ಕನ್ನಡ ವಾರ್ತೆಗಳು

‘ಮೊಹ್ತಿಶಾಮ್’ ಕಾಂಪ್ಲೆಕ್ಸೆಸ್ ಬೆಳ್ಳಿಹಬ್ಬ ಆಚರಣೆ

Pinterest LinkedIn Tumblr

Mohati_sham_Progrm_1

ಮಂಗಳೂರು : ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಹಲವಾರು ಕೊಡುಗೆಗಳನ್ನು ನಗರಕ್ಕೆ ನೀಡಿರುವ ಮೊಹ್ತಿಶಾಮ್ ಕಾಂಪ್ಲೆಕ್ಸೆಸ್ ಪ್ರೈವೇಟ್ ಲಿಮಿಟೆಡ್ ಬೆಳ್ಳಿಹಬ್ಬ ಸಂಭ್ರಮದ ಕಾರ್ಯಕ್ರಮ ಫಳ್ನೀರ್‌ನ ಎಸ್.ಎಲ್. ಮಥಾಯಸ್ ರಸ್ತೆಯ ನೂತನ ಐವರಿ ಟವರ್‌ನಲ್ಲಿ ಇಂದು ನಡೆಯಿತು. ಈ ಸಂದರ್ಭ ಐವರಿ ಟವರ್ಸ್‌ನ ಉದ್ಘಾಟನೆ ಹಾಗೂ ಇತರ ಎರಡು ವಸತಿ ಯೋಜನೆಗಳಾದ ‘ಕ್ರೆಸೆಂಟ್’ ಮತ್ತು ‘ಲೂಸೆಂಟ್’ಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

Mohati_sham_Progrm_2 Mohati_sham_Progrm_3

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ಡಾ.ಎಂ. ವೀರಪ್ಪ ಮೊಯ್ಲಿ, ಮಂಗಳೂರು ನಗರದ ಅಭಿವೃದ್ಧಿಯಲ್ಲಿ ಮೊಹ್ತಿಶಾಮ್ ಸಂಸ್ಥೆಯ ಅರ್ಶದ್ ಮತ್ತು ಅವರ ಸಹಯೋಗಿಗಳ ಕೊಡುಗೆ ಗಮನಾರ್ಹವಾದುದು. ಅವರ 25 ವರ್ಷಗಳ ಸಾಧನೆ ಐತಿಹಾಸಿಕ ಮೈಲುಗಲ್ಲು, ಮೊಹ್ತಿಶಾಮ್ ಸಂಸ್ಥೆಯ ವ್ಯಾಪ್ತಿ ಇನ್ನೂ ಬೆಳೆಯಲಿ ಎಂದು ಶುಭ ಹಾರೈಸಿದರು.

Mohati_sham_Progrm_5 Mohati_sham_Progrm_6

ಮೇಯರ್ ಮಹಾಬಲ ಮಾರ್ಲ, ಸಚಿವ ಆರ್.ವಿ.ದೇಶಪಾಂಡೆ, ಶಾಸಕರಾದ ಮೊಯ್ದಿನ್ ಬಾವಾ, ಗಣೇಶ್ ಕಾರ್ಣಿಕ್, ಕೇರಳ ಕಣ್ಣೂರು ವಿಧಾನ ಸಭಾ ಕ್ಷೇತ್ರದ ಶಾಸಕ ಅಬ್ದುಲ್ಲಾ ಕುಟ್ಟಿ, ಮಾಜಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್, ಬಿ.ಎ.ಮೊಯ್ದಿನ್, ಯೆನೆಪೊಯ ವಿವಿ ಕುಲಪತಿ ಅಬ್ದುಲ್ಲಾ ಕುಂಞಿ, ಮಾಜಿ ವಿಧಾನ ಪರಿಷತ್ ಸದಸ್ಯ ಮುಹಮ್ಮದ್ ಮಸೂದ್, ಕೆಸಿಸಿಐ ಅಧ್ಯಕ್ಷ ಬಿ.ನಿಗಂ ವಸಾನಿ, ಕ್ರೆಡೈ ಅಧ್ಯಕ್ಷ ಪುಷ್ಪರಾಜ್ ಜೈನ್, ಶಂಕರ್ ವಿಠ್ಠಲ್ ಮೋಟಾರ್ಸ್‌ನ ಡಾ.ಅರೂರ್ ಪ್ರಸಾದ್‌ರಾವ್, ಕಾರ್ಪೊರೇಟರ್ ಅಬ್ದುರ್ರವೂಫ್ ಭಾಗವಹಿಸಿದ್ದರು.

Mohati_sham_Progrm_4

ಸಂಸ್ಥೆಯ ಆಡಳಿತ ನಿರ್ದೇಶಕ ಎಸ್.ಎಂ.ಅರ್ಶದ್ ಪ್ರಾಸ್ತಾ ವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎಂ.ಸವೂದ್ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರಾಜ್ ಉಪಸ್ಥಿತರಿದ್ದರು. ಸಾಹೀಲಂ ಝಹೀರ್ ಕಾರ್ಯಕ್ರಮ ನಿರ್ವಹಿಸಿದರು.

