ಮಂಗಳೂರು,ಫೆ. 02 : ಎ. ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು 2001 ರಲ್ಲಿ ಮಂಗಳೂರಿನ ಕುಂಟಿಕಾನದಲ್ಲಿ ಸುಸಜ್ಜಿತ ವಿನ್ಯಾಸದ ಕಟ್ಟಡದೊಂದಿಗೆ ವಿಶ್ವದರ್ಜೆಯ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂತು.
ಕ್ಯಾನ್ಸರ್ ಈಗಿನ ಕಾಲದಲ್ಲಿ ಒಂದು ಮಾರಣಾಂತಿಕ ಸಮಸ್ಯೆ ಅಲ್ಲ. ಕ್ಯಾನ್ಸರ್ ರೋಗಿಗಳು ಸೂಕ್ತ ರೀತಿಯ ಉತ್ತಮ ಚಿಕಿತ್ಸೆ ಪಡೆದುಕೊಂಡರೆ ಅವರಿಗೆ ಉತ್ತಮ ಗುಣಮಟ್ಟದ ಜೀವನ ಸಾಗಿಸಲು ಅವಕಾಶ ದೊರೆಯುತ್ತದೆ. ಇಂದು ಎಲ್ಲಾ ರೀತಿಯ ಕ್ಯಾನ್ಸರನ್ನು ಶೇಕಡಾ ೪೫%ರಷ್ಟು ಗುಣಪಡಿಸಬಹುದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊತ್ತಮೊದಲ ಭಾರಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ಹೊಂದಿರುವ ಅಂದರೆ ಮೆಡಿಕಲ್ ಅಂಕೋಲಜಿ, ರೇಡಿಯೇಶನ್ ಅಂಕೋಲಜಿ, ಸರ್ಜಿಕಲ್ ಅಂಕೋಲಜಿ ಮತ್ತು ನ್ಯೂಕ್ಲಿಯರ್ ಮೆಡಿಸಿನ್ ವಿಭಾಗಗಳನ್ನು ಹೊಂದಿರುವ ಕೊಂಪ್ರೆಹೆನ್ಸಿವ್ ಕ್ಯಾನ್ಸರ್ ಸೆಂಟರ್ ನಿರ್ಮಿಸಿರುವ ಕೀರ್ತಿ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ್ದಾಗಿದೆ. ಎ.ಜೆ. ಆಸ್ಪತ್ರೆಯ ಅಂಕೋಲಜಿ ವಿಭಾಗದ ತಂಡದವರು ಕ್ಯಾನ್ಸರ್ ರೋಗಿಗಳಿಗೆ ತಜ್ಞ, ಸಮಗ್ರ ಮತ್ತು ಸಹಾನುಭೂತಿಯ ಕಾಳಜಿಯೊಂದಿಗೆ ಚಿಕಿತ್ಸೆಯನ್ನು ಒದಗಿಸುತ್ತಾರೆ. ನಮ್ಮ ರೋಗಿಗಳಿಗೆ ಉತ್ತಮವಾದ ಚಿಕಿತ್ಸೆಯನ್ನು ಪರಿಣಾಮಕಾರಿ ರೂಪದಲ್ಲಿ ನೀಡಿ ಅವರಿಗೆ ಉತ್ತಮ ಜೀವನ ಸಾಗಿಸಲು ಪ್ರೇರಣೆ ನೀಡುವಂತಹ ಅನುಭವವನ್ನು ದೊರಕಿಸುವುದೇ ನಮ್ಮ ಆಸ್ಪತ್ರೆಯ ಪ್ರಾಥಮಿಕ ಗುರಿಯಾಗಿದೆ.
ಪ್ರತೀ ವರ್ಷ 1.2 ಬಿಲಿಯನ್ ಜನಸಂಖ್ಯೆಗೆ, ಸುಮಾರು 1 ಮಿಲಿಯನ್ ಕ್ಯಾನ್ಸರ್ ರೋಗಿಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಜನರಲ್ಲಿ ಜಾಗ್ರತಿ ಮೂಡಿಸಿ, ರೋಗವನ್ನು ಶೀಘ್ರ ಪತ್ತೆ ಹಚ್ಚಿ, ಬಂದಂತಹ ಕಾಯಿಲೆಯನ್ನು ಗುಣಪಡಿಸುವ ಉದ್ದೇಶದಿಂದ, ವಿಶ್ವ ಕ್ಯಾನ್ಸರ್ ದಿನಾಚರಣೆ (ಫೆಬ್ರವರಿ 4, 2015) ಯ ಪ್ರಯುಕ್ತ ಎ.ಜೆ.ಆಸ್ಪತ್ರೆಯು ಉಚಿತ ಕ್ಯಾನ್ಸರ್ ಶಿಬಿರವನ್ನು ಹಮ್ಮಿಕೊಂಡಿದೆ. ಈ ಶಿಬಿರವು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆವರಣದಲ್ಲಿರುವ ಎ.ಜೆ.ಕ್ಯಾನ್ಸರ್ ಕೇಂದ್ರದಲ್ಲಿ ಬುಧವಾರ 04/02/2015 ರಿಂದ 21/02/2015ರ ತನಕ ನಡೆಯಲಿರುವುದು.
ಈ ಕೆಳಗಿನ ಸೌಲಭ್ಯಗಳು ಉಚಿತ. ನೋಂದಾವಣೆ, ಸಲಹೆ, ಸೂಚನೆ ಮತ್ತು ಜನರಲ್ ವಾರ್ಡ್ ಹಾಸಿಗೆ ವೆಚ್ಚ ಸಂಪೂರ್ಣ ಉಚಿತ. ಅಲ್ಲದೇ 25% ರಿಯಾಯಿತಿ – ಪ್ರೈವೇಟ್ ವಾರ್ಡ್ ಹಾಸಿಗೆ ವೆಚ್ಚದ ಮೇಲೆ 25% ರಿಯಾಯಿತಿ – ಎಕ್ಸ್ ರೇ, ಅಲ್ಟ್ರಾಸೌಂಡ್ ಸ್ಕ್ಯಾನ್, ಸಿ.ಟಿ. ಸ್ಕ್ಯಾನ್, ಎಮ್.ಆರ್.ಐ, ಸ್ಕ್ಯಾನ್, ಡೆಕ್ಸಾ (ಬೋನ್ ಮಿನೆರಲ್ ಡೆನ್ಸಿಟಿ) ಸ್ಕ್ಯಾನ್, ಮ್ಯಾಮೋಗ್ರಾಫಿ ಮತ್ತು ನ್ಯೂಕ್ಲಿಯರ್ ಮೆಡಿಸಿನ್ (ಬೋನ್) ಸ್ಕ್ಯಾನ್. (ಹೊರರೋಗಿ ಮತ್ತು ಒಳರೋಗಿಗಳಿಗೆ) ೨೫% ರಿಯಾಯಿತಿ – ರೇಡಿಯೇಶನ್ ಚಿಕಿತ್ಸೆಗಳಾದ ಐಎಮ್‌ಆರ್‌ಟಿ ಮತ್ತು ಐಜಿಆರ್‌ಟಿ ಚಿಕಿತ್ಸೆಯ ವೆಚ್ಚದ ಮೇಲೆ.
