ಕನ್ನಡ ವಾರ್ತೆಗಳು

ಶಂಕರನಾರಾಯಣ ಪೊಲೀಸರ ಕಾರ್ಯಾಚರಣೆ; ನಾಲ್ವರು ಅಡಿಕೆ ಕಳ್ಳರ ಬಂಧನ

Pinterest LinkedIn Tumblr

theft_crime_1

ಕುಂದಾಪುರ: ತಾಲೂಕಿನಲ್ಲಿ ವಿವಿಧೆಡೆ ಕಳೆದ ಕೆಲವು ಸಮಯದಿಂದ ಮನೆಗಳಿಗೆ ರಾತ್ರಿ ವೇಳೆ ನುಗ್ಗಿ ಅಡಕೆ ಕಳವು ಕತ್ಯ ನಡೆಸುವ ಜಾಲ ಬೇಧಿಸಿರುವ ಕುಂದಾಪುರ ಮತ್ತು ಶಂಕರನಾರಾಯಣ ಪೊಲೀಸರು ಕುಂದಾಪುರ ಪೊಲೀಸ್ ವತ್ತನಿರೀಕ್ಷಕ ದಿವಾಕರ್ ನೇತತ್ವದಲ್ಲಿ ನಾಲ್ವರನ್ನು ಬಂಧಿಸಿದ್ದಾರೆ. ಅನುಮಾನದ ನೆಲೆಯಲ್ಲಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ ಸಂದರ್ಭ ಅಡಕೆ ಕಳವು ಜಾಲ ಬೆಳಕಿಗೆ ಬಂದಿದೆ.

ಬಂಧಿತರು ಗೋಪಾಲ ಮೊಗವೀರ ಕಾವ್ರಾಡಿ, ಶಂಕರ ಸೌಡ, ಹರೀಶ್ ಬ್ರಹ್ಮಾವರ ಮತ್ತು ವಿಜಯ ಬ್ರಹ್ಮಾವರ ಎಂದು ಗುರುತಿಸಲಾಗಿದೆ. ಆರೋಪಿಗಳ ಪೈಕಿ ವಿಜಯ ಎಂಬಾತ ಸ್ವಂತದ್ದಾದ 407 ಹೊಂದಿದ್ದು ಅಡಕೆ ಕಳವು ಮಾಡುವುದು ಇವರು ಉದ್ಯೋಗವನ್ನಾಗಿರಿಸಿಕೊಂಡಿದ್ದರು ಎನ್ನಲಾಗಿದೆ. ತಾಲೂಕಿನಲ್ಲಿ ಈವರೆಗೆ ನಡೆದಿರುವ 36 ಅಡಕೆ ಕಳವು ಪ್ರಕರಣಗಳಲ್ಲಿ 26 ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಅಡಕೆ ಕಳವು ಕತ್ಯದೊಂದಿಗೆ ಜಿಲ್ಲೆಯ ವಿವಿದೆಡೆಯ ದೇಗುಲಗಳ ಕಾಣಿಕೆ ಹುಂಡಿ(7 ಕಡೆ) ಕಳವುಗೈದಿರುವುದು ಬೆಳಕಿಗೆ ಬಂದಿದೆ. 2 ಕಡೆ ಮನೆಗೆ ನುಗ್ಗಿ ಕಳವಿಗೆ ಯತ್ನ ನಡೆಸಿದ್ದಾರೆ.

ಆರೋಪಿಗಳಿಂದ 407 ಹಾಗೂ 56 ಸಾವಿರ ರೂಪಾಯಿ ಮೌಲ್ಯದ ಅಡಕೆ ಸ್ವಾಧೀನಪಡಿಸಿಕೊಳ್ಳಲಾಗಿದೆ.

Write A Comment