ಕನ್ನಡ ವಾರ್ತೆಗಳು

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಂಗನವಾಡಿ ನೌಕರರ ಸಂಘದಿಂದ ಅನಿರ್ದಿಷ್ಟಾವಧಿ ಮಷ್ಕರ ಆರಂಭ

Pinterest LinkedIn Tumblr

Anganavadi_Protest_1

ಮಂಗಳೂರು, ಫೆ.3: ‘ಪೌಷ್ಟಿಕ ಆಹಾರ ಉಳಿಸಿ, ಮಕ್ಕಳು-ಬಡ ಗರ್ಭಿಣಿ- ಬಾಣಂತಿಯರನ್ನು ರಕ್ಷಿಸಿ’, ಐಸಿಡಿಎಸ್ ಯೋಜನೆಯ ಖಾಸಗೀಕರಣವನ್ನು ವಿರೋಧಿಸಿ, ಅಂಗನವಾಡಿ ಕೇಂದ್ರಗಳ ಖಾಯಮಾತಿ ಮತ್ತು ಅಂಗನವಾಡಿ ನೌಕರರ ಕನಿಷ್ಠ ಕೂಲಿಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್ (ಎಐಟಿಯುಸಿ) ದ.ಕ. ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಮಷ್ಕರ ಆರಂಭಗೊಂಡಿದೆ.

Anganavadi_Protest_2

ಮುಷ್ಕರ ಉದ್ಘಾಟಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ವಸಂತ ಆಚಾರಿ, ಜಾಗತೀಕ ರಣದ ಹಾವಳಿ ಇದೀಗ ಅಂಗನವಾಡಿ ಕೇಂದ್ರಗಳ ಮೇಲೂ ಆಗುತ್ತಿದೆ. ಅದಕ್ಕೆ ಪೂರಕ ಎಂಬಂತೆ ಐಸಿಡಿಎಸ್ ಯೋಜನೆಯನ್ನು ಮಿಷನ್ ಮೋಡ್ ಆಗಿ ಪರಿವರ್ತಿಸಲಾಗುತ್ತದೆ.

ಈಗಾಗಲೆ ರಾಜ್ಯದ ತಿಪಟೂರು, ಮೈಸೂರುಗಳಲ್ಲಿ ಪೂರ್ವ-ಪ್ರಾಥಮಿಕ ಶಿಕ್ಷಣಗಳ ಜವಾಬ್ದಾರಿಯನ್ನು ಪ್ರಥಮ್ ಮತ್ತು ಪ್ರಜಾ ಯತ್ನಗಳಿಗೆ ನೀಡಲಾಗಿದೆ. ಫೆ.15ರವೆರೆಗೂ ಅಂಗನವಾಡಿ ಕೇಂದ್ರಗಳನ್ನು ಮುಚ್ಚಿ ಜಿಲ್ಲಾಧಿಕಾರಿ ಕಚೇರಿ ಎದುರು ಮತ್ತು ಫೆ.16ರಂದು ಬೆಂಗಳೂರಿನ ಕಬ್ಬನ್ ಪಾರ್ಕ್ ಬಳಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.

Anganavadi_Protest_3

ಐಸಿಡಿಎಸ್ ಯೋಜನೆಯನ್ನು ಮಿಷನ್ ಮೋಡ್ ಆಗಿ ಪರಿವರ್ತಿಸು ವುದರಿಂದ ಅಂಗನವಾಡಿ ಕೇಂದ್ರ ಗಳಿಗೆ ಬಿಡುಗಡೆಯಾಗುವ ಪೂರ್ವ- ಪ್ರಾಥಮಿಕ ಶಿಕ್ಷಣದ ಅನುದಾನ ವನ್ನು ಖಾಸಗಿ ಕಾನ್ವೆಂಟ್‌ಗಳಿಗೆ ನೀಡಲಾಗುತ್ತದೆ. ಅಂಗನವಾಡಿ ಕಾರ್ಯ ಕರ್ತೆಯರಿಗೆ ಇತರ ಇಲಾಖೆಗಳ ಕೆಲಸ ನೀಡಲಾಗುತ್ತದೆ. ಇದನ್ನು ಖಂಡಿಸಿ ತೀವ್ರ ಸ್ವರೂಪದ ಪ್ರತಿಭಟನೆ ಮಾಡಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷೆ ರವಿಕಲಾ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಮುಖಂಡರಾದ ಯಾದವ ಶೆಟ್ಟಿ, ಬಿ.ಎಂ.ಭಟ್, ಸುನೀಲ್‌ಕುಮಾರ್ ಬಜಾಲ್, ಮುನೀರ್ ಕಾಟಿಪಳ್ಳ, ದಯಾನಂದ ಶೆಟ್ಟಿ, ಜಯಂತಿ ಶೆಟ್ಟಿ, ಶೇಖರ ಬೆಳ್ತಂಗಡಿ, ಲಿಂಗಪ್ಪ ನಂತೂರು,ವಾಸುದೇವ ಉಚ್ಚಿಲ್, ಬಾಲಕೃಷ್ಣ ಶೆಟ್ಟಿ, ಸಂಘದ ಮುಖಂಡರಾದ ಲಕ್ಷ್ಮೀ, ರಾಜೀವಿ ರೈ, ವಿಜಯಾ ಪೈ ಮೂಡುಬಿದಿರೆ, ನಿರ್ಮಲಾ ಭಟ್ ಕಟೀಲ್, ಶೋಭಾ ಮೂಡುಬಿದಿರೆ, ಯಶೋದಾ, ಗಾಯತ್ರಿದೇವಿ, ಸುಷ್ಮಾ, ಸಾವಿತ್ರಿ ಮತ್ತಿತರರು ಪಾಲ್ಗೊಂಡಿದ್ದರು.

Write A Comment