ಮಂಗಳೂರು,ಫೆ.05: ಇಂದಿನ ಪದವಿ ವಿದಾರ್ಥಿಗಳು ತಾವು ಅಧ್ಯಯನ ಮಾಡುತ್ತಿರುವ ವಿಷಯಗಳ ಪ್ರಾಥಮಿಕ ಮಾಹಿತಿ ಹಾಗೂ ವಿಚಾರಗಳನ್ನು ಚನ್ನಾಗಿ ತಿಳಿದುಕೊಂಡಲ್ಲಿ ಮುಂದಿನ ಶಿಕ್ಷಣ ಹಾಗೂ ವೃತ್ತಿಯಲ್ಲಿ ಯಶಸ್ಸು ಸಾಧಿಸಬಹುದು ಎಂದು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಸಂಚಾಲಕರಾದ ಶ್ರೀ. ಎಂ ಪದ್ಮನಾಭ ಪೈಯವರು ತಿಳಿಸಿದರು ಅವರು ಬೆಸೆಂಟ್ ಮಹಿಳಾ ಕಾಲೇಜಿನ 38ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಒಳ್ಳೆಯ ವೃತ್ತಿಯನ್ನು ಪಡೆಯಲು ಸಂವಹನ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಸಹ ಅತೀ ಮುಖ್ಯ ಎಂದರು. ಪದವಿ ಶಿಕ್ಷಣದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದು ಮುಂದಿನ ಓದು ಅಥವಾ ವೃತ್ತಿ ಜೀವನಕ್ಕೆ ಪೂರಕ ಎಂದು ಅಭಿಪ್ರಾಯಪಟ್ಟರು. ಯವುದೇ ಸಾಧನೆಯನ್ನು ಮಾಡಲು ಸ್ವ ಉತ್ತೇಜನದ ಅಗತ್ಯವಿದೆ. ಬೇಕಾದ ಪ್ರೋತ್ಸಾಹವನ್ನು ಇತರರಿಂದ ನಿರೀಕ್ಷಿಸುತ್ತಾ ಇದ್ದರೆ ಹಲವಾರು ಅವಕಾಶಗಳು ಕೈ ತಪ್ಪಬಹುದು ಹಾಗಾಗಿ ನಮ್ಮನ್ನು ನಾವೇ ಹುರಿದುಂಬಿಸುತ್ತಾ ಇರುವುದು ಅಗತ್ಯ ಎಂದರು. ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪದವಿ ಸಾಲುವುದಿಲ್ಲ. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಶಿಕ್ಷಣವನ್ನು ಮುಂದುವರಿಸುತ್ತಾ ಇರಬೇಕು ಎಂದು ತಿಳಿಸಿದರು. ಬೆಸೆಂಟ್ ಕಾಲೇಜಿನ ಶಿಸ್ತು ಬದ್ಧ ವಿದ್ಯಾರ್ಥಿಗಳನ್ನು ಪ್ರಶಂಸಿಸುತ್ತಾ ಸಮಾಜಕ್ಕೆ ಹಲವಾರು ಪ್ರತಿಭಾನ್ವಿತ ಮಹಿಳೆಯರನ್ನು ಕೊಟ್ಟ ಕಾಲೇಜು ಇದು ಎಂದರು.
ವಿಮೆನ್ಸ್ ನ್ಯಾಷನಲ್ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾದ ಶ್ರೀ ಮಣೇಲ್ ಅಣ್ಣಪ್ಪ ನಾಯಕ್ ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಬೆಸೆಂಟ್ ಕಾಲೇಜಿನ ಧ್ಯೇಯವಾಗಿದೆ. ಅನಿಬೆಸೆಂಟ್ ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು ಇಲ್ಲಿ ಅವುಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂದರು.
ಕಾಲೇಜಿನ ಸಂಚಾಲಕರಾದ ಶ್ರೀ.ದೇವಾನಂದ ಪೈ, ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲೆ ಡಾ.ಸುಧಾ ಕೆ ಕಾಲೇಜಿನ ವರದಿ ವಾಚಿಸಿದರು. ದೀಪ್ತಿ ಜ್ಯೋತಿ ಡಿ’ಕುನ್ಹಾ ವಿದ್ಯಾರ್ಥಿ ಸಂಘದ ಚಟುವಟಿಕೆಗಳ ವರದಿ ವಿವರಿಸಿದರು. ಕಳೆದ ಸಾಲಿನ ವಿದ್ಯಾರ್ಥಿ ನಾಯಕಿ ನಿಹಾರಿಕ ಈ ವರ್ಷದ ವಿದ್ಯಾರ್ಥಿ ನಾಯಕಿ ನಿಖಿತಾ ಎಂ ಸುವರ್ಣ ಕಾಲೇಜಿಗೆ ಕೃತಜ್ಞತೆ ಸಲ್ಲಿಸಿದರು. ಶ್ರೀಮತಿ ರವಿಪ್ರಭಾ ಪ್ರತಿಭಾನ್ವಿತ ವಿದ್ಯಾರ್ಥಿಗಳ ವಿದ್ಯಾರ್ಥಿಗಳ ಪಟ್ಟಿ ಓದಿದರು. ಶ್ರೀಮತಿ ಎಂ ಪ್ರಿಯಾ ಪಿ. ಪೈ ಶೈಕ್ಷಣಿಕ ವಿಷಯಗಳಲ್ಲಿ ಮುಂಜೂಣಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.












































