ಕನ್ನಡ ವಾರ್ತೆಗಳು

ಮುಕ್ಕಾ ಸೀ ಫುಡ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಜಾಗತಿಕ ಮನ್ನಣೆ

Pinterest LinkedIn Tumblr

mukka_sea_food_photo

ಮಂಗಳೂರು, ಫೆ. 5 : ಫಿಷ್‌ಮೀಲ್, ಫಿಷ್‌ಆಯಿಲ್ ಕ್ಷೇತ್ರ ಬಯಸುವುದು ಅತ್ಯುತ್ತಮ ಗುಣಮಟ್ಟ. ಇದನ್ನು ಸಾಧಿಸಿ, ಜಗತ್ತಿನ ನಾನಾ ಭಾಗಗಳಿಗೆ ಈ ಉತ್ಪನ್ನಗಳನ್ನು ರವಾನಿಸಿ ಸೈ ಎನಿಸಿಕೊಂಡಿರುವ ಮಂಗಳೂರಿನ ಮುಕ್ಕಾ ಸೀ ಫುಡ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ಆಹಾರ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಗತ್ಯವಾದ ಹಜಾರ್ಡ್ ಅನಲಿಸಿಸ್ ಆಂಡ್ ಕ್ರಿಟಿಕಲ್ ಕಂಟ್ರೋಲ್ ಪಾಯಿಂಟ್ (ಎಚ್‌ಎಸಿಸಿಪಿ) ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.

ಗುಣಮಟ್ಟಕ್ಕೆ ಅತ್ಯಂತ ಹೆಚ್ಚಿನ ಗಮನ ಹರಿಸಿದ್ದರಿಂದಲೇ ರಫ್ತು ಮಾಡುವ ಮೀನು, ಶೀತಲೀಕರಿಸಿದ ಮತ್ತು ಸಂಸ್ಕರಿತ ಮೀನಿನ ಉತ್ಪನ್ನಗಳನ್ನು ಪರಿಶೀಲಿಸುವ ರಫ್ತು ಪರೀಕ್ಷಾ ಏಜೆನ್ಸಿಯಿಂದ (ಎಕ್ಸ್‌ಪೋರ್ಟ್ ಇನ್ಸ್‌ಪೆಕ್ಷನ್ ಏಜೆನ್ಸಿ) ಮಾನ್ಯತೆ ಪಡೆದ ದಕ್ಷಿಣ ಭಾರತದ ಏಕೈಕ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಕಂಪನಿಯ ನಿರ್ದೇಶಕ ಕೆ.ಮೊಹಮ್ಮದ್ ಹ್ಯಾರಿಸ್ ರಾಷ್ಟ್ರಪತಿಯವರಿಂದ ಪ್ರಶಸ್ತಿ ಸ್ವೀಕರಿಸಿದರು.

ಕೇಂದ್ರ ಸರ್ಕಾರದ ವಿದೇಶ ವ್ಯಾಪಾರ ಮಹಾನಿರ್ದೇಶನಾಲಯದಿಂದ (ಡಿಜಿಎಫ್‌ಟಿ) ರಫ್ತು ಮತ್ತು ಉತ್ಪಾದಕ ರಫ್ತುದಾರ (ಎಕ್ಸ್‌ಪೋರ್ಟ್ ಹೌಸ್- ಮ್ಯಾನುಫೆಕ್ಟರರ್ ಎಕ್ಸ್‌ಪೋರ್ಟರ್) ಎಂಬ ಮಾನ್ಯತೆ ಪಡೆದಿರುವ ಕಂಪನಿ, ನೋಂದಾಯಿತ ಸಣ್ಣ ಪ್ರಮಾಣದ ಸಂಸ್ಥೆ. ಕರ್ನಾಟಕ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯದಿಂದ ಪ್ರಮಾಣಪತ್ರ ಪಡೆದಿದ್ದು, ಎಫ್‌ಕೆಸಿಸಿಐನಿಂದ 2011ರಲ್ಲಿ ಮತ್ತು 2013ರಲ್ಲಿ ಪ್ರತಿಷ್ಠಿತ “ಎಕ್ಸ್‌ಪೋರ್ಟ್ ಎಕ್ಸಲೆನ್ಸ್ ಅವಾರ್ಡ್” ಪಡೆದಿದೆ. ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದಿಂದ 2011-12 ಮತ್ತು 2012-13ನೇ ಸಾಲಿನ ಎಕ್ಸ್‌ಪೋರ್ಟ್ ಅವಾರ್ಡ್ ಗೋಲ್ಡ್ ಪ್ರಶಸ್ತಿ ಗಳಿಸಿದೆ. ಒಣಗಿಸಿದ ಸಾಗರ ಉತ್ಪನ್ನಗಳ ಕ್ಷೇತ್ರದಲ್ಲಿ 2011-12ನೇ ಸಾಲಿನಲ್ಲಿ ಎಂಪೆಡಾದಿಂದ ಅತ್ಯುತ್ತಮ ರಫ್ತು ಸಾಧನೆ ಪ್ರಶಸ್ತಿಗೂ ಪಾತ್ರವಾಗಿದೆ.

