ಕನ್ನಡ ವಾರ್ತೆಗಳು

ಬೋವಿಕ್ಕಾನ ಕಲ್ಲು ತೂರಾಟ ಪ್ರಕರಣ : 200 ಆರೆಸ್ಸೆಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

Pinterest LinkedIn Tumblr

Rss_Bovikkana_protest

ಕಾಸರಗೋಡು, ಫೆ.3:ಕಾಸರಗೋಡಿನಲ್ಲಿ ರವಿವಾರ ನಡೆದ ದಾಂಧಲೆಯ ಬಳಿಕ ಉದ್ವಿಗ್ನಗೊಂಡಿದ್ದ ಬೋವಿಕ್ಕಾನ, ಪೊವ್ವಲ್ ಹಾಗೂ ಆರಿಕ್ಕಾಡಿ ಸಹಜ ಸ್ಥಿತಿಗೆ ಮರಳಿದೆ. ಬೋವಿಕ್ಕಾನದಲ್ಲಿ ವಿವಿಧೆಡೆ ಮನೆ, ಮಸೀದಿಗಳ ಮೇಲೆ ಕಲ್ಲೆಸೆತ, ಅಂಗಡಿಗಳಿಗೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ 200ರಷ್ಟು ಆರೆಸ್ಸೆಸ್ ಕಾರ್ಯಕರ್ತರ ವಿರುದ್ಧ ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರವಿವಾರ ಕಾಸರಗೋಡು ಸರಕಾರಿ ಕಾಲೇಜು ಮೈದಾನದಲ್ಲಿ ನಡೆದ ಆರೆಸ್ಸೆಸ್ ವಿಜಯಶಕ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮರಳುತ್ತಿದ್ದ ಆರೆಸ್ಸೆಸ್ ಕಾರ್ಯಕರ್ತರ ಮೇಲೆ ಹಾಗೂ ವಿಜಯಶಕ್ತಿ ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದ ವಾಹನವೊಂದರ ಮೇಲೆ ಪೊವ್ವಲ್ ಹಾಗೂ ಬೋವಿಕ್ಕಾನದಲ್ಲಿ ಕಲ್ಲು ತೂರಾಟ ನಡೆದಿದ್ದು, ಇದಕ್ಕೂತ್ತರವಾಗಿ ಆರೆಸ್ಸೆಸ್ ಕಾರ್ಯಕರ್ತರು ಹಲವು ಮನೆ, ವ್ಯಾಪಾರ ಸಂಸ್ಥೆಗಳ ಮೇಲೆ ಕಲ್ಲೆಸೆದು ಹಾನಿಗೊಳಿಸಿದ್ದರೆ ಎಂದು ಆರೋಪಿಸಲಾಗಿದೆ.

ಬೋವಿಕ್ಕಾನ ಪೇಟೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತರು 10ಕ್ಕೂ ಅಧಿಕ ಅಂಗಡಿಗಳಿಗೆ ನುಗ್ಗಿ ದಾಂಧಲೆ ನಡೆಸಿ, ಹಲವು ಅಂಗಡಿ, ಮನೆಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ. ಜೊತೆಗೆ ಮಸೀದಿಯೊಂದಕ್ಕೂ ಕಲ್ಲೆಸೆದಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ತಲುಪಲು ವಿಳಂಬವಾದುದರಿಂದ 2 ಗಂಟೆಗೂ ಅಧಿಕ ಸಮಯ ಬೋವಿಕ್ಕಾನದಲ್ಲಿ ದಾಂಧಲೆ ನಡೆದಿತ್ತು. ಆ ಬಳಿಕ ಸ್ಥಳಕ್ಕೆ ತಲುಪಿದ ಪೊಲೀಸರು ಲಾಠಿ ಪ್ರಹಾರ ಹಾಗೂ ಅಶ್ರುವಾಯು ಬಳಸಿ ದಾಂಧಲೆಕೋರರನ್ನು ಹತ್ತಿಕ್ಕಿದರು.

ಯುವ ಕಾಂಗ್ರೆಸ್ ಕಚೇರಿಗೆ ಹಾನಿ:

ರಾಷ್ಟ್ರೀಯ ಹೆದ್ದಾರಿ 66ರ ಆರಿಕ್ಕಾಡಿ ಬಳಿಯಿರುವ ಯುವ ಕಾಂಗ್ರೆಸ್ ಕಚೇರಿಗೆ ಆರೆಸ್ಸೆಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದಿಂದ ಕಚೇರಿ ಗಾಜಿಗೆ ಹಾನಿ ಉಂಟಾಗಿದೆ. ಘಟನಾ ಸ್ಥಳಕ್ಕೆ ಮಂಜೇಶ್ವರ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಹರ್ಷಾದ್ ವರ್ಕಾಡಿ, ಶಾನಿದ್ ಕಯ್ಯಾಂಕುಡೇಲು, ನಾಸಿರ್ ಮೊಗ್ರಾಲ್ ಮೊದಲಾದವರು ಇಂದು ಭೇಟಿ ನೀಡಿದರು. ಇದೇ ಪರಿಸರದಲ್ಲಿ ಟೆಂಪೊವೊಂದಕ್ಕೆ ಕಲ್ಲೆಸೆದು ಹಾನಿಗೊಳಿಸಿದ್ದರೆನ್ನಲಾಗಿದೆ.

ಬೋವಿಕ್ಕಾನ ಬಂದ್: ಆರೆಸ್ಸೆಸ್ ಕಾರ್ಯಕರ್ತರ ಕ್ರಮವನ್ನು ವಿರೋಧಿಸಿ ಬೋ

Write A Comment