ಕನ್ನಡ ವಾರ್ತೆಗಳು

ಪಿಏಫ್ ಪಡೆಯಲು ವಯೋಮಿತಿ 58 ರಿಂದ 60 ಎರಿಕೆಗೆ ಇಪಿಎಫ್ಒ ಶೀಘ್ರ ತೀರ್ಮಾನಕ್ಕೆ ನಿರ್ಧಾರ.

Pinterest LinkedIn Tumblr

cash-generic_650x400_71422806584

ನವದೆಹಲಿ, ಫೆ. 16 : ಕಾರ್ಮಿಕರ ಭವಿಷ್ಯ ನಿಧಿ ಪಡೆಯುವ ವಯೋಮಿತಿಯಲ್ಲಿ ಏರಿಕೆ ಮಾಡಬೇಕೆಂಬ ಪ್ರಸ್ತಾವನೆಗೆ ಒಪ್ಪಿಗೆ ಸಿಗುವ ಲಕ್ಷಣಗಳು ಗೋಚರವಾಗಿವೆ.
ಪಿಂಚಣಿ ಪಡೆಯುವ ವಯೋಮಿತಿಯನ್ನು 58 ರಿಂದ 60ಕ್ಕೆ ಏರಿಸಬೇಕು ಎಂಬ ಪ್ರಸ್ತಾವನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾರ್ಮಿಕರ ಭವಿಷ್ಯ ನಿಧಿ ಇಲಾಖೆ (ಇಪಿಎಫ್ಒ) ಶೀಘ್ರ ತೀರ್ಮಾನ ತೆಗೆದುಕೊಳ್ಳಲಿದೆ.

ಸದ್ಯ ಪಿಎಫ್ ಅವಧಿ 58 ವರ್ಷಕ್ಕೆ ಕೊನೆಗೊಳ್ಳುತ್ತಿದೆ. ಆ ಬಳಿಕ ಪಿಂಚಣಿ ನೀಡಲಾಗುತ್ತಿದೆ. ಆದರೆ ಈ ಸೌಲಭ್ಯ ಜಾರಿಗೆ ಬಂದರೆ 60 ವರ್ಷದವರೆಗೆ ಕೆಲಸ ಮಾಡುವ ಕಾರ್ಮಿಕರು ಹಣದ ಹೂಡಿಕೆಯನ್ನು ಮುಂದುವರಿಸಬಹುದು. ಅಲ್ಲದೇ 58 ವರ್ಷದ ನಂತರ ಹೂಡಿಕೆ ಮಾಡಿದ ಹಣಕ್ಕೆ ಪ್ರೋತ್ಸಾಹ ಧನ ಸಹ ನೀಡಲಾಗುವುದು. ಈ ಬಗ್ಗೆ ಅಧಿಕೃತ ನಿರ್ಧಾರ ತೆಗೆದುಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ. ಪ್ರೋತ್ಸಾಹ ಧನ ನೀಡಿಕೆ ಸೌಲಭ್ಯ ವಿಸ್ತರಣೆ ಜವಾಬ್ದಾರಿ ಇಪಿಎಫ್ ಒದ ವಿಮಾ ನಿಗಮದ ಮೇಲಿರುತ್ತದೆ ಎಂದು ಇಪಿಎಫ್ ಒದ ಪ್ರಕಟಣೆ ತಿಳಿಸಿದೆ.

Write A Comment