ಕನ್ನಡ ವಾರ್ತೆಗಳು

ಒಂದೂವರೆ ವರ್ಷದಲ್ಲಿ ಪ್ರಾಣ ಹೆಲ್ತ್ ಕೇರ್ ಸಂಸ್ಥೆಯ ನೂರಾರು ಫ್ಯಾಮಿಲಿ ಡಾಕ್ಟರ್ ಮನೆ ಮನೆಯತ್ತ

Pinterest LinkedIn Tumblr

New-psmec04DrHarsha

ಸಣ್ಣ ಕಾಯಿಲೆಗಳಿಗೂ ತಜ್ಞವೈದ್ಯರ ಬಳಿಗೆ ಹೋಗುವ ಅನಿವಾರ್ಯ ಕಾಲವಿದು. ಸಮಯ, ಹಣ ಎರಡನ್ನೂ ಹೆಚ್ಚಾಗಿಯೇ ಬಯಸುವ ಈ ವೈದ್ಯಕೀಯ ವ್ಯವಸ್ಥೆಯಿಂದ ಬದಲಾವಣೆ ಬಯಸುತ್ತಿರುವ ಮೆಟ್ರೊ ಮಂದಿ ಎದುರು ಹಳೇ ವೈದ್ಯ ಪದ್ಧತಿಯ ಹೊಸ ರೂಪವನ್ನು ತಂದಿಟ್ಟಿದೆ ಪ್ರಾಣ ಹೆಲ್ತ್ ಕೇರ್ ಸಂಸ್ಥೆ.
ಡಾ.ಹರ್ಷಾ ದೊಡ್ಡಿಹಾಳ, ಮುರುಳಿ ಶ್ರೀಧರ್, ನಾರಾಯಣ ರಾವ್ ಹಾಗೂ ಪಿ.ವಿ. ಪ್ರಸಾದ್ ಅವರ ಈ ಯೋಜನೆ ರೂಪ ಪಡೆದಿದ್ದು ಅಕ್ಟೋಬರ್ 2013ರಲ್ಲಿ. ಕೇವಲ ಒಂದೂವರೆ ವರ್ಷಗಳ ಅವಧಿಯಲ್ಲಿ ಸಂಸ್ಥೆ ನೂರಾರು ರೋಗಿಗಳ ಮನೆಗಳನ್ನು ತಲುಪಿ , ಸಾವಿರಾರು ರೋಗಿಗಳ ಮನ ಗೆದ್ದಿದೆ.
ಮನೆ ಬಾಗಿಲಿಗೆ ಬರುತ್ತಾರೆ ಫ್ಯಾಮಿಲಿ ಡಾಕ್ಟರ್.

‘ಹಿಂದಿದ್ದ ‘ಫ್ಯಾಮಿಲಿ ಡಾಕ್ಟರ್’ ಎಂಬ ಪರಿಕಲ್ಪನೆ ಇಂದು ಬಹುತೇಕ ಮಾಯವಾಗಿದೆ. ಮಾತ್ರವಲ್ಲ, ಮೆಟ್ರೊ ನಗರಗಳಲ್ಲಿ ರೋಗಿ ಹಾಗೂ ವೈದ್ಯರ ನಡುವಿನ ಸಂಬಂಧ ಬಹಳ ಯಾಂತ್ರಿಕವಾಗಿದೆ. ಈ ಕೊರತೆಗಳನ್ನು ನೀಗುವಂತೆ, ಸುಧಾರಿತ ಮಾರ್ಗಗಳ ಮೂಲಕ ನಿಮ್ಮ ಫ್ಯಾಮಿಲಿ ಡಾಕ್ಟರ್‌ನ್ನು ಮತ್ತೆ ನಿಮ್ಮನೆಯ ಬಾಗಿಲಿಗೆ ಕಳುಹಿಸುವುದು ನಮ್ಮ ಉದ್ದೇಶ’ ಎನ್ನುತ್ತಾರೆ ಈ ಪರಿಕಲ್ಪನೆಯ ಹರಿಕಾರ ಡಾ.ಹರ್ಷಾ ದೊಡ್ಡಿಹಾಳ.

ಕಳೆದ 12 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿರುವ ಅವರು ರೋಗಿಗಳ ನಾಡಿ ಮಿಡಿತದ ಜೊತೆಗೆ ಭಾವತರಂಗಗಳನ್ನೂ ಅರಿತವರು. ಮೆಟ್ರೊ ನಗರದ ರೋಗಿಗಳಿಗೆ ವೈದ್ಯರ ಬಗ್ಗೆ ಇರುವ ಅಸಂತುಷ್ಟಿಗಳನ್ನೆಲ್ಲ ಅಧ್ಯಯನ ಮಾಡಿ, ಅವರ ಮನದ ಮಾತುಗಳನ್ನು ಅರಿತುಕೊಂಡು ಮನೆ–ಮನೆಗೆ ವೈದ್ಯರನ್ನು ಕಳುಹಿಸುವ ಈ ಕೆಲಸಕ್ಕೆ ಕೈ ಹಾಕಿದ್ದಾರೆ.