“ಗುಣಮಟ್ಟ ಎಂಬುದು ಒಂದು ಕ್ರಿಯೆ ಅಲ್ಲ, ಅದೊಂದು ಹವ್ಯಾಸ’ ಎಂಬುದು ಕಂಪನಿಯ ಧ್ಯೇಯ. ಹೀಗಾಗಿಯೇ ಕಂಪನಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಜಾಗತಿಕ ಮಟ್ಟದ ಗುಣಮಟ್ಟವನ್ನು ಕಾಯ್ದುಕೊಂಡು ಬಂದಿದೆ. ಗುಣಮಟ್ಟ ಪರೀಕ್ಷಕರ ನಿರಂತರ ತಪಾಸಣೆ, ಗುಣಮಟ್ಟ ಕಾಯ್ದುಕೊಳ್ಳುವಿಕೆಗೆ ಪ್ರಥಮ ಆದ್ಯತೆಗಳಿಂದಾಗಿ ಇಂದು ಕಂಪನಿಯ ಉತ್ಪನ್ನಗಳು ಮಧ್ಯಪ್ರಾಚ್ಯ, ಆಸ್ಟ್ರೇಲಿಯಾ, ಥಾಯ್ಲೆಂಡ್, ಕೊರಿಯಾ, ಬಾಂಗ್ಲಾದೇಶ, ತೈವಾನ್, ಚಿಲಿ, ಟರ್ಕಿ, ಜಪಾನ್, ದಕ್ಷಿಣ ಅಮೆರಿಕ, ವಿಯೆಟ್ನಾಂಗಳಿಗೆ ರಫ್ತಾಗುತ್ತಿವೆ. ದಕ್ಷಿಣ ಭಾರತದಲ್ಲಂತೂ ಕಂಪನಿಯ ಉತ್ಪನ್ನಗಳು ಮನೆಮಾತು.

1960ರಲ್ಲಿ ಕಲಂದನ್ ಅಬ್ದುಲ್ ರಜಾಕ್ ಅವರಿಂದ ಸ್ಥಾಪನೆಗೊಂಡ ಕಂಪನಿ ಇಂದು ಅಂತರರಾಷ್ಟ್ರೀಯ ಫಿಷ್‌ಮಿಲ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಇದು ಈಗಾಗಲೇ ಅತ್ಯಂತ ದೊಡ್ಡ ಫಿಷ್‌ಮೀಲ್ ಮತ್ತು ಫಿಷ್‌ಆಯಿಲ್ ಉತ್ಪಾದನೆ ಮತ್ತು ರಫ್ತು ಕಂಪನಿ ಎಂಬ ಹೆಗ್ಗಳಿಕೆ ಗಳಿಸಿಕೊಂಡಿದೆ. ಕಂಪನಿಯ ಕಾರ್ಪೊರೇಟ್ ಕಚೇರಿ ಮಂಗಳೂರಿನಲ್ಲಿದ್ದು, ಮಂಗಳೂರು ಮಾತ್ರವಲ್ಲದೆ, ಕೇರಳ, ತಮಿಳುನಾಡು ಮತ್ತು ಗುಜರಾತ್‌ಗಳಲ್ಲಿ ಕಂಪನಿಯ ತಯಾರಿಕಾ ಘಟಕಗಳಿವೆ. ಈಚೆಗೆ ಶಾರ್ಜಾದಲ್ಲೂ ಕಂಪನಿಯ ಕಾರ್ಯಾಚರಣೆ ಆರಂಭವಾಗಿದೆ. ಶಾರ್ಜಾದ ಹರ್ಮಿಯಾ ಫ್ರೀ ಝೋನ್, ಫೇಸ್ 1ರಲ್ಲಿ ಯುನೈಟೆಡ್ ಫಿಷ್‌ಮೀಲ್ ಎಫ್‌ಜೆಡ್‌ಇ ಹೆಸರಿನಲ್ಲಿ ಫಿಷ್‌ಮೀಲ್ ಉತ್ಪಾದನಾ ಕಾರ್ಯ ಆರಂಭವಾಗಿದೆ.

ಅಧ್ಯಕ್ಷ ಕಲಂದನ್ ಅಬ್ದುಲ್ ರಜಾಕ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಂಪನಿಯ ಒಬ್ಬರು ನಿರ್ದೇಶಕರು ಇಂಡಿಯನ್ ಫಿಷ್‌ಮೀಲ್ ಆಂಡ್ ಫಿಷ್ ಆಯಿಲ್ ಎಕ್ಸ್‌ಪೋರ್ಟರ್ಸ್ ಅಸೋಸಿಯೇಶನ್‌ನ ಕಾರ್ಯದರ್ಶಿ. ಮುಂದಿನ ದಿನಗಳಲ್ಲೂ ಅಗತ್ಯ ಇದ್ದವರಿಗೆ ಗುಣಮಟ್ಟದ ಫಿಷ್‌ಮೀಲ್ ಮತ್ತು ಫಿಷ್ ಆಯಿಲ್ ಪೂರೈಸುವುದು ಕಂಪನಿಯ ಬದ್ಧತೆಯಾಗಿದೆ.

Write A Comment