ಕನ್ನಡ ವಾರ್ತೆಗಳು

ಶಾರದಾ ವಿದ್ಯಾಲಯ ವಿದ್ಯಾರ್ಥಿಗಳಿಂದ “ಆರ್ಟ್ ಫ್ಲ್ಯಾಶ್” ಪ್ರದರ್ಶನ.

Pinterest LinkedIn Tumblr

sharada_college_photo_1a

ಮಂಗಳೂರು,ಫೆ.07 : ನಗರದ ಶಾರದಾ ವಿದ್ಯಾಲಯ ಸಂಸ್ಥೆಯ ಧ್ಯಾನ ಮಂದಿರದಲ್ಲಿ ವಿಧ್ಯಾರ್ಥಿಗಳಿಂದ ರಚಿತವಾದ ಅನನ್ಯ ಕಲೆಗಳ “ಆರ್ಟ್ ಫ್ಲಾಶ್” ಎಂಬ ಕಲಾ ಪ್ರದರ್ಶನದ ಉದ್ಘಾಟನೆಯನ್ನು ಶಾರದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪುರಾಣಿಕ್ ಅವರು ನೆರವೇರಿಸಿದರು.

ಪೆನ್ಸಿಲ್ ಡ್ರಾಯಿಂಗ್, ಮುಳ್ಳು ವರ್ಣಚಿತ್ರಗಳು, ತೈಲ ವರ್ಣಚಿತ್ರಗಳು, ಇದ್ದಿಲು ಕೃತಿಗಳು, ಪೆನ್ ಡಾಟ್ ಕೃತಿಗಳು, ತರ್ಮಪೋರಂ ಕೃತಿಗಳು, ಪ್ಯಾರಿಸ್ ಪ್ಲಾಸ್ಟರ್ ಕೆಲಸ ಮತ್ತು ಗಾಜಿನ ವರ್ಣಚಿತ್ರಗಳು ಸೇರಿದಂತೆ ವಿವಿಧ ರೀತಿಯ ಕಲೆಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

sharada_college_photo_9 sharada_college_photo_2 sharada_college_photo_3 sharada_college_photo_4 sharada_college_photo_5a sharada_college_photo_6 sharada_college_photo_8

ವಿಶೇಷವಾಗಿ ಹಡಗು, ಹೂಕುಂಡದಲ್ಲಿರುವ ಕಲೆ, ಯಕ್ಷಗಾನ ರುಮಾಲು, ಗೋಡೆಯ ನೆರಿಗೆ ಇತ್ಯಾದಿ ಮಾದರಿಗಳು ಪ್ರದರ್ಶಿಸಲಾಯಿತು

ಶಾರದಾ ಪ್ರೌಡ ಶಾಲೆಯ ಪ್ರಾಂಶುಪಾಲೆ ಸುನೀತಾ ವಿ, ಶಾರದಾ ಪದವಿ ಪೂರ್ವ ಕಾಲೇಜ್, ಪ್ರಾಂಶುಪಾಲ ದಯಾನಂದ ಕಟೀಲು, ಕಲಾ ಶಿಕ್ಷಕರಾದ ಸುರೇಶ್ ಕೆ ಈ ಸಂಧರ್ಭ್ದದಲ್ಲಿ ಉಪಸ್ಥಿತರಿದ್ದರು.

Write A Comment