ಪ್ರಾಣ ಹೆಲ್ತ್ ಕೇರ್ ವ್ಯಾಪ್ತಿ
ನೀವು ಖುದ್ದಾಗಿ ಅಥವಾ ಆನ್‌ಲೈನ್ ಮೂಲಕ ಪ್ರಾಣ ಹೆಲ್ತ್ ಕೇರ್ ಅನ್ನು ಸಂಪರ್ಕಿಸಬಹುದು. ಸುಲಭವಾಗಿ ನಿಮ್ಮ ಒಂದು ಫೋನ್ ಕರೆಗೂ ಸಹ ಈ

ತಂಡದ ಸೇವೆ ಲಭ್ಯವಾಗಲಿದೆ. ಆದ್ಯತೆಯ ಮೆರೆಗೆ ಮನೆ ಬಾಗಿಲಿಗೇ ಬರುವ ವೈದ್ಯರು, ಆರೋಗ್ಯ ತಪಾಸಣೆ ಮಾಡಿ ಸಾಧ್ಯವಿದ್ದರೆ ಅಲ್ಲಿಯೇ ಚಿಕಿತ್ಸೆ ನೀಡುತ್ತಾರೆ, ಹೆಚ್ಚಿನ ತಪಾಸಣೆಯ ಅಗತ್ಯ ಕಂಡುಬಂದರೆ ಹತ್ತಿರದ ಆಸ್ಪತ್ರೆಗೆ ಶಿಫಾರಸು ಮಾಡುತ್ತಾರೆ.

ಒಂದು ಬಾರಿ ನೀವು ಪ್ರಾಣ ಹೆಲ್ತ್ ಕೇರ್‌ನ ಸಂಪರ್ಕಕ್ಕೆ ಬಂದರೆ ನಿಮ್ಮ ವೈದ್ಯಕೀಯ ಇತಿಹಾಸ, ಕುಟುಂಬ ಇತಿಹಾಸ, ನಿಮ್ಮ ಸಾಮಾನ್ಯ ಅಲರ್ಜಿಗಳು, ರೋಗದ ಸ್ಥಿತಿ, ಸುಧಾರಣೆ ಸೇರಿದಂತೆ ಪ್ರತಿಯೊಂದು ಬೆಳವಣಿಗೆಯೂ ‘ಎಲೆಕ್ಟ್ರಾನಿಕ್ ಮೆಡಿಕಲ್ ರೆಕಾರ್ಡ್’ನಲ್ಲಿ ದಾಖಲಾಗುತ್ತ ಹೋಗುತ್ತದೆ.
ಪ್ರತಿಬಾರಿಯೂ ನಿಮ್ಮೆದುರು ಅದೇ ಪ್ರಶ್ನೆಗಳು ಬರುವುದಿಲ್ಲ ಮತ್ತು ನೀವು ಮತ್ತೆ ಮತ್ತೆ ಅದೇ ಉತ್ತರಗಳನ್ನು ಕೊಡಬೇಕಾದ ತೊಂದರೆಯೂ ಇಲ್ಲ. ಅಲ್ಲಿ ದಾಖಲಾದ ಸಂಗತಿಯನ್ನೆಲ್ಲ ವೈದ್ಯರೇ ನಿಮಗೆ ಖಚಿತಪಡಿಸುತ್ತಾರೆ ಮತ್ತು ಆ ಪ್ರಕಾರ ಚಿಕಿತ್ಸೆ ನೀಡುತ್ತಾರೆ.

ನಂಬಿಕೆಯ ಮರುಸ್ಥಾಪನೆ
ಆರೋಗ್ಯ ಸೇವೆಯ ವಾಣೀಜ್ಯಕರಣದಿಂದಾಗಿ ವೈದ್ಯಕೀಯ ಕ್ಷೇತ್ರ ಸಾಕಷ್ಟು ಯಾಂತ್ರಿಕವಾಗಿದೆ. ಇಂದು ಪ್ರತಿಯೊಂದಕ್ಕೂ ಸ್ಪೆಶಲಿಸ್ಟ್‌ಗಳ ಬಳಿಯೇ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಸಾಮಾನ್ಯ ಆರೋಗ್ಯ ಸಮಸ್ಯೆಗೆ ಯಾರನ್ನು ಕಾಣುವುದು ಎನ್ನುವುದೇ ಸಮಸ್ಯೆಯಾಗಿದೆ. ಜನರು ಆರೋಗ್ಯ ವಿಚಾರದಲ್ಲಿ ಬಹಳ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಇದನ್ನೆಲ್ಲ ಗಮನಿಸಿದ ನಂತರವೇ ನಮಗೆ ಈ ಪರಿಕಲ್ಪನೆಯ ಅಗತ್ಯದ ಬಗ್ಗೆ ಅರಿವಾದುದು. ಜನರಿಗೆ ಗುಣಮಟ್ಟದ ವೈಯಕ್ತಿಕ ವೈದ್ಯಕೀಯ ಸೇವೆ ಒದಗಿಸುವುದು ಸಂಸ್ಥೆಯ ಉದ್ದೇಶ ಎನ್ನುತ್ತಾರೆ ಸಹ ಸಂಸ್ಥಾಪಕ ನಾರಾಯಣ ರಾವ್.