ಅತ್ಯಾಧುನಿಕ ಸೌಲಭ್ಯಗಳಿರುವ ಐವರಿ ಟವರ್ :
ನಗರದ ಕೇಂದ್ರ ಭಾಗದಲ್ಲಿ ಐವರಿ ಟವರ್ಸ್ ನಿರ್ಮಾಣ ಗೊಂಡಿದೆ. ಅತ್ಯಾಧುನಿಕ ಸೌಲಭ್ಯಗಳಿರುವ ಫ್ಲಾಟ್‌ಗಳನ್ನು ಹೊಂದಿರುವ ಅಪಾರ್ಟ್‌ಮೆಂಟ್. ಕಾಫಿ ಶಾಪ್, ಆಯುರ್ವೇದಿಕ್ ಸ್ಪಾ, ಸುಸಜ್ಜಿತ ಜಿಮ್, ವಿದ್ಯಾರ್ಥಿ ಚಟುವಟಿಕೆಗಳಿಗೆ ಕೊಠಡಿ, ಯೋಗ ಕೊಠಡಿ, ಟೆಬಲ್ ಟೆನ್ನಿಸ್ ಕೋರ್ಟ್, ಒಳಾಂಗಣ ಕ್ರೀಡಾಂಗಣ ಮತ್ತು ಗ್ರಂಥಾಲಯವನ್ನು ಒಳಗೊಂಡಿದೆ ಎಂದು ಸಂಸ್ಥೆಯ ಸಿಇಒ ಧರ್ಮರಾಜ್ ತಿಳಿಸಿದರು.

Mohati_sham_Progrm_7 Mohati_sham_Progrm_8 Mohati_sham_Progrm_9

ಹಲವಾರು ವಿಶೇಷತೆಗಳಿಂದ ನಗರದಲ್ಲಿ ಗಮನ ಸೆಳೆ ದಿರುವ ಮೊಹ್ತಿಶಾಮ್ ಸಂಸ್ಥೆ ತನ್ನ ಕಟ್ಟಡಗಳಲ್ಲಿ ಪ್ರಮುಖವಾಗಿ ಜಲತ್ಯಾಜ್ಯ ಸಂಸ್ಕರಣೆಗೆ ಪ್ರಮುಖ ಆದ್ಯತೆ ನೀಡುತ್ತಿದೆ. ನೂತನವಾಗಿ ನಿರ್ಮಿಸಲಾಗಿರುವ ಐವೊರಿ ಟವರ್ಸ್‌ನಲ್ಲಿಯೂ ಅತ್ಯುತ್ತಮ ಜಲತ್ಯಾಜ್ಯ ಸಂಸ್ಕರಣಾ ವ್ಯವಸ್ಥೆಯನ್ನು ಮಾಡಲಾಗಿದೆ. ಇದು ಕಟ್ಟಡದಲ್ಲಿ ಶೇ. 50ರಷ್ಟು ನೀರಿನ ಉಳಿತಾಯವನ್ನು ಮಾಡುತ್ತಿದೆ. ಜಲತ್ಯಾಜ್ಯದ ನೀರನ್ನು ಸಂಸ್ಕರಿಸಿ ಆ ನೀರನ್ನು ಕೈತೋಟ ಹಾಗೂ ಶೌಚಾಲಯಗಳ ಬಳಕೆಗೆ ಉಪಯೋಗಿಸಲಾಗುತ್ತಿದೆ. ಇದ ರಿಂದಾಗಿ ಶೇ. 50ರಷ್ಟು ಮನಪಾ ನೀರಿನ ಬಳಕೆಯನ್ನು ಕಡಿಮೆ ಮಾಡಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರಾಜ್ ತಿಳಿಸಿದರು.

Mohati_sham_Progrm_10 Mohati_sham_Progrm_11

ಮಾತ್ರವಲ್ಲದೆ ಎಲ್ಲಾ ಕಟ್ಟಡಗಳಲ್ಲಿ ಸೋಲಾರ್ ಬಳಕೆಯನ್ನು ಕಡ್ಡಾಯವಾಗಿ ಮಾಡಬೇಕೆಂಬ ನಿಯಮವನ್ನು ಸಂಸ್ಥೆಯು ಪಾಲಿಸುತ್ತಿದೆ. ನೂತನ ಐವರಿ ಟವರ್ಸ್‌ನಲ್ಲಿ ಅತ್ಯುತ್ತಮ ಸೋಲಾರ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ವಿದ್ಯುತ್ ಉಪಯೋಗವಿಲ್ಲದೆ ಸೋಲಾರ್ ಬಳಕೆಯ ಮೂಲಕ ಬಿಸಿ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಮಳೆಗಾಲದ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಹೀಟ್ ಪಂಪ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ ಎಂದು ಅವರು ಹೇಳಿದರು.

Mohati_sham_Progrm_12 Mohati_sham_Progrm_13 Mohati_sham_Progrm_14 Mohati_sham_Progrm_15

ಭೂಮಿ ಖರೀದಿಗೆ ಸಾಲ :

ಭೂಮಿ ಖರೀದಿಗೆ ಸಾಲ ಒದಗಿ ಸಿದರೆ ರಿಯಲ್ ಎಸ್ಟೇಟ್ ಉದ್ಯಮ ವೇಗದಲ್ಲಿ ಬೆಳೆಯುತ್ತದೆ. ಆದುದರಿಂದ ಸಾಲ ನೀಡುವ ಬಗ್ಗೆ ಕ್ರಮ ಕೈಗೊಳ್ಳಲು ಬ್ಯಾಂಕ್‌ಗಳಿಗೆ ಸೂಚನೆ ನೀಡುವ ಶಿಫಾರಸನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಮಿತಿಯ ಅಧ್ಯಕ್ಷರೂ ಆಗಿರುವ ವೀರಪ್ಪ ಮೊಯ್ಲಿ ತಿಳಿಸಿದರು.

Write A Comment