ಕನ್ನಡ ವಾರ್ತೆಗಳು

ರೈಲಿನಲ್ಲಿ ಮದ್ಯ ಸಾಗಾಟ: ಆರೋಪಿ ಪರಾರಿ, ಮದ್ಯ ವಶ

Pinterest LinkedIn Tumblr

liquor_bottles_danger

(ಸಾಂದರ್ಭಿಕ ಚಿತ್ರ)

ಉಡುಪಿ: ಕೊಚ್ಚುವೇಲಿ ಎಕ್ಸ್‌ಪ್ರೆಸ್ ರೈಲಿನ ಮೂಲಕ ಗೋವಾದಿಂದ ಕೇರಳಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 23 ಸಾವಿರ ರೂ. ಮೌಲ್ಯದ 22.500 ಲೀ. ಮದ್ಯವನ್ನು ಉಡುಪಿ ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಉಡುಪಿ ಉಪ ವಿಭಾಗದ ಉಪ ಅಧೀಕ್ಷಕರ ನೇತೃತ್ವದ ತಂಡ ಅಕ್ರಮ ಮದ್ಯ ಪತ್ತೆ ಹಚ್ಚಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತ ಕೆ.ಎಸ್. ಮುರಳಿ ಆದೇಶದಂತೆ ಉಡುಪಿ ಉಪ ವಿಭಾಗದ ಉಪ ಅಧೀಕ್ಷಕ ಕೆ. ವಿನೋದ್ ಕುಮಾರ್ ನೇತೃತ್ವದಲ್ಲಿ ರೈಲು ತಪಾಸಣೆ ನಡೆಸಲಾಗಿತ್ತು.

ಕಾರ‌್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕಿ ಸೌಮ್ಯಲತಾ ಎನ್., ಅಬಕಾರಿ ಉಪ ನಿರೀಕ್ಷಕ ಕೆ. ನಾರಾಯಣ್, ನಿತ್ಯಾನಂದ್, ಎ. ಅರವಿಂದ, ರಕ್ಷಕರಾದ ಕೃಷ್ಣ, ಸುಧಾಕರ್, ಹರಿಕೃಷ್ಣ, ರಾಘವೇಂದ್ರ, ವಾಹನ ಚಾಲಕರಾದ ಬಿ.ಕೆ. ಚೆನ್ನಪ್ಪ, ಸತೀಶ್, ಪ್ರಕಾಶ್ ಪಾಲ್ಗೊಂಡಿದ್ದರು. ಅಬಕಾರಿ ನಿರೀಕ್ಷಕಿ ಸೌಮ್ಯಲತಾ ಎನ್. ಮುಂದಿನ ತನಿಖೆ ನಡೆಸುತ್ತಿದ್ದಾರೆ.

Write A Comment