ಸಂಸ್ಥೆಯ ಜನರಲ್ ಪ್ರಾಕ್ಟಿಶನರ್‌ಗಳು ತಜ್ಞ ವೈದ್ಯರ ಜೊತೆಗೂ ಸಂಪರ್ಕದಲ್ಲಿದ್ದು, ಅಗತ್ಯವಿದ್ದಲ್ಲಿ ಪರಿಣತ ವೈದ್ಯರಿಂದಲೂ ತಪಾಸಣೆಯ ಸೇವೆ ದೊರೆಯುತ್ತದೆ ಎಂಬುದು ಅವರ ವಿವರಣೆ.

ಫೋನ್ ಮೂಲಕವೂ ಸೇವೆ ಲಭ್ಯ
ಸಣ್ಣ-ಪುಟ್ಟ ಸಮಸ್ಯೆಗಳಿಗೆ ಫೋನ್ ಮೂಲಕವೂ ಪರಿಹಾರ ಕಂಡುಕೊಳ್ಳಬಹುದು. ಅಲ್ಲದೇ,  ಯಾವುದೇ ತುರ್ತು ಸೇವೆಯ ಅಗತ್ಯವಿದ್ದಾಗ ಮನೆಯ ಹತ್ತಿರದ ಆಸ್ಪತ್ರೆಗಳು, ಅಲ್ಲಿ ಲಭ್ಯವಿರುವ ಚಿಕಿತ್ಸೆಗಳ ಮಾಹಿತಿಯೂ ಸಿಗುತ್ತದೆ.
ಮಾಹಿತಿಗೆ: 080 65775557, 9886309122
email – care@pranaenablers.com

Home

ಹಿರಿಯರಿಗಿದೆ ನಮ್ಮ ಅಗತ್ಯ
ಮಧುಮೇಹ, ಅಧಿಕ ರಕ್ತದ ಒತ್ತಡ, ಮೈಗ್ರೇನ್, ಬೆನ್ನು ನೋವು, ಕತ್ತು ನೋವು, ಅಲರ್ಜಿ, ಕೆಮ್ಮು–ಜ್ವರದಂಥ ಸಾಮಾನ್ಯ ಹಾಗೂ ಜೀವನಶೈಲಿ ಸಂಬಂಧಿತ ರೋಗಗಳ ಸಂಖ್ಯೆ ದ್ವಿಗುಣಗೊಂಡಿದೆ. ಜನರು ಸುಲಭವಾಗಿ ಸಿಗಬಹುದಾದ ಸಾಮಾನ್ಯ ಆರೋಗ್ಯ ಸೇವೆಗಳ ಹುಡುಕಾಟದಲ್ಲಿದ್ದಾರೆ.
ಬೆಂಗಳೂರಿನಲ್ಲಿ ಶೇ 9ರಷ್ಟು ಜನ ಹಿರಿಯ ನಾಗರಿಕರೇ (60 ಮೇಲ್ಪಟ್ಟು) ಇದ್ದಾರೆ. ಅವರಲ್ಲಿ ಶೇ 10ರಷ್ಟು ಜನರಿಗೆ ದೈಹಿಕ ಚಲನಶೀಲತೆಯ ತೊಂದರೆ ಇದೆ. ಶೇ 26.5ರಷ್ಟು ಜನರು ಮಧುಮೇಹದಿಂದ ಬಳಲುತ್ತಾರೆ ಎಂದು ಅಸೋಚಾಮ್ ವರದಿ ಹೇಳಿದೆ.
ಇದರ ಆಧಾರದ ಮೇಲೆ ಮೆಟ್ರೊ ನಗರದ ಹಿರಿಯ ಜೀವಗಳಿಗೆ ನಮ್ಮ ಅಗತ್ಯ ಹೆಚ್ಚಿದೆ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ.  ಅವರೆಲ್ಲರ ಆದ್ಯತೆಗಳನ್ನು ಸುಲಭ ಹಾಗೂ ಪರಿಣಾಮಕಾರಿ ಸೇವೆಯ ಮೂಲಕ ಪೂರೈಸುವುದೇ ನಮ್ಮ ಗುರಿ.
–ಡಾ.ಹರ್ಷಾ ದೊಡ್ಡಿಹಾಳ

Write A Comment