ಪಾಶ್ಚಾತ್ಯ ಮಾದರಿಗಳೇ ವಿಜೃಂಭಿಸುತ್ತಿರುವ ಈ ದಿನಗಳಲ್ಲಿ ದೇಶಿಯ ಅಧ್ಯಯನ ಕುಸಿಯುತ್ತಿದೆ. ಬುಡಕಟ್ಟು ಸಮುದಾಯಗಳ ಮೇಲೂ ಆಧುನಿಕತೆಯ ಗಂಭೀರ ಪರಿಣಾಮವಾಗುತ್ತಿದೆ. ಅವರ ಬದುಕು ಅನಿವಾರ್ಯತೆಗೆ ಸಿಲುಕಿ ದ್ವಂದ್ವತೆಯಲ್ಲಿದೆ. ಹಿಂದೆ ಶುದ್ದ ಸಂಸ್ಕೃತಿಯನ್ನು ಆದಿವಾಸಿಗಳ ಮೂಲಕ ಲಭಿಸುತ್ತಿತ್ತು. ಈಗ ಅದು ಕಾಣೆಯಾಗಿದೆ. ಬ್ರಿಟಿಷ್ ಕಾಲದಿಂದಲೇ ಅರಣ್ಯ ಕಾಯ್ದೆಯ ಮೂಲಕ ಆದಿವಾಸಿಗಳ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ಕಸಿಯುವ ಕೆಲಸ ವಾಗುತ್ತಿದೆ ಎಂದರು.

ಬುಡಕಟ್ಟು ಸಮುದಾಯದಲ್ಲಿ ಅಗಾಧವಾದ ನೆನಪಿನ ಶಕ್ತಿ ಇತ್ತು. ಸಾವಿರಾರು ಕಥೆ, ಪಾಡ್ದನಗಳನ್ನು ಅವರು ನೆನಪಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ೩೫೦ಕ್ಕೂ ಹೆಚ್ಚು ಅಹಾರ ಪದಾರ್ಥಗಳನ್ನು ಸೇವಿಸಿ, ದೇಹಾರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ನೂರು ವರ್ಷ ಬದುಕುತ್ತಿದ್ದರು. ಇಂದು ಆಧುನಿಕ ಜೀವನ ಶೈಲಿ, ಸೀಮಿತ ಆಹಾರ ಕ್ರಮದಿಂದ ೫೦-೭೦ ವರ್ಷದೊಳಗೆ ಮನುಷ್ಯ ಸಾಯುವ ಸ್ಥಿತಿಗೆ ಬಂದಿದೆ ಎಂದರು.

ಬುಡಕಟ್ಟುಗಳ ಮೂಲ ಸಂಸ್ಕೃತಿ ಹುಡುಕುವುದು ಕಷ್ಟವಾಗಿದೆ. ಆದರೂ ಈ ಸಂದರ್ಭದಲ್ಲಿ ಆದಿವಾಸಿಗಳ ಪಾರಂಪರಿಕವಾದ ಜ್ಞಾನವನ್ನು ಸಂಗ್ರಹಿಸುವ, ಸದ್ಬಳಕೆ ಮಾಡುವ ಕೆಲಸವಾಗಬೇಕು. ಇವತ್ತಿನ ವಿದ್ಯುನ್ಮಾನ ಯುಗದಲ್ಲಿ ನೆನಪಿನ ಶಕ್ತಿಯೇ ಕಡಿಮೆಯಾಗುತ್ತಿದೆ. ಆಯುಷು ಕಿರಿದಾಗುತ್ತಿದೆ. ಅನಾರೋಗ್ಯಗಳು ದಾಳಿ ಇಡುತ್ತಿದೆ. ನಗರೀಕರಣದ ಈ ದಿನಗಳಲ್ಲಿ ಬುಡಕಟ್ಟು ಹಾಗೂ ಜನಪದೀಯರು ಅನಿವಾರ್ಯ ಎನಿಸಲ್ಪಡುತ್ತಿದ್ದಾರೆ. ಅವರ ಅಮೂಲ್ಯವಾದ ಜ್ಞಾನಶಾಖೆಗಳನ್ನು ತಿಳಿದುಕೊಳ್ಳುವ ಕೆಲಸ ಇಂದು ಆಗಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಲ್ಲಿ ನಮ್ಮ ನಿಜವಾದ ನಾಗರಿಕತೆಯನ್ನು ಮರೆಯುತ್ತಿದ್ದೇವೆ. ಭಾರತೀಯ ಸಂಸ್ಕೃತಿಯ ನಿಜವಾದ ಅರ್ಥ ತಿಳಿದುಕೊಳ್ಳಬೇಕಿದ್ದರೆ ಬುಡಕಟ್ಟು, ಜನಪದೀಯರನ್ನೇ ಅವಲಂಬಿಸಬೇಕು ಎಂದರು.

ಯುವ ಉದ್ಯಮಿ ಕಾರ್ತಿಕೇಯ ಮಧ್ಯಸ್ಥ ಉಪಸ್ಥಿತರಿದ್ದರು. ತೃತೀಯ ಬಿ.ಎ ವಿದ್ಯಾರ್ಥಿಯನಿಯರಾದ ಪ್ರಜ್ಞಾ, ಶತಿಲಾ, ಚೈತ್ರಾ, ಪ್ರಮೀಳಾ, ದಿವ್ಯಾರಾಣಿ ಸೋಲಿಗರ ಪ್ರಾರ್ಥನೆ ಹಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ|ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕ ಪ್ರೋ|ಜಿ.ಉದಯಕುಮಾರ್ ಪ್ರಾಸ್ತಾವಿಕ ಮಾತುಗಳ್ನಾಡಿದರು.

ದ್ವಿತೀಯ ಬಿ.ಎ ವಿದ್ಯಾರ್ಥಿನಿ ಪ್ರಿಯಾಂಕ ಪರಿಚಯಿಸಿ, ಪ.ಪೂ.ಕಾಲೇಜಿನ ಪ್ರಾಂಶುಪಾಲ ಜಿ.ಎಂ.ಗೊಂಡ ವಂದಿಸಿದರು. ರಾಜ್ಯ ಶಾಸ್ತ್ರ ಪ್ರಾಧ್ಯಾಪಕ ಪ್ರೋ|ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಅಪೂರ್ವ ವಸ್ತುಗಳ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಪ್ರಾಚೀನ ವಸ್ತುಗಳ ಪ್ರದರ್ಶನ, ಜನಪದ ಹಾಗೂ ಬುಡಕಟ್ಟು ಸಮುದಾಯಕ್ಕೆ ಸಂಬಂಧಪಟ್ಟ ಛಾಯಾಚಿತ್ರ ಪ್ರದರ್ಶನ, ಅಂಚೆಚೀಟಿ, ನಾಣ್ಯ ಪ್ರದರ್ಶನ ಗಮನ ಸಳೆಯಿತು.

Write A Comment